ಮಕ್ಕಳು ಒಳ್ಳೆಯ ಶಿಕ್ಷಣ ಪಡೆದರೆ ಸಮುದಾಯ ಮುಂದೆ ಬರಲು ಸಾಧ್ಯ

0
14

ಶಹಾಬಾದ: ಹಿಂದುಳಿದ ಮಾದಿಗ ಸಮುದಾಯವು ಆರ್ಥಿಕವಾಗಿ, ಶೈಕ್ಷ ಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾದರೆ ಸಮುದಾಯದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದುಕೊಳ್ಳುವ ಅವಶ್ಯಕತೆಯಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ನಗರದ ಇಂಡಿಯಾ ಫಂಕ್ಷನ್ ಹಾಲ್‍ನಲ್ಲಿ ತಾಲೂಕಾ ಮಾದಿಗ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಾದಿಗ ಸಮಾಜದ ಹಿಂದುಳಿದಿರುವ ಶೋಷಿತ ಸಮುದಾಯವಾಗಿದೆ.ಮಾದಿಗ ಸಮುದಾಯವು ಸಮಾಜದಲ್ಲಿ ಬಹುಸಂಖ್ಯಾತರನ್ನು ಹೊಂದಿದ್ದು, ಅನೇಕ ಮಹನೀಯರು ಇದ್ದರೂ ಇಂದಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ .ಸಮುದಾಯದ ಜನರು ವಿದ್ಯಾವಂತರಾದರೆ ಸಮುದಾಯದ ಏಳ್ಗೆ ಸಾಧ್ಯ.ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕೆಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೀಮರಾಯ ಮುದ್ನಾಳ, ಮಾದಿಗ ಸಮುದಾಯವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರತಿಯೊಂದು ಗ್ರಾಮದಲ್ಲಿ ತಳವೂರಿದೆ. ಅಂಬೇಡ್ಕರ್ ಅವರು ಹೇಳಿದಂತೆ ಮತದ ಮಹತ್ವವನ್ನು ಅರ್ಥ ಮಾಡಿಕೊಂಡರೆ ದೇಶವನ್ನೇ ಆಳುವ ಶಕ್ತಿ ಸಮಾಜಕ್ಕೆ ಸಿಗುವುದರಲ್ಲಿ ಅನುಮಾನವಿಲ್ಲ ಎಂದಿದ್ದರು ಎಂದರು. ಶಹಾಬಾದ ನಗರದಲ್ಲಿ ಸಮಾಜದ ಬೇಡಿಕೆಯಾದ ಶಿವಶರಣ ಮಾದಾರ ಚೆನ್ನಯ್ಯ ಅವರ ಪ್ರತಿಮೆ ಹಾಗೂ ಸಮುದಾಯದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಸಮಾರಂಭದಲ್ಲಿ ಭೀಮಣ್ಣ ಬಿಲ್ಲವ, ಕನಕಪ್ಪ ದಂಡಗುಲಕರ, ನಾಗೇಂದ್ರಪ್ಪ ದಂಡೋತಿಕರ, ಗುಂಡಪ್ಪ ಶಿರಡೋಣ ಮಾತನಾಡಿದರು. ವೇದಿಕೆ ಮೇಲೆ ಉದ್ಯಮಿದಾರರಾದ ಅಣವೀರ ಇಂಗಿನಶೆಟ್ಟಿ, ನಗರಸಭೆ ಸದಸ್ಯರಾದ ಪೀರಮ್ಮ ಪಗಲಾಪುರ, ಸಾಹಿತಿ ನಾಗಪ್ಪ ಬೆಳಂಗಿ, ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಕಲಾವಿದ ಮಹ್ಮದ ಕದೀರ, ನಿಂಗಪ್ಪ ಹುಳುಗೋಳ್ಕರ, ಚಂದ್ರಕಾಂತ್ ಗೊಬ್ಬುರಕರ ಇದ್ದರು. ಜಿಲ್ಲೆಯ ಮಾದಿಗ ಸಮಾಜದ ಡಾಕ್ಟರೇಟ್ ಪದವಿ ಪಡೆದ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮನೋಹರ್ ಮೇತ್ರೆ ಸ್ವಾಗತಿಸಿದರು, ನಾಗರಾಜ್ ಮುದ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಮರಲಿಂಗ ಯಾದಗಿರಿ ನಿರೂಪಿಸಿದರು, ಯಲ್ಲಾಲಿಂಗ ವಂದಿಸಿದರು.

ಶಿವಪ್ಪ ವಾಗ್ಮೊರೆ, ಶರಣು ಪಗಲಾಪೂರ, ಭೀಮರಾಯ ಕನಗನಹಳ್ಳಿ, ಹಾಜಪ್ಪ ಬೀಳಾರ, ನವೀನ್ ಸಿಪ್ಪಿ, ಅಮರ್ ಕೊರೆ, ಹನುಮಂತ ಕಾಂಬಳೆ, ಅನಿಲ್ ಮೈನಾಳಕರ, ಹನುಮಂತ ಕೋರೆ, ಸಂತೋಷ ಹುಲಿ, ಪರಶುರಾಮ, ಮಲ್ಲೇಶಿ ಸೈದಾಪುರ, ನಾರಾಯಣ ಕಂದಕುರ, ಭೀಮರಾವ ಸೇಡಂ, ಹಣಮಂತ ಮೇತ್ರೆ, ಭಾಗವಹಿಸಿದ್ದರು.

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಮತ್ತು ಮಾಜಿ ಸಚಿವರಾದಂತಹ ಕೆಬಿ ಶಾಣಪ್ಪ ಹಾಗೂ ಗೋವಿಂದ ಕಾರಜೋಳ ಅವರ ಆಶೀರ್ವಾದದಿಂದ ಇಂದು ನಾನು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಈ ಸಮಾಜದ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದವಿದೆ. – ಬಸವರಾಜ ಮತ್ತಿಮಡು ಶಾಸಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here