ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಅವಶ್ಯಕ

0
73

ಕಲಬುರಗಿ: ಗ್ರಾಮದ ಜನರಿಗೆ ಹಾಗೂ ಶಾಲಾ ವಿಧ್ಯಾರ್ಥಿಗಳಿಗೆ ಸಾಂಕ್ರಾಮಿಕ ಮತ್ತು ಆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಬಹಳ ಅವಶ್ಯಕ ಎಂದು ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ (ಜಿಲ್ಲಾ ಎ ಸಿ ಎಫ್ ಕ್ಷೇತ್ರ ಮೇಲ್ವಿಚಾರಕ) ಮಂಜುನಾಥ ಕಂಬಾಳಿಮಠ ಮಕ್ಕಳಿಗೆ ಸಲಹೆ ನೀಡಿದರು.

ಪ್ರತಿಯೊಬ್ಬ ಮಕ್ಕಳು ಆರೋಗ್ಯದ ಅರಿವಿನ ಬಗ್ಗೆ ಪ್ರಾಮುಖ್ಯತೆ ಬಹಳ ಅವಶ್ಯಕವಾಗಿದೆ.

Contact Your\'s Advertisement; 9902492681

ಅವರು ಸೇಡಂ ತಾಲೂಕಿನ ಕೋಡ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೊಂದಿಕೊಂಡಿರುವ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಕಲಬುರಗಿ. ಮತ್ತು ತಾಲ್ಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸೇಡಂ ಇವರಗಳ ಸಂಯುಕ್ತಾಶ್ರದಲ್ಲಿ ಸಕ್ರಿಯ ಕ್ಷಯರೋಗ ಆಂದೋಲನ ಕಾರ್ಯಕ್ರಮದ ಅಂಗವಾಗಿ ಬೆನಕನಹಳ್ಳಿ ಗ್ರಾಮದಲ್ಲಿ ಗ್ರಾಮದ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಮನೆ – ಮನೆ ಭೇಟಿ ಮಾಡಿ ಕಫಾದ ಮಾದರಿ ಸಂಗ್ರಹಿಸಿ ಲ್ಯಾಬೋರೇಟರಿಗೆ ಉಚಿತ ಪರೀಕ್ಷೆ ಮಾಡಿಸಲಾಗುತ್ತಿದೆ. ಅದರ ಜೊತೆಯಲ್ಲೆ ಬೆನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಂಕ್ರಾಮಿಕ ಮತ್ತು ಆ ಸಾಂಕ್ರಾಮಿಕ ಬಗ್ಗೆ ತಿಳಿದುಕೊಂಡು ಆರೋಗ್ಯದ ರಕ್ಷಣೆ ಹೇಗೆ ಕಾಪಾಡಿಕೊಳ್ಳಬೇಕು. ಹಾಗೆ ಗ್ರಾಮ ಸ್ವಚ್ಛಗೊಂಡಿದ್ದರೆ ಮಾತ್ರ ಒಳ್ಳೆಯ ಪರಿಸರದ ನಿರ್ಮಾಣ ಮಾಡಿದಂತಾಗುತ್ತದೆ.

ಅಂದಾಗ ಮಾತ್ರ ಆರೋಗ್ಯ ವಂತ ಜೀವನ ಶೈಲಿ ರೂಪಿಸಿಕೊಳ್ಳಲು ಸಾಧ್ಯವೆಂದರು . ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ” ಕ್ಷಯರೋಗ ಗುಣಪಡಿಸಬಹುದಂತ ರೋಗ ಬನ್ನಿ ಕೈ ಜೋಡಿಸಿ ಕ್ಷಯ ಮುಕ್ತ ಗ್ರಾಮ ನಿರ್ಮಿಸೋಣ ” ಎಂಬ ಘೋಷವಾಕ್ಯದಂತೆ ಸಮುದಾಯದ ಜನರು ಹಾಗೆ ವಿದ್ಯಾರ್ಥಿಗಳು ಕ್ಷಯರೋಗ ನಿರ್ಮೂಲನಗೆ ಪಣತೊಡಬೇಕೆಂದರು.

ನಂತರ ಸೇಡಂನ ಹಿರಿಯ ಕ್ಷಯರೋಗ ಮೇಲ್ವಿಚಾರಕ ( ಎಸ್ ಟಿ ಎಸ್ ) ಮಹಾಂತೇಶ ಹಾವನೂರು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ನಿರ್ಮಲಾ ಗುತ್ತೆದಾರ ಅವರು ಮಾತನಾಡುತ್ತ ಅವರು ವಯಕ್ತಿಕ ( ಸ್ವಯಂ) ಸ್ವಚ್ಚತೆ ಬಗ್ಗೆ ಮಾತನಾಡಿ ಹಾಗೆ ಕ್ಷಯರೋಗ ಚಿಕಿತ್ಸೆ ಆರು ತಿಂಗಳ ಕಾಲ ಮನೆಯಲ್ಲೆ ಚಿಕಿತ್ಸೆ ಪಡೆದುಕೊಳ್ಳಬೇಕು. ಕ್ಷಯರೋಗ ಹರಡುವಿಕೆ, ಸಂಶ್ಷಯಾಸ್ಪದ ರೋಗ ಲಕ್ಷಣಗಳು, ರೋಗ ತಡೆಯುವ ಬಗ್ಗೆ, ವಿವರಣೆ ನೀಡಿದರು. ಕ್ಷಯರೋಗ ಚಿಕಿತ್ಸೆಯು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇದೆ ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬೆನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಕಾವೇರಿ ಹಿರೇಮಠ .ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಅಗಬೇಕು ಎಂದು ಅಭಿಪ್ರಾಯ ಪಟ್ಟರು.

ವೇದಿಕೆ ಮೇಲೆ ಪ್ರಮುಖರಾದ ಕೋಡ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಾಳಾದ ಹಿರಿಯ / ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಇಬ್ರಾಹಿಂ ಗಾರಂಪಳ್ಳಿ . ಮತ್ತು ಸಂತೋಷ , ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ( ಅತಿಥಿ ) ಸಂತೋಷಕುಮಾರ, ಇದ್ದರು.

ವಿಶೇಷವಾಗಿ : ಸಕ್ರಿಯ ಕ್ಷಯ ರೋಗ ಆಂದೋಲನ ಕಾರ್ಯಕ್ರಮ ಜು 17 ರಿಂದ ಅಗಷ್ಟ್ 2 ರವರಗೆ ನಡೆಯಲಿದೆ. ಕ್ಷಯರೋಗ ಕುರಿತು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಿತ್ತಿ ಪತ್ರದ ಮೂಲಕ ಜಾಗೃತಿ ಮೂಡಿಸಿಲಾಯಿತು.

ಈ ಅರಿವು ಕಾರ್ಯಕ್ರಮದಲ್ಲಿ ‌. ಆಶಾ ಕಾರ್ಯಕರ್ತೆರಾದ , ನಾಗಮ್ಮ , ಕವಿತಾ, ರೇಣುಕಾ ಹಾಗೆ ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here