ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ

0
24

ಕಲಬುರಗಿ: ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‍ಸಿಸಿಯಿಂದ ಮತ್ತು ಯಾವುದೇ ಶಿಬಿರಗಳಾಗಲಿ ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಹೈಕ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಜಗನ್ನಾಥ್ ಬಿಜಾಪುರ ಅಭಿಪ್ರಾಯಪಟ್ಟರು.

ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ವಿರದ ಸಮರೂಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಿಸಿದೆ ಇಂತಹ ಶಿಬಿರಗಳಲ್ಲಿ ವಿವಿಧ ವಿಷಯಗಳಲ್ಲಿ ಪರಿಣಿತ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳಲ್ಲ ಕರೆಸಿ ಪರಿಣಾಮಕಾರಿಯಾದ ಉಪನ್ಯಾಸಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

Contact Your\'s Advertisement; 9902492681

ಅತಿಥಿಗಳಾಗಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಅನಿಲ್ ಕುಮಾರ್ ರಾಥೋಡ್ ಮಾತನಾಡಿ, ಸುಮಾರು ಏಳು ದಿನಗಳ ಕಾಲ ನಮ್ಮ ಕ್ಯಾಂಪಸ್ ನಲ್ಲಿದ್ದು ಶ್ರಮದಾನದ ಮುಖಾಂತರ ಹಾಗೂ ಪಕ್ಕದ ಗ್ರಾಮಗಳಿಗೆ ತೆರಳಿ ಆರೋಗ್ಯ ದಂತ ನೇತ್ರ ಇವುಗಳಿಗೆ ಸಂಬಂಧಿಸಿದ ಉಚಿತ ಶಿಬಿರಗಳನ್ನ ಆಯೋಜಿಸುವುದರ ಮೂಲಕ ಹಾಗೂ ಸಮೀಕ್ಷಾ ಕಾರ್ಯವನ್ನು ಕೈಗೊಂಡು ವಿದ್ಯಾರ್ಥಿಗಳು ಈ ಶಿಬಿರದ ಮೂಲಕ ಶಿಸ್ತು ಸಮಯ ಪಾಲನೆ ಮೊದಲಾದವುಗಳನ್ನು ಕಲಿತುಕೊಂಡು ನಮ್ಮ ಕ್ಯಾಂಪಸ್ ನಲ್ಲಿ ಒಂದು ವಿನೂತನವಾದ ವಾತಾವರಣವನ್ನು ಸೃಷ್ಟಿಸಿದ್ದರು ನಿಜಕ್ಕೂ ರಾಜ್ಯದಲ್ಲಿ ಎ ಡಬಲ್ ಪ್ಲಸ್ ಶ್ರೇಣಿ ಪಡೆದ ಏಕೈಕ ಮಹಿಳಾ ಮಹಾವಿದ್ಯಾಲಯ ಎನ್ನುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ ಮಾತನಾಡಿ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮಹೇಶ ಗಂವ್ಹಾರ ವಂದಿಸಿದರು. ಡಾ. ರೇಣುಕಾ ಹಾಗರಗುಂಡಗಿ ಶಿಬಿರದ ವರದಿ ವಾಚಿಸಿದರು. ಸುμÁ್ಮ ಕುಲಕರ್ಣಿ ಬಹುಮಾನ ವಿಜೇತರನ್ನು ಘೋಷಿಸಿದರು.

ಮಹಾವಿದ್ಯಾಲಯದ ಡಾ.ಶಿವರಾಜ ಮುಲಗೆ,ಡಾ.ಶರಣಮ್ಮಾ ಕುಪ್ಪಿ,ಶ್ರೀಮತಿ ಶಿವಲೀಲಾ ಧೋತ್ರೆ,ಡಾ.ದಾನಮ್ಮ ಹಾಗೂ ಸಿದ್ದಣ್ಣ ದೆವರಮನಿ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here