ಕಡಕೋಳ, ಕಾವ್ಯಶ್ರೀ, ಶ್ರುತಿ ಬಿ ಆರ್ ಸೇರಿದಂತೆ ಆರು ಜನ ಸಾಧಕರಿಗೆ ‘ಅವ್ವ’ ಪ್ರಶಸ್ತಿ

0
427

ಕಲಬುರಗಿ:- ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಏಳನೇ ವರ್ಷದ 2023 ನೇ ಸಾಲಿನ ‘ಅವ್ವ’ ಪ್ರಶಸ್ತಿಗೆ ಲೇಖಕರು ಹಾಗೂ ಕತೆಗಾರರಾದ ಮಲ್ಲಿಕಾರ್ಜುನ ಕಡಕೋಳ ಅವರ “ಮುಟ್ಟು” (ಕಥಾ ಸಂಕಲನ) , ಕಾವ್ಯಶ್ರೀ ಮಹಾಗಾoವಕರವರ “ಒಳಕಲ್ ಒಡಲು ” (ಕಾದಂಬರಿ) ಹಾಗೂ ಡಾ.ಶೃತಿ ಬಿ.ಆರ್ ಅವರ “ಜೀರೋ ಬ್ಯಾಲೆನ್ಸ್” (ಕವನ ಸಂಕಲನ ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಶ್ರಾಂತ ಕುಲಪತಿಗಳಾದ ಡಾ. ಎಸ್. ಎ ಪಾಟೀಲ ( ಕೃಷಿ ಕ್ಷೆತ್ರ ) ಗುಲಬರ್ಗಾ ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ರಮೇಶ ಲಂಡನಕರ ( ವಿಜ್ಞಾನ ಕ್ಷೇತ್ರ ) ನಿವೃತ್ತ ಪ್ರಾಂಶುಪಾಲರಾದ ಡಾ. ಶ್ರೀಶೈಲ ನಾಗರಾಳ( ಶಿಕ್ಷಣ ಕ್ಷೇತ್ರ ) ಅವರನ್ನು 2023 ನೇ ಸಾಲಿನ ‘ಅವ್ವ ಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಪ್ರತಿಷ್ಠಾನದ ಸಂಚಾಲಕರಾದ ಡಾ. ನಾಗಪ್ಪ ಗೋಗಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಶಸ್ತಿ ಪ್ರಧಾನ ಸಮಾರಂಭವು ಅಗಸ್ಟ ಕೊನೆಯ ವಾರದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here