ಮಣಿಪುರ ಗಲಭೆ ಖಂಡಿಸಿ ವಿವಿಧ ಪಕ್ಷಕಗಳಿಂದ ಬೃಹತ್ ಪ್ರತಿಭಟನೆ 25ಕ್ಕೆ

0
16

ಕಲಬುರಗಿ: ಮಣಿಪುರದಲ್ಲಿ ನಡೆಯುತ್ತಿರುವ ಪ್ರೇರಿತ ಗಲಭೆಗಳನ್ನು ಕೂಡಲೇ ನಿಲ್ಲಿಸಿ ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಬೇಕು. ಮತ್ತು ಮಹಿಳೆಯನ್ನು ಬೆತ್ತಲೆಗೊಳಿಸಿ ಅಮಾನವೀಯ ದೌರ್ಜನ್ಯ ಖಂಡಿಸಿ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಎಸ್‍ಯುಸಿಐಸಿ, ಆರ್‍ಪಿಐ, ವಿವಿಧ ರೈತ,ದಲಿತ, ಸಮುದಾಯ ಸಂಘಟನೆಗಳು ಸೇರಿ ಜು.25ರಂದು ಜಿಲ್ಲೆಯಲ್ಲಿ ‘ಮಣಿಪುರ ಸೌಹಾರ್ದ ದಿನ’ವಾಗಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದಲೂ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಕುಕಿ-ಜೋಯಿ ಬುಡಕಟ್ಟು ಜನಾಂಗ ಸೇರಿದಂತೆ ವಿವಿಧ ಜನರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಗಲಭೆಗಳನ್ನು ನಿಯಂತ್ರಿಸಬೇಕಾದ ಮಣಿಪುರ ರಾಜ್ಯ ಸರಕಾರ ಸಂಪೂರ್ಣ ವಿಲವಾಗಿದೆ. ಕಾನೂನು ಸುವ್ಯವಸ್ಥೆ ಸ್ಥಾಪಿಸಬೇಕಾದ ಕೇಂದ್ರ ಸರಕಾರ ಮೂಕ ಪ್ರೇಕ್ಷಕವಾಗಿ ವರ್ತಿಸುತ್ತಿದೆ. ಇದನ್ನೆಲ್ಲಾ ಅವಲೋಕಿಸಿದಾಗ ಬಿಜೆಪಿ ಸರಕಾರ ಈ ಸಂಘರ್ಷಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂದು ದೂರಿದರು.

Contact Your\'s Advertisement; 9902492681

ಕೇಂದ್ರದ ಗೃಹ ಸಚಿವರು ಮಣಿಪುರಕ್ಕೆ ಭೇಟಿ ನೀಡಿ ಬಂದರೂ ಸಂಘರ್ಷ ನಿಯಂತ್ರಣಕ್ಕೆ ಬರದಿರುವದನ್ನು ಗಮನಿಸಿದರೆ ಇದು 2002ರಲ್ಲಿ ನಡೆದ ಗುಜರಾತ್ ಮಾದರಿಯ ಮುಂದುವರೆದ ಭಾಗದಂತೆ ಭಾಸವಾಗುತ್ತದೆ. ಮನುವಾದಿಗಳು ಇಡೀ ದೇಶಕ್ಕೆ 2023ರ ಮಣಿಪುರ ಮಾದರಿ ಸೃಷ್ಟಿ ಮಾಡಬೇಕೆನ್ನುವ ವ್ಯವಸ್ಥಿತ ಹುನ್ನಾರ ತೋರುತ್ತಿದೆ ಎಂದು ಆರೋಪಿಸಿದರು.

ಪೆÇಲೀಸ್ ವಶದಲ್ಲಿದ್ದ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಹೋಗಿ ಸಾಮೂಹಿಕ ದೌರ್ಜನ್ಯ ಮಾಡಲಾಗಿದೆ. ಸಂತ್ರಸ್ತೆಯರನ್ನು ರಕ್ಷಿಸಲು ಯತ್ನಿಸಿದ ಸಹೋದರನ್ನು ಹತ್ಯೆ ಮಾಡಲಾಗಿದೆ. ದೇಶ ರಕ್ಷಣೆಯ ಹೊಣೆ ಹೊತ್ತ ಸೈನಿಕರ ಪತ್ನಿಯರಿಗೂ ಅಲ್ಲಿ ರಕ್ಷಣೆ ಇಲ್ಲದಂತಾಗಿದೆ. ಈ ಘಟನೆಯಿಂದ ಮಹಿಳೆಯರಿಗೆ ಅμÉ್ಟೀ ಅಲ್ಲ,ದೇಶದ ಸಮಸ್ತ ಜನತೆಗೆ ಆಘಾತವನ್ನುಂಟು ಮಾಡಿದೆ. ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೌರ್ಜನ್ಯಕ್ಕೆ ಒಳಗಾದ ಬುಡಕಟ್ಟು ಜನಾಂಗಕ್ಕೆ ನ್ಯಾಯ ದೊರೆಯಬೇಕು. ರಾಜ್ಯದಲ್ಲಿ ನಡೆದಿರುವ ದೌರ್ಜನ್ಯಗಳಿಗೆ ಕಾರಣೀಕರ್ತರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಮಣಿಪುರ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲಿನ ಸರಕಾರವನ್ನು ಅಮಾನತು ಮಾಡಬೇಕು. ಮಣಿಪುರದ ಒಟ್ಟು ಹಿಂಸಾಚಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ವೌಲಾಮುಲ್ಲಾ, ಎಸ್.ಎಂ.ಶರ್ಮಾ, ಮಹೇಶ ರಾಠೋಡ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here