ಮಾದನಹಿಪ್ಪರಗಿ: ಸ್ಥಳೀಯ ಹತ್ತಿ ಕೈಮಗ್ಗ ನೇಕಾರರ ಉತ್ಪಾದಕ ಹಾಗೂ ಮಾರಾಟ ಸಹಕಾರ ಸಂಘ(ನಿ.)ಕ್ಕೆ ನೂತನ ಪದಾಧಿಕಾರಿಗನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಿಂದಿನ ಪದಾಧಿಕಾರಿಗಳು ಅವಧಿ ಮುಕ್ತಾಯದ ಹಿನ್ನಲೆಯಲ್ಲಿ ಮತ್ತು ಕರ್ನಾಟಕ ಸಹಕಾರ ಇಲಾಖೆಯ ನಿರ್ದೇಶನದಂತೆ ಸಂಘದ ಕಾರ್ಯಾಲಯದಲ್ಲಿ ಶನಿವಾರ ಹಟಗಾರ ಸಮಾಜ ಎಲ್ಲಾ ಮುಖಂಡರುಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಮುಖಂಡ ಮಲ್ಲಿನಾಥ ನಿಂಬಾಳ ಅವರು ಸಂಘದ ಮತ್ತು ನೇಕಾರರ ಅಭಿವೃದ್ಧಿ ಬಗ್ಗೆ ಮಾತನಾಡಿ ಮೂಲ ಕಸುಬು ನೇಕಾರಿಕೆ ಇಂದಿನ ಆಧುನಿಕತೆಯಲ್ಲಿ ಕಾಣದಾಗಿದೆ. ವಿದ್ಯುತ್ ಯಂತ್ರಗಳ ಮಗ್ಗಗಳ ಮುಂದೆ ಶ್ರಮಿಕ ನೇಕಾರರ ಬದುಕು ಕುಸಿದಿದೆ. ಬದಲಾದ ಕಾಲಮಾನದಲ್ಲಿ ನಾವುಗಳು ಕೂಡಾ ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನೇಕಾರರ ಹಿತವನ್ನು ಕಾಪಾಡಲು ನಮ್ಮ ಸಂಘ ಶ್ರಮಿಸಿದೆ ಎಂದರು.
ನಂತರ ಲಕ್ಷ್ಮಣ ಪಾತಾಳೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ನಡುವಳಿ ಮಂಡಿಸಿದರು. ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ನೂತನ ಅಧ್ಯಕ್ಷರಾಗಿ ಗುರುನಾಥ ಸೊನ್ನದ್, ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಗಡ್ಡದ್, ಕಾರ್ಯದರ್ಶಿಯಾಗಿ ಸಿದ್ದಾರೂಢ ಸಿಂಗಶೆಟ್ಟಿ ಆಯ್ಕೆಯಾದರು. ಸಂಘದ ನಿದೇರ್ಶಕರಾಗಿ ಅಶೋಕ ಮುನ್ನೋಳ್ಳಿ, ಸಿದ್ದಾರೂಢ ಜಳಕೋಟಿ, ಮಲ್ಲಿನಾಥ ಮಾಶನಳ್ಳಿ, ಶ್ರೀಶೈಲ ಜೇವೂರ, ಸಿದ್ದರೂಢ ಬುಕ್ಕಾ, ಮಲ್ಲಿನಾಥ ನಿಂಬಾಳ, ರಮೇಶ ಇಕ್ಕಳಕಿ, ಭೌರಮ್ಮ ಅಂಬಲಗಿ ಮತ್ತು ಜಗದೇವಿ ನಿಂಬಾಳ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಹಿರಿಯರಾದ ಶಿವಶರಣಪ್ಪ ಅಷ್ಟಗಿ, ಶಿವಲಿಂಗಪ್ಪ ಅಷ್ಟಗಿ, ಧರೆಪ್ಪ ಗುಳಗಿ, ಸ್ಥಳೀಯ ಹತ್ತಿ ಕೈಮಗ್ಗ ನೇಕಾರರ ಉತ್ಪಾದಕ ಮಾರಾಟ ಸಹಕಾರ ಸಂಘದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು. ಗುರುನಾಥ ಸೊನ್ನದ್(ಅಧ್ಯಕ್ಷ) ಶಿವಲಿಂಗಪ್ಪ ಗಡ್ಡದ್(ಉಪಾಧ್ಯಕ್ಷ), ಸಿದ್ದಾರೂಢ ಸಿಂಗಶೆಟ್ಟಿ (ಕಾರ್ಯದರ್ಶಿ) ಹಾಗೂ ಸಂಘದ ನಿದೇರ್ಶಕರನ್ನು ಕಾಣಬಹುದು.