ಶಹಾಬಾದ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಳಾ(ಕೆ) ಗ್ರಾಮದ ಮನೆಯ ಮೇಲ್ಛಾವಣೆ ಮತ್ತು ಗೋಡೆ ಕುಸಿದು ಬಿದ್ದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಗೋಳಾ(ಕೆ) ಗ್ರಾಮದ ನಿವಾಸಿ ಅರುಣಾದೇವಿ ಶಿವಲಿಂಗಸ್ವಾಮಿ ಎಂಬುವರ ಮನೆ ಮೇಲ್ಛಾವಣೆ ಮತ್ತು ಗೋಡೆ ಕುಸಿದು ಆತಂಕವನ್ನುಂಟು ಮೂಡಿಸಿದೆ.
ಮಂಗಳವಾರ ರಾತ್ರಿ ಮೇಲ್ಚಾವಣಿ ಕುಸಿಯುತ್ತಿರುವ ಶಬ್ದ ಕಂಡು ಬರುತ್ತಿರುವುದರಿಂದ ಅರುಣಾದೇವಿ ಕೂಡಲೇ ಮನೆಯಿಂದ ಹೊರಬಂದಿದ್ದಾರೆ.ತದನಂತರ ಮನೆಯ ಮೇಲ್ಛಾವಣೆ ಮತ್ತು ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶ ಯಾವುದೇ ಹಾನಿಯಾಗಿಲ್ಲ.ಪ್ರತಿದಿನ ಸತತ ತುಂತುರು ಮಳೆ ಬೀಳುತ್ತಿದ್ದು, ಮನೆ ಚಾವಣಿ ಹಾಗೂ ಗೋಡೆಗಳು ನೆಲಕ್ಕುರುವವೋ ಎಂಬ ಆತಂಕದಲ್ಲಿಜೀವನ ಸಾಗಿಸುವಂತಾಗಿದೆ ಸುತ್ತಮುತ್ತಲಿನ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಮನೆಯ ಮೇಲ್ಛಾವಣೆ ಮತ್ತು ಗೋಡೆ ಕುಸಿದು ಬಿದ್ದಿರುವ ಸ್ಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಬೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಸಕ ಬಸವರಾಜ ಮತ್ತಿಮಡು ಅವರು ಈ ಬಗ್ಗೆ ಗಮನಹರಿಸಿ ಮಳೆಯಿಂದಾಗಿ ಹಾನಿಗೊಳಗಾದ ಫಲಾನುಭವಿಗಳತ್ತ ಗಮನಹರಿಸಿ ಸೂಕ್ತ ಪರಿಹಾರ ನೀಡಿಸುವತ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.