ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮರವಣಿಗೆ ಖಂಡಿಸಿ ಪ್ರತಿಭಟನೆ

0
20

ಸುರಪುರ: ಮಣಿಪುರದಲ್ಲಿ ಕುಕ್ಕಿ ಸಮುದಾಯದ ಮಹಿಳೆಯರನ್ನು ಮೈತ್ರಿ ಸಮುದಾಯದ ಜನರು ಬೆತ್ತಲೆ ಮೆರವಣಿಗೆ ಮಾಡಿ ದೇಶದ ಜನರು ತಲೆ ತಗ್ಗಿಸುವ ಕೃತ್ಯ ಮಾಡಿದ್ದಾರೆ.ಆದ್ದರಿಂದ ಘಟನೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಮಣಿಪುರದಲ್ಲಿ ಶಾಂತಿ ನೆಲೆಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ಆಗ್ರಹಿಸಿದರು.

ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.ಅಲ್ಲದೆ ಧರ್ಮಸ್ಥಳದಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದು,ಈ ಘಟನೆಯ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಅಲ್ಪಸಂಖ್ಯಾತರ ಘಟಕದ ಸಂಚಾಲಕ ಎಮ್.ಪಟೇಲ್,ಮುಖಂಡರಾದ ಹಣಮಂತ ಕಟ್ಟಿಮನಿ,ಚನ್ನಬಸಪ್ಪ ತಳವಾರ,ಮಾನಪ್ಪ ಶೆಳ್ಳಗಿ,ಶೇಖರ ಮಂಗಳೂರು,ಖಾಜಾ ಅಜ್ಮೀರ್,ರಾಜು ಬಡಿಗೇರ,ವೆಂಕಟೇಶ ದೇವಾಪುರ,ತಿಪ್ಪಣ್ಣ ಚವ್ಹಾಣ,ಅಬ್ದುಲ್ ಅಲೀಮ್,ಮೌನೇಶ ತಿಂಥಣಿ,ಅಬ್ದುಲ್ ಸಮೀ ಖುರೇಷಿ,ಹುಸನಪ್ಪ ದೇವಾಪುರ,ಸೋಫಿ ಮುಲ್ಲಾ,ಶಿವಪ್ಪ ಶೆಳ್ಳಗಿ,ಮಲ್ಲೇಶ ಶೆಳ್ಳಗಿ,ಆಸೀಫ್ ಖುರೇಷಿ,ಗುರಪ್ಪ ಮಾವಿನಮಟ್ಟಿ,ಮೌನೇಶ ದೇವತ್ಕಲ್,ಪಾರಪ್ಪ ದೇವತ್ಕಲ್,ಮೌನೇಶ ತಳವಾರ,ಹಣಮಂತ ರತ್ತಾಳ,ಹಣಮಂತ ದೊಡ್ಮನಿ,ಯಲ್ಲಪ್ಪ ರತ್ತಾಳ,ಭೀಮರಾಯ ರತ್ತಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here