ಯಾಗಾಪುರ: ಶಾಂತಿಬಾಯಿ-ಶಾರುಬಾಯಿ ಆಡಳಿತ

0
30

ವಾಡಿ: ಸಮೀಪದ ಯಾಗಾಪುರ ಗ್ರಾಪಂ ಎರಡನೇ ಅವದಿಯ ಆಡಳಿತ ಮಹಿಳಾ ಜನಪ್ರತಿನಿಧಿಗಳ ಹಿಡಿತಕ್ಕೆ ಜಾರಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿಜಯದ ಸಂಕೇತ ಪ್ರದರ್ಶಿಸುವ ಮೂಲಕ ಗೆಲುವು ಸಂಭ್ರಮಿಸಿದ್ದಾರೆ.

ಚಿತ್ತಾಪುರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು. ಪ್ರತಿಸ್ಪರ್ಧಿಗಳು ನಾಮಪತ್ರ ಸಲ್ಲಿಸದ ಕಾರಣ ಪತ್ತು ನಾಯಕ ತಾಂಡಾದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶಾಂತಿಬಾಯಿ ಡೋಂಗ್ರು ಚವ್ಹಾಣ ಅಧ್ಯಕ್ಷೆಯಾಗಿ ಹಾಗೂ ಮೂಂಗಿ ತಾಂಡಾದ ಶಾರುಬಾಯಿ ಗೋವಿಂದ ಚವ್ಹಾಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

Contact Your\'s Advertisement; 9902492681

ಯಾಗಾಪುರ ಗ್ರಾಪಂ ಆಡಳಿತವನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡ ಕಾಂಗ್ರೆಸ್ ನಾಯಕರು, ಗೆದ್ದ ಅಭ್ಯರ್ಥಿಗಳಿಗೆ ಹೂಮಾಲೆ ಹಾಕಿ ಶುಭ ಕೋರಿದರು. ನಂತರ ಗ್ರಾಮದಾಧ್ಯಂತ ಮೆರವಣಿಗೆ ಹೊರಡುವ ಮೂಲಕ ಗೆಲುವು ಸಂಭ್ರಮಿಸಿದರು.

ಪಿಡಿಒ ಬಸವರಾಜ ಪೂಜಾರಿ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿಗೌಡ ಪಾಟೀಲ ಕರದಾಳ, ಮುಖಂಡರಾದ ಅರವಿಂದ ಚವ್ಹಾಣ, ಬೋರು ರಾಠೋಡ, ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಚವ್ಹಾಣ, ಭರಮರೆಡ್ಡಿ ಹಂದರ್ಕಿ, ಮಲ್ಲಣಗೌಡ ಪೊಲೀಸ್ ಪಾಟೀಲ, ಹರಿ ಚವ್ಹಾಣ, ಅಪ್ಪಣ್ಣಗೌಡ, ಹಣಮಂತ ಪೂಜಾರಿ, ಬಳು ಚವ್ಹಾಣ, ಮದನ್ ರಾಠೋಡ, ಚಂದ್ರು ಚವ್ಹಾಣ, ಧನರಾಜ ಚಿನ್ನಾ ರಾಠೋಡ, ವಸಂತ ಚವ್ಹಾಣ, ಶಾಂತಕುಮಾರ, ಸಂಗೀತಾ ರಾಮು ಚಿನ್ನಾ ರಾಠೋಡ, ಗೋರಿಬಾಯಿ ಪೋಮಾ ರಾಠೋಡ, ಈಶ್ವರ ರಾಠೋಡ, ರವಿ ರಾಠೋಡ, ಸೋನಿಬಾಯಿ ಧನ್ನು ರಾಠೋಡ, ಕಿಶನ ಧಾಮ್ಲಾ ರಾಠೋಡ ಸೇರಿದಂತೆ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here