ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ಥಳೀಯ ಶಾಸಕರ ಮಂತ್ರಿಗಳ ಮಧ್ಯೆ ಹೊಂದಾಣಿಕೆ ಆರೋಪ

0
19

ಕಲಬುರಗಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸುಮಾರು 3 ತಿಂಗಳು ಗತಿಸುತ್ತಿವೆ, ಸರಕಾರ ಸ್ವಚ್ಛ ಆಡಳಿತ ಜನರಿಗೆ ಕೊಡಬೇಕೆಂಬ ಉದ್ದೇಶದಿಂದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಸಿ ಅಂತಿಮ ಹಂತ ತಲುಪಿದೆ, ಆದರೆ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ಥಳಿಯ ಶಾಸಕರ ಹಾಗೂ ಮಂತ್ರಿಗಳ ಮಧ್ಯೆ ಹೊಂದಾಣಿಕೆ ಜನರ ಕಣ್ಣಿಗೆ ಕಾಣುತ್ತಿಲ್ಲ. ಎಲ್ಲಾ ಶಾಸಕರು ಸಚಿವರ ಮೇಲೆ ಅಥವಾ ಸಚಿವರು ಶಾಸಕರ ಮೇಲೆ ಗೋಳು ಹೇಳಕೊಳ್ಳುತ್ತಿದ್ದಾರೆ. ಇದರಿಂದ ಅಧಿಕಾರಿ ವರ್ಗ ಸಂಪೂರ್ಣ ಹೈರಾಣ ಆಗಿ ಸರಕಾರದ ಮೇಲೆ ಹಿಡಿ ಶಾಪ ಹಾಕಿ ಹಿಂದಿನ ಸರಕಾರ ಇನ್ನು ಪರವಾಗಿಲ್ಲ ಎಂಬ ಮಾತಾಡುತ್ತಿದ್ದಾರೆ ಹೈದ್ರಾಬಾದ ಕರ್ನಾಟಕ, ಗೊಂಡ, ರಾಜಗೊಂಡ, ಕಾಡುಕುರಬ, (ಪ.ಪ) ಸಂಘದ ಜಂಟಿ ಕಾರ್ಯದರ್ಶಿ ಶಿವಾಜಿ ಎಸ್. ಪಟ್ಟಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಒಂದು ತಾಜಾ ಉದಾಹರಣೆ ನಿಮ್ಮ ಮುಂದೆ ತರುತ್ತಿದ್ದು ಈಗಾಗಲೇ ಪ್ರಿಯಾಂಕ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ತಮ್ಮ ಇಲಾಖೆ ಅಥವಾ ಬೇರೆ ಬೇರೆ ಇಲಾಖೆಗಳಲ್ಲಿ 3 ವರ್ಷ ಮೇಲ್ಪಟ್ಟ ಅಥವಾ ಕೆಲ ಪ್ರಕರಣಗಳು ಎದಿರಿಸುತ್ತಿರುವ ಅಧಿಕಾರಿಗಳನ್ನು ಗುರುತಿಸಿ ವರ್ಗಾವಣೆ ಮಾಡಿದ್ದೇನೆ. ಇದರಿಂದ ಸ್ಪಷ್ಟ ಆಡಳಿತ ಕೊಡುತ್ತೇನೆ ಎಂದು ಪತ್ರಿಕೆಯಲ್ಲಿಯ ಹೇಳಿದ್ದಾರೆ. ಅದರಿಂದ ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ವ್ಯಕ್ತವಾಯಿತು.

Contact Your\'s Advertisement; 9902492681

ಆದರೆ ಇತ್ತಿಚಿಗೆ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಂಗಪ್ಪ ಗಾರಂಪಳ್ಳಿ ನಗರ ಯೋಜನಾ ಸದಸ್ಯರು/ನಗರ ಮತ್ತು ಗ್ರಾಮಾಂತರ ಯೋಜನೆ ಜಂಟಿ ನಿರ್ದೇಶಕರು/ಉಪನಿರ್ದೇಶಕರು ಕಲಬುರಗಿ ಇವರು ಸುಮಾರು 15 ವರ್ಷದಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ಸರಕಾರಗಳು ಬದಲಾದರೂ ಶಾಸಕರು ಬದಲಾದರೂ ಸಚಿವರು ಉಸ್ತುವಾರಿ ಸಚಿವರು ಸುಮಾರು ಜನ ಬಂದು ಹೋದರು, ಆದರೆ ಇವರು ಮಾತ್ರ 15 ವರ್ಷದಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅವರನ್ನು ಯಾವ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರಿಗೆ ಕಾಡುತ್ತಿದೆ ಎಂದು ಸರಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರೀಯಾಂಕ್ ಖರ್ಗೆ ಅವರಿಗೆ ಪತ್ರಿಕಾ ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.

ಸರಕಾರದ ನಿಯಮಾನುಸಾರ ಹುದ್ದೆಯಲ್ಲಿ, ಬಡ್ತಿ ಹೊಂದಿದ ತಕ್ಷಣ ಕಾರ್ಯನಿರ್ವಹಿಸುತ್ತಿರುವ ಕಛೇರಿಯಿಂದ ಬೇರೆ ಕಛೇರಿಗೆ ವರ್ಗಾವಣಿ ಆಗುತ್ತದೆ. ಸಾಮಾನ್ಯವಾಗಿ ಆದರೆ ಸಂಗಪ್ಪ ಗಾರಂಪಳ್ಳಿ ರವರು, 2 ಬಾರಿ ಬಡ್ತಿ ಹೊಂದಿದರೂ ಅದೇ ಕಛೇರಿ ಅದೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ ಎಂದರೆ ಎಲ್ಲಾ ಸರಕಾರಗಳು ಇವರ ಜೇಬಲ್ಲಿ ಇವೆ ಎಂದು ಜನರಿಗೆ ಎದ್ದು ಕಾಣುತ್ತದೆ ಎಂದು ಶಿವಾಜಿ ಎಸ್. ಪಟ್ಟಣ ಅವರು ತಿಳಿಸಿದ್ದಾರೆ.

ಆದರೆ ನೂತನ ಕಾಂಗ್ರೆಸ್ ಸರಕಾರ ಇವರನ್ನು ವಗಾವಣೆ ಮಾಡಲು ಮುಂದಾಯಿತು ಜನರು ಈ ಕಾರ್ಯಕ್ಕೆ ಭೆಸ್ ಎಂದರು ದಿನಾಂಕ:13-06- 2023 ರಂದು ಪ್ರಿಯಾಂಕ ಖರ್ಗೆ ರವರು ತಮ್ಮ ಶಿಫಾರಸ್ಸು ಪತ್ರ ನಗರ ಅಭಿವೃದ್ಧಿ ಸಚಿವರಿಗೆ ಬರೆದು ಇವರ ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

166 ಇನ್ನೊಂದು ಇದೆ ನಗರ ಅಭಿವೃದ್ಧಿ ಪ್ರಾಧಿಕಾರ ಕಲಬುರಗಿಯಲ್ಲಿ ಆಯುಕ್ತರಾಗಿ ದಯಾನಂದ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪ್ರಾಧಿಕಾರಕ್ಕೆ ಆಯುಕ್ತರಾಗಿ ಬಂದು ಈಗ ಒಂದು ವರ್ಷ ಕಳೆದಿದೆ ಇವರ ನಿವೃತ್ತಿಗೆ ಒಂದು ವರ್ಷ ಬಾಕಿ ಇದೆ. ಈ ಹಂತದಲ್ಲಿ ದಿನಾಂಕ: 17-07-23 ಸರಕಾರದ ಆದೇಶ ಪ್ರಕಾರ ಇವರನ್ನು ವರ್ಗಾಯಿಸಿ ಸ್ಥಳ ನಿರೀಕ್ಷಣೆಯಲ್ಲಿ ಇದ್ದಾರೆ. ಹೀಗಾಗಿ ಇವರ ವರ್ಗಾವಣೆ ಆದೇಶ ರದ್ದುಗೊಳಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮಾನ್ಯರೆ ಸರಕಾರದ ಈ ನಡೆ ಜನ ಸಾಮಾನ್ಯ ಹಾಗು ಅಧಿಕಾರಿಗಳ ವೃಂದದಲ್ಲಿ ಅತೃಪ್ತಿ ತಂದಿದೆ. ಈ ಎರಡು ಪ್ರಕರಣಗಳು ತಾಳೆ ಹಾಕಿ ನೋಡಿದಾಗ ಹಿಂದಿ ಭಾಷೆಯಲ್ಲಿನ ಒಂದು ಮಾತು ನೆನಪಾಗುತ್ತದೆ. ಜಿಸಕಾ ಲಾಟ ಉಸಕಾ ಬೈಂಸ್, ಕಾನೂನು ಹಾಗೂ ಮಾನವೀಯತೆ ಈ ಸರಕಾರದಲ್ಲಿ ಮರಿಚಿಕೆಯಾಗುವ ಎಲ್ಲಾ ಸಂಭಾವನೆಗಳು ಎದ್ದು ಕಾಣುತ್ತಿವೆ ಎಂದು ಸರಕಾರದ ವಿರುದ್ದ ನಗು ಚಟಾಕೆಯನ್ನು ಹಾರಿಸಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದಾನೆ ಎಂದು ಶಿವಾಜಿ ಎಸ್. ಪಟ್ಟಣ ಅವರು ಹೇಳಿದರು.

ಹೀಗಾಗಿ ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎಚ್ಚೆತ್ತುಕೊಂಡು ಕೂಡಲೇ ಸಂಗಪ್ಪ ಗಾರಂಪಳ್ಳಿ ರವರ ವರ್ಗಾವಣೆ ಆದೇಶ ತಡೆಗೆ ತೆರವುಗೊಳಿಸಿ ಅವರನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾಯಿಸಿ ಹಿಂದಿನ ಸರಕಾರದಲ್ಲಿ ಅವರು ಮಾಡಿರುವ ಅಕ್ರಮದ ಬಗ್ಗೆ ಈಗಾಗಲೇ ತನಿಖೆ ಆಗದೆ ಆ ತನಿಖಾ ವರದಿ ಪ್ರಕಾರ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕಾಗಿದೆ ಎಂದು ಈ ಮೂಲಕ ತಿಳಿಸುತ್ತಾ ಸರಕಾರ ಅಥವಾ ಸಚಿವರು ಈ ಹೇಳಿಕೆಗೆ ನಿರ್ಲಕ್ಷ ವಹಿಸಿದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರಲು ಸಿದ್ಧರಾಮಯ್ಯ ರವರ ಅಭಿಮಾನಿಗಳಾದ ನಾವು ಶ್ರಮಿಸಿದ್ದೇವೆ, ಅದೇ ಸರಕಾರ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಸರಕಾರ ಹಾಗೂ ಉಸ್ತುವಾರಿ ಸಚಿವರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ ಎಂದು ಹೈದ್ರಾಬಾದ ಕರ್ನಾಟಕ, ಗೊಂಡ, ರಾಜಗೊಂಡ, ಕಾಡುಕುರಬ, (ಪ.ಪ) ಸಂಘದ ಜಂಟಿ ಕಾರ್ಯದರ್ಶಿ ಶಿವಾಜಿ ಎಸ್. ಪಟ್ಟಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here