ಅಧಿಕ ಮಾಸದ ಪುರಾಣದಲ್ಲಿ ಶ್ರೀ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಕಲ್ಯಾಣ ಮಹೋತ್ಸವ

0
59

ಕಲಬುರಗಿ: ಮಹಾತ್ಮ ಬಸವೇಶ್ವರ ನಗರದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಧಿಕ ಮಾಸದ ಪುರಾಣದಲ್ಲಿ ಶ್ರೀ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಕಲ್ಯಾಣ ಮಹೋತ್ಸವದ ಕಾರ್ಯಕ್ರಮಕ್ಕೆ ಪೂಜ್ಯ ಮಾತೋಶ್ರೀಯವರಾದ ಡಾ. ದಾಕ್ಷಾಯಿಣಿ ಅಮ್ಮನವರು ಆಗಮಿಸಿ ಧರ್ಮೋಪದೇಶ ಮಾಡಿದರು.

ನಾನು ಇಂದು ಸ್ವಂತಃ ಶರಣರ ಕಲ್ಯಾಣ ಮಹೋತ್ಸವನ್ನು ಕಂಡು ನನ್ನ ಕಣ್ಣುಗಳಲ್ಲಿ ಆನಂದ ಭಾಷ್ಪ ಬರತಾಯಿದೆ. ಅಪಾರವಾಗಿ ಸೇರಿರುವ ಬಸವೇಶ್ವರ ನಗರದ ಸದ್ಭಕ್ತರನ್ನು ಕಂಡು ಪುಳಕಿತಗೊಂಡಿದ್ದೇನೆ. ಶರಣಬಸವೇಶ್ವರರು 12ನೇ ಶತಮಾನದ ಕಲ್ಯಾಣವನ್ನು ಮತ್ತೆ ಕಲಬುರಗಿಯಲ್ಲಿ ಸ್ಥಾಪಿಸಿದ್ದರು. ದಾಸೋಹ ಮತ್ತು ಶಿಕ್ಷಣ ಶರಣರ ಆಚರಣೆ ಪಾಲಿಸಿಕೊಂಡು ನಾವು ಬಂದಿದ್ದೇವೆ. ಬಸವೇಶ್ವರ ನಗರದ ಜನತೆಯ ಭಕ್ತಿ ಮತ್ತು ಧರ್ಮದ ಕಾರ್ಯಕ್ರಮಗಳು ಸದಾ ಹೀಗೆ ನಡೆದುಕೊಂಡು ಬರಲಿ ಮತ್ತು ಶರಣಬಸವೇಶ್ವರರ ಕರುಣೆ ಸದಾ ತಮ್ಮ ಮೇಲೆ ಇರಲಿ ಎಂದು ತಿಳಿಸಿದರು.

Contact Your\'s Advertisement; 9902492681

ಸ್ವಾಗತ ಮತ್ತು ನಿರೂಪಣೆಯನ್ನು ಡಾ. ಸಂಗಮೇಶ ಎಸ್. ಹಿರೇಮಠ ನಿರ್ವಹಿಸಿದರು. ಗುರುಸ್ವಾಮಿಯವರು ಪ್ರಾಸ್ತಾವಿಕದಲ್ಲಿ ದೇವಸ್ತಾನ ನಡೆದು ಬಂದ ದಾರಿ ವಿವರಿಸಿದರು. ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಬಸವರಾಜ ಶಟಗಾರ ಮತ್ತು ಅಧಿಕಮಾಸದ ಪುರಾಣದ ಅಧ್ಯಕ್ಷ ವೀರುಪಾಕ್ಷಯ್ಯ ಮಠಪತಿಯವರು ಪೂಜ್ಯ ಮಾತೋಶ್ರೀಯವರಿಗೆ ಗೌರವ ಸಮರ್ಪಣೆ ಮಾಡಿದರು.

ಡಾ. ಶ್ಯಾಮಲಾ ಶಿವಕುಮಾರ ಅವರು ಪೂಜ್ಯ ಮಾತೋಶ್ರೀ ಅವರ ಪರಿಚಯ ಮಾಡಿಕೊಟ್ಟರು. ಶಿವಕುಮಾರ ಸ್ವಾಮಿಯವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಕಮಿಟಿಯ ಸದಸ್ಯರಾದ ಶ್ರೀಕಾಂತ ಶೆಟ್ಟಿ, ವೀರಣ್ಣ ಮರಗೋಳ, ಶಿವಶಂಕರ, ಸಿದ್ದು ಮಹಾಗಾಂವ, ಶರಣು ಗೊಬ್ಬುರ, ಮನೋಹರ, ಶಿವಾನಂದ ಯಳವಂತಿಗಿ ಕಲಾವಿದರಾದ ಪಂಡಿತ ಶಿವಬಸಯ್ಯ ಶಾಸ್ತ್ರಿಗಳು, ಶಿವಲಿಂಗಯ್ಯ ಪಠಪತಿ, ಮಲ್ಲಿಕಾರ್ಜುನ ವರನಾಳ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here