ಖರ್ಗೆಗೆ ಅರಗ ಜ್ಞಾನೇಂದ್ರ ಕ್ಷಮೆಯಾಚಿಸಬೇಕು: ಸಂಗಾವಿ

0
16

ಕಲಬುರಗಿ: ಮಾಜಿ ಸಚಿವ ಅರಗ ಜ್ಞಾನೇಂದ್ರ ಇವರು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಲಘುವಾಗಿ ಅವಹೇಳನ ಮಾತನಾಡಿದ್ದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ ರವರು ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತು ಸುಣ್ಣವಾಗಿದ್ದು, ಸೋಲಿನ ಹತಾಶೆಯಿಂದ ಹೊರಬರಲಾರದೆ ತಲೆ ಮತ್ತು ಮನಸ್ಸಿಗೆ ಸಂಬಂದವಿಲ್ಲದಂತೆ ಹೇಳಿಕೆ ನೀಡುತ್ತಿರುವದು ನೋಡಿದರೆ ಮಾಜಿ ಗೃಹ ಸಚಿವರಾದ ಅರಗ ಜ್ಞಾನೆಂದ್ರ ಇವರಿಗೆ ಬುದ್ದಿ ಭ್ರಮಣೆಯಾಗಿದೆ ಎಂಬ ಸಂಶಯ ಕಂಡುಬರುತ್ತದೆ.

Contact Your\'s Advertisement; 9902492681

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರದಲ್ಲಿ ಪೈಪೆÇೀಟಿ ನೀಡುವ ಸಮಬಲದ ಹಿರಿಯ, ವಿಚಾರವಂತ, ಮೇಧಾವಿ, ಮುತ್ಸದ್ಧಿ ಹಾಗೂ ಅನುಭವಿ ರಾಜಕಾರಣಿಯಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಅರಗ ಜ್ಞಾನೇಂದ್ರ ಇವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಾ, ಈ ರೀತಿಯ ಅವಹೇಳನ ಹೇಳಿಕೆ ಮರುಕಳುಹಿಸದಂತೆ ಅರಗ ಜ್ಞಾನೇಂದ್ರ ಇವರಿಗೆ ಎಚ್ಚರಿಕೆ ಗಂಟೆಯ ಮೂಲಕ ಎಚ್ಚರಿಸುತ್ತಾ ಮಾಧ್ಯಮದ ಮುಂದೆ ಹೇಳಿಕೆ ನೀಡುವ ಮುನ್ನ ನಾಲಿಗೆ ಬಿಗಿಹಿಡಿದು ಮಾತನಾಡಲಿ, ಒಂದು ವೇಳೆ ಇದೆ ಚಾಳಿ ಮುಂದುವರಿಸಿದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಗಾವಿ ಅವರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಾ, ಅರಗ ಜ್ಞಾನೇಂದ್ರ ಇವರು ಕೂಡಲೇ ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಷಮೆಯಾಚಿಸಬೇಕೆಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here