ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ

0
26

ಕಲಬುರಗಿ: ಸಂಘಪರಿವಾರ ಹಬ್ಬಿದ ದ್ವೇಷದ ನಂಜು ಇಡೀ ದೇಶಕ್ಕೆ ಹಬ್ಬಿದೆ. ಮತೀಯ ಹಿಂಸಾಚಾರ, ಜಾನಾಂಗೀಯ ಕಲಹ, ಕೋಮು ದ್ವೇಷ ದೇಶವನ್ನು ಹೊತ್ತಿ ಉರಿಸುತ್ತಿದೆ ಎಂದು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದರು.

ಸಂಘಪರಿವಾರ ಹಬ್ಬಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ ಜಾನಾಂಗೀಯ ಕಲಹ, ಹರಿಯಾಣಾದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿ RPF ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಬಿಜೆಪಿ ಮತ್ತು ಸಂಘಪರಿವಾರದ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಬಿಜೆಪಿ ಪಕ್ಷಕ್ಕೆ ಹಿಂಸಾಚಾರ, ಕೋಮು ದ್ವೇಷ ರಾಜಕೀಯ ಅಸ್ತ್ರ ಆ ಕಾರಣಕ್ಕಾಗಿಯೇ ಮೂರು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅಲ್ಲಿ ಶಾಂತಿ ಮರಳುವಂತೆ ಮಾಡುವ ನಿಟ್ಟಿನಲ್ಲಿ ಒಂದೇ ಒಂದು ಪ್ರಯತ್ನವನ್ನೂ ಮೋದಿ ನೇತೃತ್ವದ ಸರ್ಕಾರ ಮಾಡಲಿಲ್ಲ. ಪ್ರಾಧಾನಿಯಾಗು ಮೋದಿ ಅಲ್ಲಿನ ಜನರಿಗೆ ಶಾಂತಿ ಕಾಪಾಡಿ ಎಂದು ಹೇಳುವ ತಮ್ಮ ಕನಿಷ್ಠ ಕರ್ತವ್ಯವನ್ನೂ ಪಾಲಿಸಲಿಲ್ಲ. ಮಣಿಪುರ ಎಂಬ ಪದ ಬಳಸಲೂ ಹಿಂಜರಿದರು. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣ ಹೊರ ಬಂದಾಗ ವಿಧಿ ಇಲ್ಲದೆ ಮಣಿಪುರದ ಬಗ್ಗೆ ಮೋದಿ ಮಾತನಾಡಿದರಾದರೂ ಅವರ ಮಾತಿನಲ್ಲಿ ಘಟನೆಯ ಕುರಿತು ವಿಷಾದ ಅಥವಾ ನೋವಿಗಿಂತ ಹೆಚ್ಚಾಗಿ, ಈ ಘಟನೆಯಿಂದ ತಮ್ಮ ಇಮೇಜಿಗೆ ಧಕ್ಕೆಯಾಗಿದೆ ಅನ್ನುವ ಸಿಟ್ಟು ಎದ್ದು ಕಾಣುತ್ತಿತ್ತು.

ಇನ್ನು ಹರಿಯಾಣಾದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಕೊಂದು ತಲೆ ಮರೆಸಿಕೊಂಡಿರುವ ಮೋನು ಮನೇಸರ್ ಹರಿಬಿಟ್ಟ ಪ್ರಚೋದನಕಾರಿ ವೀಡಿಯೊ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಆತ ಹಾಕಿದ ಸವಾಲು ಮುಖ್ಯ ಕಾರಣ. ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ಅಲ್ಲಿನ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾದರು. ಅಲ್ಲಿ ಮಸೀದಿಗಳಿಗೆ ಬೆಂಕಿ ಹಚ್ಚಿ ಒಬ್ಬರು ಇಮಾಮರನ್ನು ಕೊಲೆ ಮಾಡಲಾಗಿದೆ ಮತ್ತು 5 ಮಂದಿ ಅಮಾಯಕರು ಜೀವ ತೆತ್ತಿದ್ದಾರೆ ಎಂದು ತಿಳಿಸಿದರು.

ದೇಶದ ಎಲ್ಲೆಡೆ ಹಬ್ಬಿದ ದ್ವೇಷದ ವಿಷ ರೈಲ್ವೆ ಭದ್ರತಾ ಸಿಬ್ಬಂದಿಯ ತಲೆಗೂ ಹೊಕ್ಕಿದ್ದು ದುರಂತ. ಮಹಾರಾಷ್ಟ್ರದಲ್ಲಿ RPF ಯೋಧ ಚೇತನ್ ಸಿಂಗ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತನ್ನ ಉನ್ನತ ಅಧಿಕಾರಿಯನ್ನು ಗುಂಡಿಕ್ಕಿ ಕೊಂದು ನಂತರ, ಭೋಗಿಯಿಂದ ಭೋಗಿಗೆ ಹೋಗಿ ಮುಸ್ಲಿಂ ಪ್ರಯಾಣಿಕರನ್ನು ಹುಡುಕಿ 3 ಜನ ಅಮಾಯಕ ಮುಸ್ಲಿಂ ಪ್ರಯಾಣಿಕರನ್ನು ಕೊಂದಿದ್ದಾನೆ. ಇದು ದೇಶದಲ್ಲಿ ಸಂಘಪರಿವಾರಾದ ಜೊತೆ ಸೇರಿಕೊಂಡು ಗೋದಿ ಮಾಧ್ಯಮ ಹಬ್ಬಿರುವ ದ್ವೇಷದ ಪರಿಣಾಮ ಎಂಬುದು ಹತ್ಯಾಕಾಂಡದ ನಂತರ ಯೋಧ ಮಾತನಾಡಿರುವ ಮಾತುಗಳಿಂದ ಸ್ಪಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂಸಾಚಾರದ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ SDPI ಜಿಲ್ಲಾಧ್ಯಕ್ಷ ಸೈಯದ್ ದಸ್ತಗೀರ್, ರಾಜ್ಯ ಪರಿಷತ್ ಸದಸ್ಯ ಅಬ್ದುಲ್ ರಹೀಮ್ ಪಟೇಲ್, ಡಾ. ರಿಜ್ವಾನ್ ಅಹಮದ್, SDPI ಗುಲಬರ್ಗಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಲೀಂ ಇಲಾಹಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here