ರಾಜ್ಯದಲ್ಲಿ ರಾಜಕೀಯ ಕಾಲೇಜು ನಿರ್ಮಾಣದ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳಿಂದ ಒಪ್ಪಿಗೆ; ಸಭಾಪತಿ ಬಸವರಾಜ ಹೊರಟ್ಟಿ

0
13

ಬೆಂಗಳೂರು; ನಮ್ಮ ರಾಜ್ಯದಲ್ಲಿ ರಾಜಕೀಯ ಕಾಲೇಜು ನಿರ್ಮಾಣದ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಇಂದು ವಿಕಾಸಸೌಧದ ಸಿಟಿಜನ್ ಕನ್ನಡ ಮತ್ತು ಸಿಟಿಜನ್ ಇಂಡಿಯಾ ಸಮೂಹ ಮಾಧ್ಯಮ ಸಂಸ್ಥೆ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಸಿಟಿಜನ್ ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಸಿದ ಸಭಾಪತಿಗಳು ಅಖಿಲ ಭಾರತ ಶಾಸಕರ 3 ದಿನ ಸಮ್ಮೇಳನವು ಮುಂಬೈನಲ್ಲಿ ನಡೆದಿತ್ತು. ನಂತರ ನಮ್ಮ ರಾಜ್ಯದಲ್ಲಿ ರಾಜಕೀಯ ತರಬೇತಿ ಕಾಲೇಜು ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ರಾಜ್ಯದಲ್ಲಿ ರಾಜಕೀಯ ಕಾಲೇಜು ನಿರ್ಮಾಣದ ಕುರಿತು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದರು.

Contact Your\'s Advertisement; 9902492681

ಕಾರ್ಯಕ್ರಮವು ಚರ್ಚೆಗೆ ಮಾತ್ರ ಸೀಮಿತವಾಗದೆ, ರಾಜ್ಯದಲ್ಲಿ ಉತ್ತಮ ರಾಜಕಾರಣ ನಿರ್ಮಾಣವಾಗುವ ದಿಸೆಯಲ್ಲಿ ಸಲಹೆಗಳನ್ನು ನೀಡಬೇಕು ಎಂದರು. ಯುವಕರು ರಾಜಕೀಯಕ್ಕೆ ಬಂದು ಉತ್ತಮವಾಗಿ ಕೆಲಸ ಮಾಡಿ ಇತಿಹಾಸದಲ್ಲಿ ಹೆಸರು ಉಳಿಯುವಂತೆ ಮಾಡಲು ಕರೆ ನೀಡಿದರು.

ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್, ಕೆ ಪಾಟೀಲ ಅವರು ಮಾತನಾಡಿ ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಿಗೆ ಅವಕಾಶವಿದೆ. ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರಿಗೂ ಸಮಾಜದಲ್ಲಿ ಅತ್ಯುತ್ತಮವಾದ ಕೆಲಸ ಮಾಡಲು ಅವಕಾಶವಿರುತ್ತದೆ.

ಯುವಕರು ಮಾನವೀಯ ಗುಣಗಳಾದ ದಯೆ, ಕರುಣೆ, ಜನರ ವಿಶ್ವಾಸಗಳನ್ನು ಹೊಂದಿರಬೇಕು. ರಚನಾತ್ಮಕ ಕೆಲಸ, ಸಂಸದೀಯ ಮೌಲ್ಯವನ್ನು ತಿಳಿದಿಕೊಂಡು ಜನರ ಪ್ರತಿನಿಧಿಯಾಗಿ ಸಾರ್ವಜನಿಕರ ಹಿತ ಕಾಪಡಬೇಕು. ಮಾತಿನ ಚಾತುರ್ಯ, ವೈಚಾರಿಕತೆ, ಇತರರ ಅಭಿಪ್ರಾಯ ಗೌರವಿಸುವುದು, ಸಮಾಜದ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಮಾಡುವ ಉದ್ದೇಶ ಹೊಂದಿರಬೇಕು. ಜನ ಸೇವೆಯೆ ಜನಾರ್ಧನ ಸೇವೆ ಎಂದು ತಿಳಿದು ದೇಶ ನಿರ್ಮಾಣದಲ್ಲಿ ಹೆಜ್ಜೆ ಹಾಕಬೇಕು. ಸಮಾಜಕ್ಕೆ ಮಹಾತ್ಮ ಗಾಂಧಿ, ಜವಹಾರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.

ಸಮಾಜದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಯುವಕರು ಮುಂದೆ ಬಂದು, ಸಮಾಜದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಉತ್ತಮ ಸಮಾಜದ ನಿರ್ಮಾಣದ ಕೆಲಸ ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಪತಿಗಳಾದ ಡಾ. ಜಯಕರ ಎಸ್.ಎಂ., ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರಾದ ಕೆ. ದ್ವಾರಕಾನಾಥ್ ಬಾಬು, ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ. ಸುರೇಶ ವಿ. ನಾಡಗೌಡ, ಸಿಟಿಜನ್ ಗ್ರೂಪ್‍ನ ಶ್ರೀಮತಿ ಸ್ವಾತಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here