ಶಹಾಬಾದ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ; ಅಮೃತ್ ಭಾರತ್‍ದಡಿ ಆಯ್ಕೆ/ 26.76 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ

0
58

ಶಹಾಬಾದ: ಸಾರಿಗೆ ವ್ಯವಸ್ಥೆಗೆ ಮತ್ತು ಸಾರ್ವಜನಕರಿಗೆ ಜೀವನಾಡಿಯಾಗಿರುವ ರೈಲ್ವೆ ನಿಲ್ದಾಣಗಳಿಗೆ ಹೈಟೆಕ್ ಮಾದರಿಯಲ್ಲಿ ಆಧುನಿಕ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಯೋಜನೆ ನಿರ್ಮಿಸಿದ್ದು ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ರೇಲ್ವೆ ನಿಲ್ದಾಣ ಸಹ ಸೇರಿದ್ದು, ಅಗಸ್ಟ 6ರಂದು ಭೂಮಿಪೂಜೆ ನಡೆಯಲಿದೆ. ಅಮೃತ ಭಾರತ್ ಅಡಿ ಅಂದಾಜು 26.76 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಿ ಹೊಸ ರೂಪ ನೀಡುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 6 ರಂದು ಶಿಲನ್ಯಾಸ ಮಾಡಲಿದ್ದಾರೆ. ಪ್ರಸಕ್ತ ಬಜೆಟ್‍ನಲ್ಲಿ ಅಮೃತ್ ಭಾರತ್ ದೇಶಾದ್ಯಂತ 1275 ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸಲಾಗುತ್ತಿದೆ.ರಾಜ್ಯದಲ್ಲಿ 55 ನಿಲ್ದಾಣಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈಗ ಮೊದಲ ಹಂತದಲ್ಲಿ ರಾಜ್ಯದ 508 ರೈಲ್ವೆ ನಿಲ್ದಾಣಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿಗಳು ಶಿಲಾನ್ಯಾಸ ಮಾಡಲಿದ್ದಾರೆ. ಇದರಲ್ಲಿ ಶಹಾಬಾದ ರೇಲ್ವೆ ನಿಲ್ದಾಣವೂ ಒಳಗೊಂಡು ರಾಜ್ಯದ ಎಂಟು ಪ್ರಮುಖ ರೈಲು ನಿಲ್ದಾಣಗಳು ಇರುವುದು ವಿಶೇಷ. ಸೋಲಾಪೂರ ವಿಭಾಗಕ್ಕೆ ಒಳಗೊಂಡ ಒಟ್ಟು 11 ರೇಲ್ವೆ ನಿಲ್ದಾಣಗಳು ಪುನರಾಭಿವೃದ್ಧಿಗೊಳಿಸಲಾಗುತ್ತಿದೆ. ಕೋಪರಗಾಂವ್ ನಿಲ್ದಾಣ-29.94 ಕೋಟಿ, ಅಹಮದ್ ನಗರ ನಿಲ್ದಾಣ-30.92 ಕೋಟಿ,ದೌಂಡ ನಿಲ್ದಾಣ-44.17 ಕೋಟಿ,ಕುರುಡವಾಡಿ ನಿಲ್ದಾಣ-29.74ಕೋಟಿ, ಪಂಡರಾಪೂರ ನಿಲ್ದಾಣ-39.52ಕೋಟಿ,ಓಸ್ಮಾನಬಾದ ನಿಲ್ದಾಣ- 21.72ಕೋಟಿ, ಲಾತುರ ನಿಲ್ದಾಣ-19.10 ಕೋಟಿ,ಸೋಲಾಪೂರ- 55.85ಕೋಟಿ,ಕಲಬುರಗಿ ನಿಲ್ದಾಣ- 29.55 ಕೋಟಿ, ಶಹಾಬಾದ ನಿಲ್ದಾಣ-26.76ಕೋಟಿ, ವಾಡಿ ನಿಲ್ದಾಣ-36.32ಕೋಟಿ ಅನುದಾನ ಒದಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Contact Your\'s Advertisement; 9902492681

ಶಹಾಬಾದ ನಿಲ್ದಾಣಕ್ಕೆ ನಿತ್ಯ ಸಾವಿರಕ್ಕೂ ಹೆಚ್ಚು ಜನರ ಪ್ರಯಾಣಿಕರ ಓಡಾಟ ಇದೆ. ಹಾಗಾಗಿ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ನಿಲ್ದಾಣವನ್ನು ಉನ್ನತೀಕರಣ ಗೊಳಿಸಬೇಕೆಂಬ ಬೇಡಿಕೆತ್ತು. ಅದು ಅಮೃತ್ ಭಾರತ ಅಭಿವೃದ್ಧಿ ಯೋಜನೆಯಡಿ ಕಾಣಲಿದೆ. ವಿಶೇಷವಾಗಿ ಅಮೃತ ಭಾರತ ಯೋಜನೆಯಡಿ ರೈಲು ನಿಲ್ದಾಣದ ಪ್ರವೇಶ ದ್ವಾರಕ್ಕೆ ಸ್ಪರ್ಶ ನೀಡಲಾಗುವುದು. ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಈ ದ್ವಾರಗಳು ಆಕರ್ಷಿಸಲಿವೆ.ಅಲ್ಲಿ ಸಿಗುವ ಸೌಲಭ್ಯಗಳನ್ನು ಇಲ್ಲಿಯೂ ಪ್ರಯಾಣಿಕರಿಗೆ ದೊರಕಲಿದೆ. 26.76 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಶೌಚಾಲಯಗಳ ನವೀಕರಣ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಉಚಿತ ವೈಫೈ, ಆಹಾರ ಕೇಂದ್ರ, ಗಾರ್ಡನ್, ಚಾಜಿರ್ಂಗ ಪಾಯಿಂಟ್‍ಗಳು, ಎಸ್ಕಿಲೇಟರ್ ಸೇರಿದಂತೆ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಾಗಲಿವೆ.

ಅಮೃತ ಭಾರತ ಯೋಜನೆಯಡಿ ಪ್ರಧಾನಿ ಮೋದಿಜಿಯವರು ಶಹಾಬಾದ ನಿಲ್ದಾಣಕ್ಕೆ 26.76ಕೋಟಿ ಅನುದಾನಲ್ಲಿ ನೀಡಿ ನಿಲ್ದಾಣಕ್ಕೆ ಹೈಟೆಕ್ ಮಾದರಿಯಲ್ಲಿ ಆಧುನಿಕ ಸ್ಪರ್ಶ ಮುಂದಾಗಿರುವುದು ಹರ್ಷದಾಯಕ ವಿಷಯವಾಗಿದ್ದು,ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಈ ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಧಾನಿ ಮೋದಿ ಹಾಗೂ ರೇಲ್ವೆ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುವೆ- ಬಸವರಾಜ ಮತ್ತಿಮಡು ಶಾಸಕರು.

ನಗರ ರೇಲ್ವೆ ನಿಲ್ದಾಣ ಹೈಟೆಕ್ ಮಾದರಿಯಲ್ಲಿ ನವೀಕರಣಗೊಳ್ಳುತ್ತಿರುವುದು ಸಂತೋಷದಾಯಕ ವಿಷಯ. ಸಾರ್ವಜನಿಕರ ಸೌಲಭ್ಯಕ್ಕೆ ಇಲಾಖೆ ತೆಗೆದುಕೊಂಡಿರುವ ಕ್ರಮಕ್ಕೆ ಸ್ವಾಗತಿಸುತ್ತೆವೆ.ಅಲ್ಲದೇ ಈ ಹಿಂದೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡಬೇಕು.ಇದರಿಂದ ನೌಕರಸ್ಥರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.ಆ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು-ಶಿವರಾಜ ಇಂಗಿನಶೆಟ್ಟಿ ಗೌರವಾಧ್ಯಕ್ಷ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here