ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ

0
34

ಕಲಬುರಗಿ; ಕೆವಿಕೆ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಡಾ. ಎಂ. ಹೆಚ್ ಮರಿಗೌಡ ರವರ ಜನ್ಮ ದಿನದ ಪ್ರಯುಕ್ತ “ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ” ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಡೀನ್ ಕೃಷಿ ಮಹಾವಿದ್ಯಾಲಯ ಕಲಬುರಗಿ ಡಾ. ಎಂ. ಎಂ ಧನೋಜಿ ಮಾತನಾಡಿ ಬೆಳೆ ವೈವಿದ್ಯಮಯ ತೋಟಗಾರಿಕಾ ಬೆಳೆಗಳ ದೈನಂದಿನ ಜೀವನದಲ್ಲಿ ಪಾತ್ರದ ಕುರಿತು ವಿವರಿಸಿದರು. ಹಣ್ಣು, ತರಕಾರಿ ಮತ್ತು ಔಷಧಿ ಸಸ್ಯಗಳ ಹೊಸ ಹೊಸ ತಳಿಗಳು ವೈವಿದ್ಯತೆಯಿಂದ ಕೂಡಿದೆ ಹಾಗೂ ತೋಟಗಾರಿಕೆ ಲಾಭದಾಯಕ ಕ್ಷೇತ್ರೆಂದು ತಿಳಿಸಿದರು.

Contact Your\'s Advertisement; 9902492681

ವಲಯ ಕೃಷಿ ಸಂಶೋಧಕರಾದ ಡಾ. ಬಿ. ಎಮ್. ದೊಡ್ಡಮನಿ ಮಾತನಾಡಿ ಏಷ್ಯಾದಲ್ಲೆ ಭಾರತ ತೋಟಗಾರಿಕೆಯ ನಾಡು, ಆರ್ಥಿಕ ಪ್ರಗತಿಗಾಗಿ ತೋಟಗಾರಿಕೆ ಬಹು ಲಾಭದಾಯಕೆಂದರು.

ಹಿರಿಯ ತೋಟಗಾರಿಕಾ ನಿರ್ದೇಶಕರಾದ ಶಂಕರಗೌಡ ಪಾಟೀಲ್ ತೋಟಗಾರಿಕಾ ಇಲಾಖೆ ಸೌಲಭ್ಯ ಮಾಹಿತಿ ನೀಡಿದರು.
ಕೆವಿಕೆ ತೋಟಗಾರಕಾ ವಿಜ್ಞಾನಿ ಡಾ.ವಾಸುದೇವ್ ನಾಯಕ ಪ್ರಾಸ್ತವಿಕ ಮಾತನಾಡಿ ಡಾ. ಎಂ. ಹೆಚ್ ಮರಿಗೌಡ ರವರ ಕೊಡುಗೆ ಸಾಧನೆಗಳನ್ನು ವಿವರಿಸಿದರು. ವಿವಿಧ ತಳಿಯ ಸಸಿಗಳು ಪರಿಸರಕ್ಕೆ ಮತ್ತು ಮಾನವನಿಗೆ ಬಹುಉಪಯೋಗಿ ಎಂದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ ಮಣ್ಣಿನ ಆರೋಗ್ಯ, ಡಾ. ಜಹೀರ ಅಹಮದ ಸಸ್ಯರೋಗದ ಮಾಹಿತಿ ನೀಡಿದರು.
ಡಾ. ರಾಜು ಜಿ. ತೆಗ್ಗೆಳ್ಳಿ ಅಧ್ಯೆಕ್ಷತೆ ವಹಿಸಿದರು, ಜಗದೀಶ್ ವಂದಿಸಿದರು. ಒಟ್ಟು 65 ರೈತರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here