ಸುರಪುರ: ಸೈನಿಕರ ಅಭಿಮಾನಿ ಬಳಗದ ಕಾರ್ಗಿಲ್ ವಿಜಯೋತ್ಸವ 12ಕ್ಕೆ

0
14

ಸುರಪುರ: ಇದೇ 12ನೇ ತಾರಿಖು ನಗರದಲ್ಲಿ 24ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾಂiÀರ್iಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ರಾಜಾ ಚನ್ನಪ್ಪ ನಾಯಕ ತಿಳಿಸಿದರು.

ನಗರದ ಟೈಲರ್ ಮಂಜಿಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಸೈನಿಕರ ಅಭಿಮಾನಿ ಬಳಗ ಸುರಪುರ ವತಿಯಿಂದ ನಗರದ ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಗಿಲ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಮಾಜಿ ಹಾಗೂ ಹಾಲಿ ಸೈನಿಕರಿಗೆ ಸನ್ಮಾನಿಸಲಾಗುವುದು,ಅಲ್ಲದೆ ನಗರದ ತಹಸೀಲ್ ರಸ್ತೆಯಲ್ಲಿರುವ ಹುತಾತ್ಮ ವೀರಯೋಧ ಶರಣಬಸವ ಕೆಂಗುರಿಯವರ ಪುತ್ಥಳಿಯಿಂದ ಶ್ರೀಮಹರ್ಷಿ ವಾಲ್ಮೀಕಿ ವೃತ್ತ,ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ,ದರಬಾರ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತದ ವರೆಗೆ ರ್ಯಾಲಿ ನಡೆಸಲಾಗುವುದು,ನಂತರ ಕಾರು ಬೈಕ್‍ಗಳ ರ್ಯಾಲಿ ಮೂಲಕ ವೀರಶೈವ ಕಲ್ಯಾಣ ಮಂಟಪಕ್ಕೆ ತಲುಪಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಮದರ್ಭದಲ್ಲಿ ಮತ್ತೋರ್ವ ಮುಖಂಡ ಸಚಿನಕುಮಾರ ನಾಯಕ ಮಾತನಾಡಿ,ದೇಶದ ಯೋಧರ ಸ್ಮರ್ಣಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದು ಯಾವುದೇ ಜಾತಿ,ಮತ,ಧರ್ಮ,ರಾಜಕೀಯವನ್ನು ಹೊರತುಪಡಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ

.ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಮಾಜಿ ಹಾಗೂ ಕರ್ತವ್ಯದಲ್ಲಿರುವ ಸೈನಿಕರನ್ನು ಸನ್ಮಾನಿಸಲಾಗುವುದು,ಅಲ್ಲದೆ ಶಾಲಾ ಮಕ್ಕಳಿಂದ ಕಾರ್ಗಿಲ್ ವಿಜಯೋತ್ಸವದ ಕುರಿತು ಕಿರು ನಾಟಕ ಪ್ರದರ್ಶನ ಹಾಗೂ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನವೂ ಜರುಗಲಿದೆ ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ವೀರಯೋಧ ಶರಣಬಸವ ಕೆಂಗುರಿ ಪುತ್ಥಳಿಯಿಂದ ಮೆರವಣಿಗೆ ಹೊರಟು,1 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಜರುಗಲಿದೆ,ಕಾರ್ಯಕ್ರಮದ ಸಾನಿಧ್ಯವನ್ನು ಮಹಲ್ ರೋಜಾದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ,ಕಾರ್ಗಿಲ್ ವಿಜಯೋತ್ಸವದ ಕುರಿತು ಶಿಕ್ಷಕ ರಜಾಕ ಬಾಗವಾನ ಉಪನ್ಯಾಸ ನೀಡಲಿದ್ದಾರೆ,hಹುತಾತ್ಮ ಯೋಧ ಶರಣಬಸವ ಕೆಂಗುರಿ ಅವರ ತಂದೆ ಹಣಮಂತಪ್ಪ ಕೆಂಗುರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಆದ್ದರಿಂದ ಇಂತಹ ಅಮೋಘವಾದ ಕಾರ್ಯಕ್ರಮದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು,ದೇಶಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ರಾಜಾ ದೇವೆಂದ್ರ ನಾಯಕ,ರಾಜಾ ಉಡಚಪ್ಪ ನಾಯಕ,ಚಂದ್ರು ಪ್ರಧಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here