ಆಳಂದ: ಸಾಲೇಗಾಂವ ಚಿರತೆ ಹಾವಳಿ | ಸಾರ್ವಜನಿಕರು ಎಚ್ಚರಕ್ಕೆ ಅರಣ್ಯ ಅಧಿಕಾರಿ ಸೂಚನೆ

0
26

ಆಳಂದ: ತಾಲ್ಲೂನಿಕ ಸಾಲೇಗಾಂವ ಗ್ರಾಮದ ಹತ್ತಿರ ಚಿರತೆಯೊಂದು ನಾಯಿಯನ್ನು ತಿಂದು ಬಿಸಾಡಿದನ್ನು ಗ್ರಾಮಸ್ಥರ ದೂರಿನ ಮೇರೆಗೆ ಸಾಲೇಗಾಂವ ಗ್ರಾಮಕ್ಕೆ ಆರ್.ಎಫ್.ಓ ಜಗನ್ನಾಥ ಕೋರಳ್ಳಿ ಹಾಗೂ ಸಿಬ್ಬಂದಿಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸುತ್ತಮುತ್ತ ತೀರುಗಾಡಿ ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮದ ರೈತರು ಜಾಗೃತರಾಗಿರಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಬೆಳಗಿನ ಜಾವ ಗ್ರಾಮಸ್ಥರು ಚಿರತೆ ಎಂದು ಖಚಿತ ಪಡಿಸಿ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ಸ್ಥಳ ಬಂದು ಪರಿಶೀಲಿಸಿ ವೀಕ್ಷಿಸಿ ನಾಯಿಯ ದೇಹವನ್ನು ತಿಂದು ಕಾಲು ಮಾತ್ರ ಉಳಿದಿವೆ.

Contact Your\'s Advertisement; 9902492681

ಈ ಸ್ಥಳವನ್ನು ಸೂಕ್ಷತೆಯಿಂದ ಪರಿಶೀಲಿಸಿದಾಗ ಚಿರತೆ ಹೆಜ್ಜೆ ಗುರುತು ಕಂಡು ಬಂದಿರುವುದಿಲ್ಲ, ಈ ನಾಯಿಯ ದೇಹವನ್ನು ಚಿರತೆ ತಿಂದಿದ್ದೆ ಆದರೆ ಮತ್ತೆ ನಾಯಿ ಮತ್ತು ಆಕಳು ಕರುಗಳನ್ನು ತಿನ್ನುವ ಸಾಧ್ಯತೆ ಇದ್ದು, ರೈತರು ಹೋಲ ಗದ್ದೆಗಳಿಗೆ ಒಬ್ಬರು ಹೋಗದೇ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದು ಜಾಗೃತಿ ಕತೆಯಿಂದ ಹೋಗಿ ಬರಬೇಕು. ತಮ್ಮ ಜಾನುವಾರುಗಳು ಕೂಡಾ ಕಾಪಾಡಿಕೊಳ್ಳಬೇಕು.

ಈ ವಿಷಯವನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎರಡು ಮೂರು ದಿನಗಳಲ್ಲಿ ಚಿರತೆ ಇರುವುದು ಖಚಿತ ಪಟ್ಟರೆ, ಚಿರತೆ ಬಲೆ ತಂದು ಅದನ್ನು ಬಂಧಿಸಲಾಗುವುದು. ಸಾಲೇಗಾಂವ, ತೀರ್ಥ, ಚಿತಲಿ, ಖಜೂರಿ, ಖಂಡಾಳ, ನಿರಗುಡಿ, ಆಳಂಗಾ, ತಡೋಳಾ, ಬಂಗರಗಾ, ಗ್ರಾಮಸ್ಥರು ಜಾಗೃಕತೆಯಿಂದ ಇರಬೇಕೆಂದು ತಿಳಿಸಿ ಎಲ್ಲಾ ಗ್ರಾಮಗಳಲ್ಲಿ ಡಂಗೂರು ಸಾರಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ. ಆಳಂದ ಉಪ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಗಾಯಕವಾಡ ಹಾಗೂ ಸಿಬ್ಬಂದಿಯವರು ಜತೆಯಲ್ಲಿ ಇದ್ದರು.

ಸಾಲೇಗಾಂವ ಗ್ರಾಮದ ಹತ್ತಿರ ಚಿರತೆ ಬಂದಿದ್ದು, ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದ್ದಾರೆ. ಸಾಲೇಗಾಂವ ಸುತ್ತಮುತ್ತಲಿನ ಗ್ರಾಮಗಳ ಬೀಟ ರೂಟ್ ಪೊಲೀಸರು ಸಾರ್ವಜನಿಕರಿಗೆ ಚಿರತೆ ವಿಷಯ ಕುರಿತು ಎಚ್ಚರವಾಗಿರಲು ಮೋಬೈಲಗಳಿಗೆ ಸಂದೇಶ ಕಳುಹಿಸಿ ಮತ್ತು ರೈತರು ಹಗಲು ಮತ್ತು ರಾತ್ರಿ ಹೋಲ ಗದ್ದೆಗಳಿಗೆ ಹೋಗದಂತೆ ಅವರಿಗೆ ಮಾಹಿತಿ ನೀಡಿ ಹೋಗದಂತೆ ತಿಳಿಸಿ.- ಮಾಹದೇವ ಪಂಚಮುಖಿ, ಪಿಐ, ಪೊಲೀಸ ಠಾಣೆ, ಆಳಂದ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here