ಕಲಬುರಗಿ ಸಾಧಕರ ಕುರಿತು ಅಧ್ಯಯನ ಮಾಡಿದ  ರಾಜೇಂದ್ರಕುಮಾರಗೆ ಬೆಳಗಾವಿ ವಿವಿ ಡಾಕ್ಟರೇಟ್

0
16

ಕಲಬುರಗಿ: ಸಾಹಿತ್ಯಕ ಅಧ್ಯಯನಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ತಾಲ್ಲೂಕಿನ ಮುದ್ನಾಳ ನಿವಾಸಿ ರಾಜೇಂದ್ರಕುಮಾರ ಕೆ. ಇವರಿಗೆ ಪಿಎಚ್‍ಡಿ ಪದವಿಯನ್ನು ಪ್ರದಾನ ಮಾಡಿದೆ.

ಬೆಳಗಾವಿಯ ಬಿ.ಕೆ. ಕಾಲೇಜಿನ ಪ್ರಾಧ್ಯಾಪಕ ಡಾ. ರಾಮಕೃಷ್ಣ ಎಮ್. ಮರಾಠೆ ಅವರ ಮಾರ್ಗದರ್ಶನದಲ್ಲಿ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರುರ ಬಹುಶಿಸ್ತಿಯ ಅಧ್ಯಯನ (ಕಥನ ಕ್ರಮ, ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ) ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ವಿವಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

Contact Your\'s Advertisement; 9902492681

ಬರುವ ವರ್ಷದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ವಿಶ್ವವಿದ್ಯಾಲಯ ಕುಲಸಚಿವರು ತಿಳಿಸಿದ್ದಾರೆ.

ಚಂದ್ರಕಾಂತ ಕುಸನೂರು ಅವರು ಗುಲಬರ್ಗಾ ಮೂಲದ ಕುಸನೂರು ಗ್ರಾಮದವರಾಗಿದ್ದು ನಿಜಾಮ ಸರ್ಕಾರದಲ್ಲಿ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಹೈದ್ರಾಬಾದ್ ಸೇರಿದಂತೆ ಅನೇಕೆಡೆಗಳಲ್ಲಿ ಸೇವೆ ಸಲ್ಲಿಸಿದ್ದರು. 7-8 ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ಅವರು ಪ್ರಮುಖ ಭಾಷಾಂತರ ಕಾರರಾಗಿ ಕೆಲಸ ಮಾಡಿದ್ದರು. ಚಿತ್ರಕಲೆ, ಅನುವಾದ, ಸಂಗೀತ, ವಿಮರ್ಶೆ, ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದರು. ಇವರ ಬಗ್ಗೆ ಬಹುಶಿಸ್ತಿಯ ಅಧ್ಯಯನ ಕೈಗೊಂಡು ಮಹಾಪ್ರಬಂಧವನ್ನು ಬೆಳಗಾವಿ ವಿವಿಗೆ ಸಲ್ಲಿಸಿದ್ದು ವಿಶೇಷ.

ಯಾದಗಿರಿ ತಾಲ್ಲೂಕಿನ ಮುದ್ನಾಳ ಗ್ರಾಮದ ರಾಜೇಂದ್ರ ಕುಮಾರ ಕೆ. ಇವರು ಕಲ್ಬುರ್ಗಿ ವಿಭಾಗದ ಹಿಂದುಳಿದ ತೆಲುಗು ಕುಂಬಾರ ಸಮುದಾಯದಲ್ಲಿ ಪಿ.ಎಚ್.ಡಿ. ಪಡೆದ ಮೊದಲಿಗರು.

ಸಂಶೋಧನೆ, ರಂಗಭೂಮಿ, ವಿಚಾರ ವಿಮರ್ಶೆ ಪ್ರವಾಸ ಕಥನದಲ್ಲಿ ಆಸಕ್ತಿಯುಳ್ಳವರು, ಇಂದಿನ ದಿನಾಮಾನಗಳಲ್ಲಿ ಒಂದು ವಸ್ತುವನ್ನು ಇಟ್ಟುಕೊಂಡು ಸಂಶೋಧನೆ ನಡೆಸುವುದು ಸುಲಭ ಆದರೆ ಇವರು ಬಹುಶಿಸ್ತಿಯ ನೆಲೆಯಲ್ಲಿ ಸಾಂಸ್ಕøತಿಕ ಚಿಂತನೆಯನ್ನು ಗ್ರಹಿಸಿರುವುದು ಸ್ವಾಗತಾರ್ಹ,ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಖುಷಿ ಕೋಡುವ ಸಂಗತಿ ಈ ಸಂಶೋಧಕರು ಎಸ್.ಎಸ್.ಎಲ್.ಸಿ.ಯನ್ನು ನ್ಯೂ ಕನ್ನಡ ಪ್ರೌಢಶಾಲೆ, ಪಿಯುಸಿಯನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಯಾದಗಿರಿ, ಬಿಎ ಪದವಿಯನ್ನು ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ.

ಎಂಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಗುಲಬರ್ಗಾ ವಿವಿಯಿಂದ ಹಾಗೂ ಕಲ್ಬುರ್ಗಿ ಸರ್ಕಾರಿ ಬಿಇಡಿ ಮಹಾವಿದ್ಯಾಲಯದಿಂದ ಪಡೆದುಕೊಂಡಿರುತ್ತಾರೆ. ಸಧ್ಯ ಜಿಪಿಟಿ ಕನ್ನಡ ಶಿಕ್ಷಕರಾಗಿ ಚಿಂತನಳ್ಳಿಯ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಈಗ ಠಾಣಗುಂದಿಯ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗೆ ಚಿಂತನಳ್ಳಿ ಹಾಗೂ ಠಾಣಗುಂದಿ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಅಲ್ಲದೇ ಸ್ವಗ್ರಾಮದ ನಿವಾಸಿಗಳು ಆದ ಮಾಜಿ ಶಾಸಕ ಡಾ|| ವೀರಬಸವಂತರೆಡ್ಡಿ ಮುದ್ನಾಳ, ವೆಂಕಟರೆಡ್ಡಿಗೌಡ ಮುದ್ನಾಳ ರಾಚನಗೌಡ ಮುದ್ನಾಳ, ಶರಣಗೌಡ ಮುದ್ನಾಳ ಅವರು ರಾಜೇಂದ್ರ ಕುಮಾರ ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here