ಬಿಜೆಪಿ ಸರ್ಕಾರ ಕೆಕೆಆರ್ಡಿಬಿಯನ್ನು ದುರ್ಬಲಗೊಳಿಸಿತ್ತು; ಸಚಿವ ಪ್ರಿಯಾಂಕ್ ಖರ್ಗೆ ಆರೋಪ

0
12

ಕಲಬುರಗಿ: ಬಿಜೆಪಿ ಅವಧಿಯಲ್ಲಿ ಕೆಕೆಆರ್ಡಿಬಿಯನ್ನು ದುರ್ಬಲಗೊಳಿಸಲಾಗುತ್ತು. ಮಂಡಳಿಗೆ ಶೇ 96 ರಷ್ಟು ಅನುದಾನವನ್ನು ಬಳಸಿಕೊಂಡು ಅಭಿವೃದ್ದಿ ಮಾಡುವ ಅವಕಾಶವಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ‌ ಬಂದ ಮೇಲೆ ಅದನ್ನು ಶೇ 24 ಕ್ಕೆ ಇಳಿಸಲಾಗಿತ್ತು. ಇದರ ವಿರುದ್ದ ನಾವು ಧ್ವನಿ ಎತ್ತಿದ್ದೆವು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದರು.

ಕೆಕೆಆರ್ ಡಿಬಿ ಕಚೇರಿಯಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರು ಕೆಕೆಆರ್ ಡಿಬಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ನಡೆದ ಪತ್ರಿಕಾಗೋಷ್ಠಿ ಅವರೊಂದಿಗೆ ಸಚಿವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಕೆಕೆಆರ್ಡಿಬಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಮಾತನ್ನು ನಾನೂ ಹೇಳಿದ್ದೆ. ಆದರೆ ಸಿಎಂ ಅವರ ವಿವೇಚನಾ ಅಧಿಕಾರ ಬಳಸಿ ಅವರನ್ನು ( ಅಜಯ್ ಸಿಂಗ್ ) ನೇಮಿಸುವ ಸಂದರ್ಭ ಬಂದಾಗ ನಾವೆಲ್ಲ ಶಾಸಕರು ಅವರಿಗೆ ಬೆಂಬಲ ಸೂಚಿಸಿದೆವು. ಕೆಕೆಆರ್ಡ್ಬಿಯನ್ನು ಮತ್ತೆ ಸುಭದ್ರ ಸ್ಥಿತಿಗೆ ತರುವ ಉದ್ದೇಶವಿದೆ. ” ಕೆಕೆಆರ್ ಡಿಬಿಗೆ ನಿಗದಿಪಡಿಸಿದ ಅನುದಾನವನ್ನು ಬಳಸಿಕೊಂಡು ಈ ಭಾಗದ ಅಭಿವೃದ್ದಿಗೆ ಅಜಯ್ ಸಿಂಗ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಸಹಕಾರ ನೀಡಲಿದ್ದೇವೆ ” ಎಂದು ಸಚಿವರು ಹೇಳಿದರು.

ಅಜಯ್ ಸಿಂಗ್ ಅವರು ಒಂದು‌ ಯೋಜನೆ ಹಾಕಿಕೊಂಡಿದ್ದು ಕಕ‌ ಭಾಗದ ಅಭಿವೃದ್ದಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಸಚಿವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here