ಯುವಕರು ಗ್ರಂಥಾಲಯದತ್ತ ಹೆಜ್ಜೆ ಹಾಕುವಂತಾಗಲಿ

0
11

ವಾಡಿ: ಗ್ರಂಥಾಲಯ ದೇವಾಲಯಗಳಿಗಿಂತ ಪವಿತ್ರವಾಗಿದೆ ಗ್ರಂಥಾಲಯದಿಂದ ನಮ್ಮ ಬೌದ್ಧಿಕ ಮಟ್ಟ ವಿಕಸನಗೋಳ್ಳುತ್ತದೆ ಗ್ರಂಥಾಲಯಗಳು ಜಗತ್ತಿನ ಎಲ್ಲಾ ಜ್ಞಾನಾಮೃತವನ್ನು ತನ್ನೋಳಗೆ ಸಂಗ್ರಹಿಸಿಕೊಂಡ ಪವಿತ್ರ ಸ್ಥಳವಾಗಿದ್ದು ಯಾರು ಅಲ್ಲಿ ಶ್ರದ್ದೇ ನಿಷ್ಠೇಯಿಂದ ಅಧ್ಯಾಯನ ಕೈಗೋಳ್ಳುತ್ತಾರೊ ಅವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಎಂದು ಕನ್ನಡ ಸಾಹಿತ್ತಯ ಪರಿಷತ್ ವಾಡಿ ವಲಯ ಗೌರವ ಕಾರ್ಯದರ್ಶಿ ಚಂದ್ರು ಕರಣಿಕ ತಿಳಿಸಿದರು.

ಶನಿವಾರ ಹಲಕರ್ಟಿ ಸಾರ್ವಜನಿಕ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದ್ದ ಗ್ರಂಥಪಾಲಕ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಯುವಕರು ಅಲ್ಲಿ ಇಲ್ಲಿ ಕಟ್ಟೆ ಮೇಲೆ ಕುಳಿತು, ವಾಟ್ಸಅಪ್, ಫೇಸ್‍ಬುಕ್ ಗಳಲ್ಲಿ ಕಾಲ ಹರಣ ಮಾಡದೆ ಗ್ರಂಥಾಲಕ್ಕೆ ಬಂದು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು, ಗ್ರಂಥಾಲಯಗಳು ಜನಸಾಮನ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸುವಂತ ಕಾರ್ಯಕ್ರಮಗಳನ್ನು ರೂಪಿಸಬೇಕು ಪೋಷಕರು ತಮ್ಮ ಮಕ್ಕಳನ್ನು ಗ್ರಂಥಾಲಕ್ಕೆ ಕರೆತಂದು ಅದರ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಗ್ರಂಥಪಾಲಕ ಪ್ರಕಾಶ ಚಂದನಕೇರಿ ಮಾತನಾಡಿ ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ ಪ್ರಚಾರ ಮಾಡುವಲ್ಲಿ ಎಸ್. ಆರ್ ರಂಗನಾಥನ್ ಮೇಲು ಸ್ಥರದಲ್ಲಿ ನಿಲ್ಲುತ್ತಾರೆ, ಗ್ರಂಥಾಲಯ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ಡಾ: ಎಸ್. ಆರ್ ರಂಗನಾಥನ್ ಅವರ ಕೊಡುಗೆ ಅಪಾರವಾಗಿದೆ ಅದಕ್ಕಾಗಿ ಅವರನ್ನು ಗ್ರಂಥಾಲಯ ಪಿತಾಮಹ ಎಂದು ಕರೆಯುತ್ತಾರೆ ಎಂದು ಹೇಳಿದರು.

ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ ಮಾತಾಡಿದರು, ಬರಹಗಾರ ಮಡಿವಾಳಪ್ಪ ಹೇರೂರ, ತಾಪಂ ಇಒ ನೀಲಗಂಗಾ ಬಬಲಾದ, ನರೇಗಾ ಎಡಿ ಪಂಡಿತ ಸಿಂಧೆ ಡಾ|ಎನ್.ಆರ್.ರಂಗನಾಥ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಅರ್ಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here