ಅನೇಕ ಮಾಹಾನ್‌ ವ್ಯಕ್ತಿಗಳ ಹೋರಾಟದ ಫಲ ಈ ಸ್ವಾತಂತ್ರ್ಯ ದಿನ

0
17

ಸೇಡಂ: ಭಾರತ ಒಂದು ಸಮೃದ್ಧ ದೇಶ. ಈ ದೇಶದ ಸ್ವಾತಂತ್ರ ಸುಮ್ಮನೆ ದೊರೆಕಿದ್ದಲ್ಲ. ಇಲ್ಲಿನ ಅನೇಕ ಮಾಹಾನ್‌ ವ್ಯಕ್ತಿಗಳ ಹೋರಾಟ, ತ್ಯಾಗದಿಂದ ಈ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ನಾವೆಲ್ಲರೂ ದೇಶದ ರಕ್ಷಣೆಗಾಗಿ, ಅದರ ಏಳ್ಗೇಗಾಗಿ ಶ್ರಮಿಸಬೇಕಿದೆ. ಇವತ್ತಿನ ಮಕ್ಕಳಿಗೆ ದೇಶಭಕ್ತಿ ಹಾಗೂ ಹೋರಾಟಗಾರರು ಕುರಿತು ಮಾಹಿತಿ ನೀಡುವುದರ ಜೊತೆಗೆ ರಾಷ್ಟ್ರಾಭಿಮಾನ ಬೆಳೆಸಬೇಕು ಎಂದ ಶಿಕ್ಷಣ ಪ್ರೇಮಿ ಕೆ.ಎಂ.ವಿಶ್ವನಾಥ ಮತೂರ. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಸೇಡಂ ನಗರದ ಅನರ್ಘ್ಯರತ್ನ ಲಿಟಲ್‌ ಆರ್ಛಿಡ್‌ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅನರ್ಘ್ಯರತ್ನ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಉಷಾದೇವಿ ಮಾತನಾಡಿ, ನಮ್ಮ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಪ್ರಾರಂಭವಾಗಿದ್ದು, ನಮ್ಮ ಭಾಗದ ಮಕ್ಕಳಿಗೆ ಗುಣಾತ್ಮಕ ನೈಜ ಬದುಕಿನ ಶಿಕ್ಷಣ ಕೊಡುವ ಉದ್ದೇಶವನ್ನು ಹೊಂದಿದೆ. ಇದು ಮೊದಲ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಪಾಲಕರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವೀಗೊಳಿಸಿದ್ದಕ್ಕೆ ಅಭಿನಂದನೆ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಸಮಾರಂಭ ನಡೆಯಿತು, ಭಾಷಣವನ್ನು ಸಮರ್ಥ ತಂದೆ ಮಹೇಶ, ನೃತ್ಯವನ್ನು ಲಕ್ಷ್ಮಿ ಮತ್ತು ತಂಡ ನಾಯಕರು ಮಾಡಿದರು. ಎಲ್ಲಾ ಮಕ್ಕಳು ಹೆಮ್ಮೆಯಿಂದ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು.

ಕಾರ್ಯಕ್ರಮದಲ್ಲಿ ಸೇಡಂನ ಚಿಂತಕರಾದ ಸಿದ್ಧಲಿಂಗಪ್ಪ, ಶಿವಕಾಂತಮ್ಮ, ಸಂಪೂರ್ಣ , ಬಸವರಾಜ ಇತರರು ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here