ಸಹಕಾರ ಸಂಘ ಬೆಳೆಯಲು ಸರಿಯಾದ ಸಮಯಕ್ಕೆ ಸಾಲ ಮರು ಪಾವತಿ ಮುಖ್ಯ; ಸಜ್ಜನ್

0
13

ಸುರಪುರ: ಯಾವುದೇ ಒಂದು ಸಹಕಾರ ಸಂಘ ಬೆಳೆಯ ಬೇಕಾದರೆ ಸಾಲ ಪಡೆದವರು ಸರಿಯಾದ ಸಮಯಕ್ಕೆ ಸಾಲ ಮರು ಪಾವತಿ ಮಾಡುವುದು ತುಂಬಾ ಮುಖ್ಯವಾಗಿದೆ ಎಂದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ:ಸುರೇಶ ಸಜ್ಜನ್ ತಿಳಿಸಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ 28ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಸಂಘವು ಕೇವಲ 2 ಲಕ್ಷ ರೂಪಾಯಿಗಳಿಂದ ಆರಂಭಗೊಂಡು ಇಂದು ಸುಮಾರು 20 ಕೋಟಿಗಿಂತಲು ಅಧಿಕ ಹಣದ ವ್ಯವಹಾರ ನಡೆಸುತ್ತಿದ್ದು,2022-23ನೇ ಸಾಲಿನಲ್ಲಿ ಒಟ್ಟು 71,35,816.13 ರೂಪಾಯಿಗಳ ನಿವ್ವಳ ಲಾಭ ಬಂದಿದ್ದು,ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಸಹಕಾರ ಸಂಘದಲ್ಲಿ ನಮ್ಮದೂ ಒಂದು ಎಂದು ತಿಳಿಸಲು ಸಂತೋಷವಾಗುತ್ತದೆ.ಮುಂದಿನ ವರ್ಷ 1 ಕೋಟಿ ರೂಪಾಯಿಗಳ ಲಾಭ ಬರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು, ಇದುವರೆಗೆ ಸುರಪುರ ಹುಣಸಗಿ ಕಕ್ಕೇರ ಕೆಂಭಾವಿ ಕೊಡೇಕಲ್‍ನಲ್ಲಿ ನಮ್ಮ ಸಹಕಾರ ಸಂಘದ ಶಾಖೆ ತೆರೆಯಲಾಗಿದೆ.ಮುಂದಿನ ದಿನಗಳಲ್ಲಿ ಯಾದಗಿರಿ,ಶಹಾಪುರ,ವಡಗೇರ,ಸಗರ ಸೇರಿ ಜಿಲ್ಲೆಯಾದ್ಯಂತ ಶಾಖೆ ಆರಂಭಿಸಲು ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಈ ಹಿಂದೆ ನಿರ್ಣಯಿಸಿದಂತೆ ಕಲ್ಯಾಣ ಮಂಟಪದ ಬಳಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಅಶ್ವಾರೂಢ ಬಸವಣ್ಣನ ಮೂರ್ತಿ ಲೋಕಾರ್ಪಣೆ ಹಾಗೂ ನೂತನ ಮಳಿಗೆಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿ ಅದ್ಧೂರಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ನಂತರ ಬಸವೇಶ್ವರರ,ವಿಜಯಪುರದ ಲಿಂ:ಸಿದ್ದೇಶ್ವರ ಶ್ರೀಗಳು ಹಾಗೂ ಸಹಕಾರಿ ರಂಗದ ಮೂಲ ಪುರುಷ ಸಿದ್ದನಗೌಡ ಪಾಟೀಲ್ ಅವರ ವಾಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ,ನಂತರ ಸಂಘದ ಕಾನೂನು ಸಲಹೆಗಾರರಾಗಿದ್ದ ಎಸ್.ಎಮ್ ಕನಕರೆಡ್ಡಿ,ಸಂಘದ ಮಾಜಿ ನಿರ್ದೇಶಕ ಡಾ:ಶರಣಪ್ಪ ಯಾಳಗಿ ಸೇರಿದಂತೆ ಲಿಂಗೈಕ್ಯರಾಗಿರುವ ಸಮಾಜದ ಅನೇಕ ಜನ ಮಹನಿಯರಿಗೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಸಂಘದ ನಿರ್ದೇಶಕರಾದ ಡಿ.ಸಿ ಪಾಟೀಲ್,ರವೀಂದ್ರ ಅಂಗಡಿ ಸೇರಿದಂತೆ ಇತರರು ವಾರ್ಷಿಕ ವರದಿಯ ಆಯವ್ಯಯದ ಲೆಕ್ಕ ಮಂಡಿಸಿದರು.ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕರು ಮಾತನಾಡಿ ಸಂಘದ ಆರ್ಥಿಕ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮನೋಹರ ಜಾಲಹಳ್ಳಿ,ನಿರ್ದೇಶಕರಾದ ವಿಶ್ವರಾಧ್ಯ ಸತ್ಯಂಪೇಟೆ,ಹೆಚ್.ಸಿ ಪಾಟೀಲ್, ನಂದಯ್ಯಸ್ವಾಮಿ ಮಠಪತಿ,ವಿಜಯಕುಮಾರ ಬಂಡೊಳಿ,ಜಯಲಲಿತಾ ಪಾಟೀಲ್,ಮಂಜುನಾಥ ಗುಳಗಿ,ವೀರಪ್ಪ ಆವಂಟಿ,ಬಸವರಾಜ ಬೂದಿಹಾಳ,ಸಂಗನಬಸಪ್ಪ ಪಾಟೀಲ್,ವಿರೇಶ ನಿಷ್ಠಿ ದೇಶಮುಖ,ಸಿದ್ದಲಿಂಗಯ್ಯ ಸ್ವಾಮಿ ಕಡ್ಲೆಪ್ಪಮಠ,ಬಸಲಿಂಗಯ್ಯ ಹಿರೇಮಠ,ಶಿವರಾಜ ಬುದೂರ,ಪ್ರಕಾಶ ಕುಂಬಾರ ಕಕ್ಕೇರ ಇತರರು ವೇದಿಕೆ ಮೇಲಿದ್ದರು.ಮಲ್ಲಿಕಾರ್ಜುನ ಸತ್ಯಂಪೇಟೆ,ಬಸವರಾಜಪ್ಪ ನಿಷ್ಠೀ ದೇಶಮುಖ,ಸೋಮಶೇಖರ ಶಾಬಾದಿ,ಚನ್ನಮಲ್ಲಿಕಾರ್ಜುನ ಗುಂಡಾನೂರ,ರವಿಗೌಡ ಹೆಮನೂರ,ಬನದೇಶ್ವರ ಯಕ್ಕೆಳ್ಳಿ,ಸಿದ್ದನಗೌಡ ಹೆಬ್ಬಾಳ,ಚಂದ್ರಶೇಖರ ಅನಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಜಗದೀಶ ಪಾಟೀಲ್ ಸೂಗುರು ಸ್ವಾಗತಿಸಿದರು,ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here