ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಅಭಿವೃದ್ಧಿಗೆ ಶ್ರವಹಿಸಿ

0
79

ಶಹಾಬಾದ: ನಗರದಲ್ಲಿ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಮಡಿವಾಳ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು.

ಪಿಎಎಸ್‍ಐ ಚಂದ್ರಕಾಂತ ಮಕಾಲೆ ಅವರನ್ನು ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.

ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಕಾಂತ ಮಡಿವಾಳ ಮಾತನಾಡಿ,ಸಮಾಜದ ಜನರು ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಸಮಾಜದ ಅಭಿವೃದ್ಧಿಗೆ ಶ್ರವಹಿಸಬೇಕು.ಅಲ್ಲದೇ ಸಮಾಜದ ಮಕ್ಕಳು ಶಿಕ್ಷಿತರಾದರೆ ಮಾತ್ರ ಸಮಾಜದ ಏಳ್ಗೆ ಸಾಧ್ಯ.ಆ ನಿಟ್ಟಿನಲ್ಲೂ ಹೆಚ್ಚಿ ಗಮನಹರಿಸಬೇಕು.ಸಮಾಜದ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಸಂಘವು ರುದ್ರಭೂಮಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದೆ.ಅವರು ಕೂಡ ಭರವಸೆ ನೀಡಿದ್ದಾರೆ.ಆದಷ್ಟು ಎಲ್ಲರೂ ಈ ಕಾರ್ಯಕ್ಕೆ ಕರ್ಯಪ್ರವೃತ್ತರಾಗೋಣ ಎಂದರು.

Contact Your\'s Advertisement; 9902492681

ಗೌರವ ಅಧ್ಯಕ್ಷ ರಾಜು ಮಡಿವಾಳ, ಉಪಾಧ್ಯಕ್ಷ ಗುಂಡಪ್ಪ ಮಡಿವಾಳ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಪರೀಟ್ ಮಾತನಾಡಿ, ಮಡಿವಾಳ ಮಾಚಿದೇವ ನಿಗಮ ಮಂಡಳಿಗೆ ನಮ್ಮ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಮಡಿವಾಳ ಅವರನ್ನು ನಾಮನಿರ್ದೇಶನ ಮಾಡಲು ಒತ್ತಾಯಿಸಲಾಗುವುದೆಂದು ತಿಳಿಸಿದರು.

ಮಲ್ಲೇಶ್ ಮಡಿವಾಳ ವಾಡಿ ,ಸಾಬಣ್ಣ ಮಡಿವಾಳ , ಶಶಿಕಾಂತ ಮಡಿವಾಳ, ನಾಗು ಮಡಿವಾಳ, ಹಿರಿಯ ಮುಖಂಡರಾದ ಮನೋಹರ್ ಮಡಿವಾಳ,ರಾಜು ಮಡಿವಾಳ, ಮಡಿವಾಳಪ್ಪ ಮಡಿವಾಳ, ರೇವಪ್ಪ ಪರೀಟ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here