ಕಲಬುರಗಿ: ಗ್ರಾಮ ಪಂಚಾಯಿತ್ ರಾಜಕೀಯ ವೈಷ್ಯಮದ ಹಿನ್ನಲೆಯಲ್ಲಿ ವ್ಯಕ್ತಿ ಓರ್ವನ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಜಾಪೂರ ಗ್ರಾಮದ 9 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಆಗಸ್ಟ್ 21 ರಂದು ಗುಂಪು ಕಟ್ಟಿಕೊಂಡು ಬಂದು ಜಾತಿನಿಂದನೆ ಮಾಡಿ ಹಲೆ ಮಾಡಿದ್ದಾರೆ’ ಎಂದು ಪರಮೇಶ್ವರ ದೂರು ನೀಡಿದ್ದಾರೆ. ನಾಗಣಗೌಡ ಸೇರಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಜಾಪೂರ ಗ್ರಾಮ ಪರಮೇಶ್ವರ ಪೂಜಾರಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. 2021ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನನ್ನ ತಮ್ಮನ ಪತ್ನಿ ಗೆದ್ದಿದ್ದು, ಅಂದಿನಿಂದ ನಾಗಣಗೌಡ ಎಂಬುವವರು ಹಗೆತನ ಸಾಧಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.