ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಖರ್ಗೆ ಭರ್ಜರಿ ಪ್ರಚಾರ: ಶಾಸಕ ಅಲ್ಲಂಪ್ರಭು ಪಾಟೀಲ್ ಭಾಗಿ

0
23

ಕಲಬುರಗಿ: ತೆಲಂಗಾಣ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಕಾವೇರತೊಡಗಿದೆ. ಶನಿವಾರ ಮಧ್ಯಾಹ್ನ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಚವೆಲ್ಲಾ ಭಾಗದಲ್ಲಿ ನಡೆದ ಕಾಂಗ್ರೆಸ್ ಭರ್ಜರಿ ಪ್ರಚಾರ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ತೆಲಂಗಾಣ ರಾಜ್ಯದಲ್ಲಿ ಸ್ಸಿ- ಎಸ್ಟಿ ಪರವಾಗಿ 12 ಭರವಸೆಗಳ ಪಟ್ಟಿ ಬಿಡುಗಡೆ ಮಾಡಿ ಮತ ಯಾಚಿಸಿದ್ದಾರೆ.

ವಿಧಾನಸಭೆ ಚುನಾವಣೆಲ್ಲಿ ಮತದಾರರು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದು ಬಹುಮತದ ಕಾಂಗ್ರೆಸ್ ಸರ್ಕಾರ ರಚನೆಗೆ ಸಹರಿಸಿದರೆ 12 ಅಂಶಗಳ ಎಸ್ಸಿ- ಎಸ್ಟಿ ಕಲ್ಯಾಣ ಭರವಸೆ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಖರ್ಗೆಯವರು ಭರವಸೆಗಳ ಮಾಹಿತಿ ಇರುವ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

Contact Your\'s Advertisement; 9902492681

ಎಸ್ಸಿಗಳಿಗೆ ಶೇ. 18, ಎಸ್ಟಗಳಿಗೆ ಶ. 12 ಮೀಸಲಾತಿ ಹೆಚ್ಚಿಸಲಾಗುತ್ತದೆ. ಎಸ್ಸಿ- ಎಸ್ಟಿ ಕುಟುಂಬಗಳಿಗೆ 12 ಲಕ್ಷ ರು ಆರ್ಥಿಕ ನೆರವು ನೀಡಲಾಗುತ್ತದೆ. ಎಸ್ಸಿ- ಎಸ್ಟಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರದಿಂದ ಪೆÇ್ರೀತ್ಸಾಹ ಧನ ಪಡೆಯುವ ಕಂಪನಿಗಳಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂಬುದು ಸೇರಿದಂತೆ 12 ಭರವಸೆಗಳನ್ನು ಖರ್ಗೆಯವರು ಕಾಂಗ್ರೆಸ್ ಪಕ್ಷದ ಪರವಾಗಿ ತೆಲಂಗಾಣ ಜನತೆಗೆ ನೀಡಿದ್ದರೆ.

ಚವೆಲ್ಲಾ ಕ್ಷೇತ್ರದ ಉಸ್ತುವಾರಿಯಾಗಿರುವ ಕಲಬುರಗಿ ದಕ್ಷಿಣ ಕಾಂಗ್ರೆಸ್ ಪಕ್ಷದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಈ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಪರ ಭರ್ಜರಿ ಪ್ರಚಾರ ಮಾಡಿದರು. ತೆಲಂಗಾಣ ಕಾಂಗ್ರೆಸ್ ಸಮೀತಿಯ ಅಧ್ಯಕ್ಷ ರೇವಂತ ರೆಡ್ಡಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here