ಅರಿತು ನಡೆದರೆ ಜೀವನ ಸ್ವರ್ಗವಾಗುತ್ತದೆ

0
80

ಕಲಬುರಗಿ; ಮನಸ್ಸು ಭಾವನೆಗಳ ಗ್ರಂಥಾಲಯವಿದ್ದಂತೆ ಒಂದಿಷ್ಟು ಜನ ಮನಸ್ಸಿನ ಪುಟಗಳನ್ನು ಅರಿಯುವುದಕ್ಕಿಂತ ಹರಿಯುವುದೇ ಜಾಸ್ತಿ ಅರಿತುಕೊಂಡ ಜೀವನ ಸ್ವರ್ಗವಾಗುತ್ತದೆ ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ ಚೇರ್ ಪರ್ಸನ್ನರಾದ ಪೂಜ್ಯ ಡಾ. ದಾಕ್ಷಾಯಿಣಿ ಎಸ್ ಅಪ್ಪ ಹೇಳಿದರು.

ರವಿವಾರ ನಗರದ ರಾಜಾಪುರ ಬಡಾವಣೆಯ ಪ್ರಶಾಂತ ನಗರದಲ್ಲಿ ಅಮರಕಲಾ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಂಡಿರುವ ಅಮರಕಲಾ ಸ್ಟುಡಿಯೋ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ ಈ ಭಾಗದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಸಾಗಿ ಈ ಭಾಗದ  ಪ್ರತಿಭೆಗಳು ಬೆಳೆಸುವ ವೇದಿಕೆಯಾಗಲೆಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ, ಸಿದ್ದನಕೊಳ್ಳ ಗ್ರಾಮದ ನಿರಂತರ ದಾಸೋಹ ಹಾಗೂ ಕಲಾ ಪೋಷಕ ಮಠದ ಪೂಜ್ಯರಾದ ಡಾ. ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಆಸೆ ಬಿಟ್ಟ ವ್ಯಕ್ತಿ ಈಶನಾಗುತ್ತಾನೆ ಬಸವಾದಿ ಶರಣರು ಕಾಯಕಕ್ಕೆ ಮಹತ್ವ ನೀಡುವುದರೊಂದಿಗೆ ಅದರಲ್ಲಿಯೆ ದೇವರು ಕಂಡರು. ಮಠಾಧೀಶರು ಕೂಡ ಕಾಯಕದೊಂದಿಗೆ  ಸಮಾನತೆಯ ದೃಷ್ಟಿಕೋನದಿಂದ  ಜೀವನ ಸಾಗಿಸುವುದರೊಂದಿಗೆ ಭಕ್ತರಲ್ಲಿಯೆ  ದೈವತ್ವ ಕಾಣಬೇಕು. ನಂಬಿಕೆ ಜೀವನ ಸುಂದರಗೊಳಿಸಿದರೆ ಮೌಡ್ಯತೆ ಜೀವನ ಅದೋಗತಿ ಎತ್ತ ಒಯ್ಯುತ್ತದೆ.  ವಚನಗಳು ಪಚನ ಮಾಡಿಕೊಂಡು ಉತ್ತಮವಾದ ಸಮಾಜ ನಿರ್ಮಾಣಗೊಳಿಸಬೇಕು. ಅಮರ ಕಲಾ ತಂಡವು ಈ ಭಾಗದ ಕಲಾವಿದರನ್ನು ಬೆಳೆಸಿ ನಾಡಿಗೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ ಈ ಭಾಗದ ಕಲಾವಿದರು ತಮ್ಮ ಪ್ರತಿಭೆಯಿಂದ ಬೆಳೆಯುವುದರೊಂದಿಗೆ ಉತ್ತರ ಕರ್ನಾಟಕದ ಕೀರ್ತಿ ನಾಡಿಗೆ ಪರಿಚಯಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಡಾ. ಸಂಜನಾ ಪಾಟೀಲ ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷರಾದ ಅಮರ ಪ್ರಿಯ ಹೀರಮಠ ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಿಂದ ಸೇವಾ ನಿವೃತ್ತಿ ಹೊಂದಿದ ಮಾಣಿಕ ನಾಗೊಂಡ, ಶ್ರೀದೇವಿ ಹಲಕಾವಟಗಿ, ದೇವಕಿ ಬದ್ದು, ಗುರುಬಸಪ್ಪ ಪಾಟೀಲ, ಶಂಕರ ಬುಳ್ಳಾ, ಶಕುಂತಲಾ ಕುಕ್ಕುಂದ, ಸವಿತಾ ನವಲೆ ಅವರಿಗೆ ಗೌರವಿಸಲಾಯಿತು.

ಹಾಸ್ಯ ಕಲಾವಿದರಾದ  ಗುಂಡಣ್ಣ ಡಿಗ್ಗಿ ಹಾಗೂ ಜೂನಿಯರ್ ರಾಜಕುಮಾರ (ಹೇಮಂತ್ ಮಾಲಗತ್ತಿ) ಅವರಿಂದ ಹಾಸ್ಯರಸಮಂಜರಿ ನೆರವೇರಿತು.  ಕಾರ್ಯಕ್ರಮದಲ್ಲಿ ಪ್ರೊ. ವಾಸುದೇವ ಸೇಡಂ, ಏ. ಕೆ. ರಾಮೇಶ್ವರ, ರತ್ನಕಲಾ ಹಿರೇಮಠ, ವೀರಭದ್ರ ಸಿಂಪಿ, ಡಾ. ಅಲ್ಲಮಪ್ರಭು ದೇಶಮುಖ, ರವೀಂದ್ರ ಶಹಾಬಾದಿ, ಪೂಜಾ ಹಿರೇಮಠ, ದ್ರುವ ಹಿರೇಮಠ, ಸಿ ಎಸ್. ಬೊಮ್ಮಗೌಡ, ಮಾಹಾಂತೇಶ ಹಳ್ಳೂರ, ಸಿ ಎನ್ ಬಾಬಳಗಾಂವ,  ಸಿ ಎಸ್ ಮಾಲಿ ಪಾಟೀಲ, ಚಂದ್ರಶೇಖರ ಹಾವೇರಿ, ಕಲಾವಿದರಾದ ಶ್ರವಣಕುಮಾರ ಮಠ, ಮಲಕಾರಿ ಪೂಜಾರಿ, ಸಿದ್ಧಾರ್ಥ ಚಿಮ್ಮನ ಚೋಡ, ಸೇರಿದಂತೆ ಅನೇಕ ಜನ ಭಾಗವಹಿಸಿದರು. ಅಮರಕಲಾ ತಂಡದವರು ಪ್ರಾರ್ಥಿಸಿದರು. ದಯಾನಂದ ಹಿರೇಮಠ ಸ್ವಾಗತಿಸಿದರು.  ಸಿದ್ದಣ್ಣ ಕೋಲಾರ ನಿರೂಪಿಸಿದರು. ವೀರಭದ್ರಯ್ಯ ಹಿರೇಮಠ  ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here