ಕಲಬುರಗಿ; ಆಳಂದ ತಹಶೀಲ್ದಾರ್ ಮತ್ತು ಆರ್.ಐ ಲೋಕಾಯುಕ್ತರ ಬಲೆಗೆ

0
3352

ಕಲಬುರಗಿ; ಎನ್‌ಎ ಎನ್‌ಓಸಿ ಕೊಡಲು ಡಿಸಿಗೆ ಶಿಫಾರಸು ಮಾಡೋಕೆ 12 ಸಾವಿರ ರೂ. ಡಿಮ್ಯಾಂಡ್ ಮಾಡಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಆಳಂದ ಪಟ್ಟಣದ ತಹಶಿಲ್ದಾರ್ ಮತ್ತು ಆರ್.ಐ ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡಸೆದಿದೆ.

ಆಳಂದ ತಾಲ್ಲೂಕು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಆರ್‌ಐ ರಾಜಶೇಖರ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು ಎಂದು ತಿಳಿದುಬಂದಿದೆ. ಕಂದಾಯ ಅಧಿಕಾರಿ ರಾಜಶೇಖರ್ ಮೂಲಕ 12 ಸಾವಿರ ರೂ ಲಂಚ ಪಡೆಯುವಾಗ ಲೋಕಾ ಬಲೆಗೆ  ಬಿದ್ದಿದಾರೆ.

Contact Your\'s Advertisement; 9902492681

ಮೆಹಬೂಬ್ ಪಟೇಲ್ ಲಂಬೇವಾಡಿ ಎಂಬಾತರಿಗೆ ಎನ್‌ಎ ಎನ್‌ಓಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದರು. ಎನ್‌ಎ ಎನ್‌ಓಸಿ ಕೊಡಲು ಡಿಸಿಗೆ ಶಿಫಾರಸು ಮಾಡೋಕೆ ತಹಶಿಲ್ದಾರ್ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು ಎಂಬ ಆರೋಪ ಆಧಾರದ ಮೇಲೆ ಗುರುವಾರ ಲೋಕಾಯುಕ್ತ ಲೋಕಾಯುಕ್ತ ಎಸ್ಪಿ ಕರ್ನೂಲ್, ಮಾರ್ಗದರ್ಶನದಲ್ಲಿ ಸಿಪಿಐಗಳಾದ ನಾನಾಗೌಡ, ದ್ರುವತಾರೆ, ಅಕ್ಕಮಹಾದೇವಿ ನೇತೃತ್ವದಲ್ಲಿ ಗುರುವಾರ ತಹಶೀಲ್ ಕಚೇರಿ ಮೇಲೆ ದಾಳಿ ನಡೆಸಿ ತಹಶಿಲ್ದಾರ್ ಯಲ್ಲಪ್ಪ ಸುಬೇದಾರ್, ಆರ್‌ಐ ರಾಜಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here