ನಾರಾಯಣ ಗುರು ಅವರ ಆದರ್ಶ, ಮೌಲ್ಯಗಳು ಅಳವಡಿಸಿಕೊಳ್ಳಿ

0
24

ಶಹಾಬಾದ: ನಗರಸಭೆ ಕಚೇರಿಯಲ್ಲಿ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು.ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೆದಾರ ನಾರಾಯಣ ಗುರು ಹಾಗೂ ಶರಣ ನೂಲಿಯ್ಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ನಗರಸಭೆಯ ಪೌರಾಯುಕ್ತೆ ಪಂಕಜಾ ಮಾತನಾಡಿ, ಮಹನೀಯರ ಆದರ್ಶಗಳು ಒಂದು ಜಾತಿಗೆ ಸೀಮಿತವಲ್ಲ. ನಾರಾಯಣ ಗುರು ಅವರ ಆದರ್ಶ, ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಭೀಮಯ್ಯ ಗುತ್ತೆದಾರ ಮಾತನಾಡಿ, ಕೇರಳದಲ್ಲಿ ಜನಿಸಿದಂತಹ ನಾರಾಯಣ ಗುರು ಅವರು ಆಗಿನ ಸಂದರ್ಭದಲ್ಲಿ ಸಮಾಜದಲ್ಲಿನ ಅಸಮಾನತೆ, ಜಾತಿ ಜಾತಿಗಳ ಮಧ್ಯ ಇದ್ದ ವೈಷಮ್ಯ ಮತ್ತು ಅಸ್ಪøಶ್ಯತೆ, ಧರ್ಮಗಳ ಬಗ್ಗೆ ಭಿನ್ನಬೇಧ, ತಾರತಮ್ಯ ನಡೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ಅವರು ಸಮಾಜಕ್ಕೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಮೂಲಕ ಅಸಮಾನತೆ ಹೋಗಲಾಡಿಸಲು ಸಾಕಷ್ಟು ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದರು.

ಅಸ್ಪಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣಕ್ಕಾಗಿ ದಿಟ್ಟ ಹೆಜ್ಜೆ ಇಟ್ಟ ನಾರಾಯಣ ಗುರು ಅವರ ಚಿಂತನೆಗಳು, ತತ್ವಾದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ತತ್ವಾದರ್ಶ, ಚಿಂತನೆ, ಸಿದ್ದಾಂತಗಳ ಮೂಲಕ ಸಮಾಜದ ಸುಧಾರಣೆ ಮಾಡಲು ನಾವೆಲ್ಲರೂ ಹೆಚ್ಚಿನ ಪ್ರಯತ್ನ ಮಾಡೋಣ ಎಂದರು.

ಉಪಾಧ್ಯಕ್ಷ ಸಾಯಿಕುಮಾರ ಗುತ್ತೆದಾರ, ಭಗವಾನ ಗುತ್ತೆದಾರ,ಸುರೇಶ ಅಪಕಾರಿ,ಅರುಣ ಗುತ್ತೆದಾರ,ನಾರಾಯಣ ಗುತ್ತೆದಾರ, ಆಕಾಶ ಗುತ್ತೆದಾರ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here