ಕಲಬುರಗಿ: ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನಿಕರಣ ಯೋಜನೆಯ ಅಡಿಯಲ್ಲಿ ಕಲಬುರಗಿ ಮಹಾನಗರದ, ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ. 39 ಬಸವ ನಗರದಲ್ಲಿ ಹಾಟ್/ ಇಲಸರ್ 20 ಲಕ್ಷದ ಲೀಟರ್ ಮೇಲು ಮೇಲುಸ್ಥರದ ನೀರು ಸಂಗ್ರಹಗಾರ ಘಟಕದ ನಿರ್ಮಾಣವನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಗುದಲ್ಲಿ ಪೂಜೆ ನರವೇರಿಸಿ ಮಾತನಾಡುತ್ತಾ ಅಧಿಕಾರಿಗಳಗ ಹಾಗೂ ಮೇ” ಎಲ್ ಆಡ್ ಟಿ ಕಂಪನಿಯ ಅಧಿಕಾರಿಗಳಗ ನೀರು ಸಂಗ್ರಹಣ ಘಟಕವನ್ನು ತೀವ್ರಗತಿಯಲ್ಲಿ ಕಾಮಗಾರಿ ಸಪೂರ್ಣಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ಸರಬರಾಜು ಮಾಡಬೇಕೆಂದು ಸೂಚಿಸಿದರು.
ಕೆಯುಐಡಿಎಫ್‍ಸಿಯ ಯೋಜನಾ ಅನಷ್ಠಾನ ಘಟಕ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ ಬಿ ಪಾಟೀಲ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇದು 20 ಲಕ್ಷ ಲೀಟರ್ ನೀರು ಸಂಗ್ರಹಣ ಘಟಕವಾಗಿದ್ದು, ಸಮಾರು 3 ಸಾವಿರ ಕುಟುಂಬಗಳಿಗೆ ನೀರು ಸರಬರಾಜು ಮಾಡುವ ಸಾಮಥ್ರ್ಯ ಹೊಂದಿದ ಎಂದು ತಿಳುಸಿದರು.
ಈ ಕಾಮಗಾರಿಯು ಒಂದು ವರ್ಷದ ಒಳಗಡೆ ಪೂರ್ಣಗೊಳಿಸಿ ಇದರ ಮೂಲಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ರೇಣುಕಾ ಹೋಳಕರ್, ಕಾಂಗ್ರೆಸ್ ಮುಖಂಡರಾದ ಲಿಂಗರಾಜ ಕಣ್ಣಿ, ಕೆಯುಐಡಿಎಫ್‍ಸಿಯ ಕಾರ್ಯಪಾಲಕ ಅಭಿಯಂತರಾದ ಧನರಾಜ ಲದ್ದೆ, ಕೆಯುಐಡಿಎಫ್ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಸರೇಶ್, ಕೆಯುಐಡಿಎಫ್‍ಸಿ , ಸಹಾಯಕ ಅಭಿಯಂತರಾದ ಗಿರಿಶ್ ಪಿ. ಗದ್ದಾಲ್, ಸ್ಮೇಕ್ ಸಂಸ್ಥೆಯ ಸದಾನಂದ ಕಮಟಿ, ಮತ್ತು ಮೇ” ಎಲ್ ಆಡ್ ಟಿ ಕಂಪನಿ ಕಾಮಗಾರಿಯ ವ್ಯವಸ್ಥಾಪಕರಾದ ಕುಮಾರೇಸನ್ ಹಾಗೂ ರೇವಣಸಿದ್ದ ಭುಜಂಗೆ ಇದ್ದರು. ಈ ಕಾರ್ಯಕಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಮೇ” ಎಲ್ ಆಡ್ ಟಿ ಕಂಪನಿಯ ಸಾಮಾಜಿಕ ತಜ್ಞರಾದ ಲಿಂಗರಾಜ ಹಿರಾ ಅವರು ನಡೆಸಿಕೂಟ್ಟರು.