ಭೋವಿ ಸಮಾಜದ ಅಭಿವೃದ್ಧಿಗೆ ಸದಾಬದ್ಧ: ಸಚಿವ ತಂಗಡಗಿ

0
88

ಶಹಾಬಾದ: ನಗರದ ಬೋವಿ ಸಮಾಜದ ಯುವ ಮುಖಂಡರು ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಸನ್ಮಾನಿಸಿ, ಸಮಾಜದ ಪರವಾಗಿ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಹಾಗೂ ಭೋವಿ ಸಮಾದ ಮುಖಂಡ ವೆಂಕಟೇಶ ಪವಾರ ಮಾತನಾಡಿ, ಸರಕಾರ ಭೋವಿ ಸಮಾಜದ ವತಿಯಿಂದ ತಮ್ಮನ್ನು ಸಚಿವರಾಗಿ ಆಯ್ಕೆ ಮಾಡಿದ್ದಾರೆ.ತಾವು ಸಮಾಜದ ಅಭಿವೃದ್ಧಿಗೆ ಸದಾಕಾಲ ಶ್ರಮಿಸಿ, ಭೋವಿ ಅಭಿವೃದ್ಧಿ ಮಂಡಳಿಗೆ ಹೆಚ್ಚು ಅನುದಾನ ತರುವುದರ ಮೂಲಕ ಈ ಭಾಗದ ನಿರೋದ್ಯೋಗಿ ಯುವಕರ ಪಾಲಿಗೆ ಸಂಜೀವಿನಿಯಾಗಬೇಕು. ಇಲ್ಲಿನ ಬಹುತೇಕ ಸಮಾಜದ ಜನರು ಕಲ್ಲಿನ ಕಣಿಗಳ ಮೇಲೆ ಹಾಗೂ ಪಾಲಿಷ್ ಮಷಿನ್‍ಗಳ ಮೇಲೆಯೇ ಅವಲಂಬನೆಯಾಗಿದ್ದಾರೆ.ಅಲ್ಲದೇ ಕಡುಬಡತನದಿಂದ ಸಂಕಷ್ಟದಲ್ಲಿದ್ದಾರೆ.ಅವರಿಗೆ ನಿಗಮದಿಂದ ಏನಾದರೂ ಸಹಾಯ ಅನುದಾನ ಲಭಿಸಿದರೇ ತುಂಬಾ ಅನುಕೂಲವಾಗುತ್ತದೆ ಎಂದರಲ್ಲದೇ ಮನವಿ ಪತ್ರವನ್ನು ಸಲ್ಲಿಸಿದರು.

Contact Your\'s Advertisement; 9902492681

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಶಿವರಾಜ ತಂಗಡಗಿ, ಭೋವಿ ಸಮಾಜದಿಂದಲೇ ನಾನು ಇಷ್ಟೊಂದು ಎತ್ತರಕ್ಕೆ ಬಂದಿದ್ದೆನೆ.ನನಗೆ ಸಿಕ್ಕ ಅವಕಾಶದಲ್ಲಿ ಸಮಾಜದ ಅಭಿವೃದ್ಧಿಗೆ ಕಂಕಣಬದ್ಧನಾಗಿ ದುಡಿಯುತ್ತೆನೆ. ಶಹಾಬಾದನ ದಿ. ಸುಭಾಷ ಪವಾರ ಅವರು ಸಮಾಜಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದ್ದರು. ಭೋವಿ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಮುಖ್ಯಮಂತ್ರಿಗೆ ಅವರಿಗೆ ಮನವಿ ಮಾಡುವುದರ ಮೂಲಕ ಸಮಾಜದ ಏಳ್ಗೆಗೆ ಕೆಲಸ ಮಾಡುತ್ತೆನೆ ಎಂದರು.

ಈ ಸಂದರ್ಭದಲ್ಲಿ ರಾಕೇಶ ಪವಾರ, ಭಾನು ಪ್ರತಾಪ, ಧನರಾಜ ಪವಾರ,ರಾಜು ಗುತ್ತೆದಾರ, ರಾಮು ಕುಸಾಳೆ,ಶರಣಪ್ಪ ಗುಂಡಗುರ್ತಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here