ಬಸವ ಎಂಬ ಮೂರಕ್ಷರ ಎದೆಯೊಳಗೆ ತುಂಬಿದ್ದರೇ ಅಸಾಧ್ಯವಾದುದು ಸಾಧ್ಯ

0
67

ಶಹಾಬಾದ: ಬಸವ ಎಂದರೆ ಕಲ್ಪವೃಕ್ಷ, ಬಸವ ಎಂದರೆ ಕಾಮದೇನು.ಬಸವ ಎಂಬ ಮೂರಕ್ಷರವನ್ನು ಎದೆಯೊಳಗೆ ತುಂಬಿದ್ದರೇ ಅಸಾಧ್ಯವಾದುದು ಸಾಧ್ಯವಾಗುತ್ತದೆ ಎಂಬುದು ಸುಳ್ಳಲ್ಲ ಎಂದು ಶರಣ ಸಾಹಿತಿ ಮತ್ತು ಶರಣ ಮಾರ್ಗ ಪತ್ರಿಕೆಯ ಸಂಪಾದಕರಾದ ಡಾ.ಶಿವರಂಜನ್ ಸತ್ಯಂಪೇಟೆ ಹೇಳಿದರು.

ಅವರು ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಬಸವ ತತ್ವದರ್ಶನ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

Contact Your\'s Advertisement; 9902492681

ಇಂದಿಗೂ ನಮ್ಮ ಗ್ರಾಮೀಣ ಭಾಗದಲ್ಲಿ ಕುಂತರೂ, ನಿಂತರೂ, ಎದ್ದರೂ,ಬದ್ದರೂ ಬಸವ ಎನ್ನುವ ರೂಢಿ. ಬಸವ ಎನ್ನುವುದು ಒಂದುವ್ಯಕ್ತಿಯ ಹೆಸರಲ್ಲ ಬಸವ ಎನ್ನುವುದು ಒಂದು ಸಿದ್ಧಾಂತ.ಅದೊಂದು ಪ್ರಜ್ಞೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.

ಇಂದು ನಾವು ಮನಸ್ಸು ಮಾಡಿದರೆ ಕಾವಿ, ಬಿಳಿ ಬಟ್ಟೆ ತೊಟ್ಟು ಹಣೆಗೆ ವಿಭೂತಿ, ರುದ್ರಾಕ್ಷಿ ಹಾಕಿ,ನಾಮಗಳನ್ನು ಬಡಿದುಕೊಂಡು ಗುಡ್ಡದಲ್ಲಿ ಜಪ-ತಪ ಮಾಡಿದರೇ ಸ್ವಾಮಿಗಳಾಗಬಹುದು ಅಥವಾ ದೇವ ಮಾನವರಾಗಬಹುದು. ಆದರೆ 12ನೇ ಶತಮಾನದಿಂದ ಇಂದಿನವರೆಗೂ ಯಾರಿಗೂ ಬಸವಣ್ಣನವರಂತೆ ಆಗುವುದಕ್ಕೆ ಸಾಧ್ಯವಾಗಲಿಲ್ಲ. ಕಾರಣ ಬಸವಣ್ಣ ಯಾರಿಗೂ ನಿಲುಕಲಾರದಂತ ವ್ಯಕ್ತಿತ್ವ.ಆತ ಎಲ್ಲಾ ಸಮಾಜದ ಜನರನ್ನು ಒಂದುಗೂಡಿಸಿದ ಮಹಾನ್ ಜ್ಯಾತ್ಯಾತೀತ ಪುರುಷ ಎಂದು ಹೇಳಿದರು.

ಬಸವಣ್ಣನವರು ವರ್ಗಬೇಧ, ವರ್ಣಬೇಧ, ಲಿಂಗಬೇಧ ಮತ್ತು ಅಸ್ಪ್ರಶ್ಯತೆ ಇಲ್ಲದ ಜಾತ್ಯತೀತ ಸಮಾಜವನ್ನು ಕಟ್ಟ ಬಯಸಿದ್ದರು. ಆದರೆ ಪ್ರಸ್ತುತ ಸಮಾಜ ಆಧುನಿಕ ಅಬ್ಬರದಲ್ಲಿ ಬಸವಪ್ರಜ್ಞೆಯನ್ನು ಮರೆತಿದ್ದಾರೆ. ಬಸವ ಪ್ರಜ್ಞೆಯಲ್ಲಿ ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ ಆಯಾಮ, ಹೊಸ ಜಗತ್ತಿನ ಉದಯವಿದೆ. ವಚನಕಾರರಿಗೆ ಯಾವ ಜಾತಿಯೂ ಇಲ್ಲ. ಅವರೆಲ್ಲ ಮನುಷ್ಯತ್ವನ್ನು ಆವಿರ್ಭವಗೊಳಿಸಿ ಜಗತ್ತಿಗೆ ಮಾದರಿಯಾಗಿ ಬದುಕಿದ ಶರಣರು. ಅವರನ್ನು ಆಯಾ ಜಾತಿಗೆ ಅಂಟಿಸಿನೋಡುವ ಪ್ರವೃತ್ತಿ ಸಲ್ಲ ಎಂದರು.

ಗದುಗಿನ ಪ್ರವಚನಕಾರರಾದ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು. ಅತಿಥಿಗಳಾಗಿ ಮಾಲಗತ್ತಿ ಗ್ರಾಪಂ ಅಧ್ಯಕ್ಷ ಸದಾಶಿವ ನಡುವಿನಕೇರೆ, ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್, ಮಾಜಿ ಅಧ್ಯಕ್ಷ ಅಮೃತ ಮಾನಕರ್,ಶಿವಪುತ್ರ ಕುಂಬಾರ,ಚಂದ್ರಕಾಂತ ಅಲಮಾ,ಗುರಲಿಂಗಪ್ಪ ಪಾಟೀಲ, ರೇವಣಸಿದ್ದಪ್ಪ ಮುಸ್ತಾರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here