ಸುರಪುರ: ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಆವರಣದಲ್ಲಿ ಸಸಿ ನೆಟ್ಟು ರಕ್ಷಾ ಬಂಧನ ಆಚರಣೆ

0
12

ಸುರಪುರ: ನಗರದ ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ್ ಜನಸೇವಾ ಶೈಕ್ಷಣಿಕ ಟ್ರಸ್ಟ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಗಳ ಸಹಯೋಗದಲ್ಲಿ ರಕ್ಷಾಬಂಧನ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ,ಹಸಿರೇ ಭೂಮಿಯ ಉಸಿರು ಗಿಡ ಬೆಳೆಸಿ ಪರಿಸರವನ್ನು ಉಳಿಸಿ ಜೀವಿಗಳ ಅಳಿವು , ಉಳಿವು ಪರಿಸರ ರಕ್ಷಣೆಯನ್ನು ಅವಲಂಬಿಸಿರುತ್ತದೆ. ಮನುಷ್ಯನು ಯಾವಾಗಲು ತನ್ನ ಚಟುವಟಿಕೆಗಳ ಬಗ್ಗೆ ಜಾಗೃತನಾಗಿರಬೇಕು. ಮತ್ತು ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು. ಪರಿಸರದ ವಿಷಯದಲ್ಲಿ ಸಾಲುಮರದ ತಿಮ್ಮಕ್ಕನವರು ಮಾದರಿಯಾಗಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಕಡ್ಲಪ್ಪನವರ ವಿರಕ್ತಮಠದ ಪೀಠಾಧಿಪತಿಗಳಾದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳವರು, ಕಾಡು ಮತ್ತು ಮರಗಳು ಗಾಳಿಯನ್ನು ಶೋಧಿಸುತ್ತವೆ ಮತ್ತು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತವೆ.ಸಸ್ಯಗಳು ನೀರನ್ನು ಶುದ್ಧೀಕರಿಸುತ್ತವೆ, ಪ್ರವಾಹದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.ಆರೋಗ್ಯಕರ ಜೀವನ ಸಾಗಿಸಲು ಪರಿಸರ ರಕ್ಷಕರಾಗಬೇಕು ಎಂದರು.

ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ್ ಜನಸೇವಾ ಶೈಕ್ಷಣಿಕ ಟ್ರಸ್ಟ್ ರಿ, ಅಧ್ಯಕ್ಷರಾದ ರಾಜಾ ಚನ್ನಪ್ಪ ನಾಯಕ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಆರೋಗ್ಯಕರ ವಾತಾವರಣ ನಿರ್ಮಿಸಲು ಜನರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.

ಆಬಿದ್ ಹುಸೇನ್ ಪಗಡಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳು ರಾಜಾ ಉಡಚಪ್ಪ ನಾಯಕ, ಕೊನೆರಾ, ಬಲ ಭೀಮಾ, ಹರ್ಷವರ್ಧನ್, ವೆಂಕಟೇಶ್ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಹೆಚ್. ವೈ. ರಾಠೋಡರವರು ನಿರೂಪಣೆ ಮಾಡಿದರು.ಕಸಾಪ ಗೌರವ ಕೋಶಾಧ್ಯಕ್ಷ ವೆಂಕಟೇಶ ಪಾಟೀಲ್ ಸ್ವಾಗತಿಸಿ ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here