ಒಬ್ಬವ್ವ ಪಡೆಯಿಂದ ವಿದ್ಯಾರ್ಥಿಯರಿಗೆ ಆತ್ಮ ರಕ್ಷಣಾ ಕಲೆ ತರಬೇತಿ

0
21

ಶಹಾಬಾದ: ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆ ಒಬ್ಬವ್ವ ಪಡೆಯಿಂದ ವಿದ್ಯಾರ್ಥಿಯರಿಗೆ ಸ್ವಯಂ ರಕ್ಷಣೆ ಕೌಲ್ಯಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಒಬ್ಬವ್ವ ಪಡೆಯವರು ಹೆಣ್ಣು ಮಕ್ಕಳನ್ನು ದುಷ್ಕರ್ಮಿಗಳು ಬಂಗಾರ ಕಿತ್ತುಕೊಳ್ಳುವಾಗ, ಎಳೆಯುವಾಗ, ಕೈಹಿಡಿದಾಗ, ಕೂದಲನ್ನು ಹಿಡಿದು ಎಳೆಯುವಾಗ ಯಾವ ರೀತಿ ಅವರಿಂದ ಬಿಡಿಸಿಕೊಳ್ಳಬಹುದೆಂಬ ಪ್ರಾತ್ಯಕ್ಷಿಕತೆಯನ್ನು ಮಾಡಿ ತೋರಿಸುವುದಲ್ಲದೇ, ವಿದ್ಯಾರ್ಥಿಯರನ್ನೇ ಕರೆಯಿಸಿ ಅವರಿಂದಲೇ ಕೌಶಲ್ಯವನ್ನು ಮಾಡಿಸಿದರು.

Contact Your\'s Advertisement; 9902492681

ನಂತರ ಮಾತನಾಡಿದ ಒಬ್ಬವ್ವ ಪಡೆಯ ಅನಿತಾ ಕ್ಷತ್ರೀಯ, ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವರಂತಹ ವೀರ ಮಹಿಳೆಯರ ಹಾಗೆ ಪ್ರತಿ ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಕಲೆಯ ಜೊತೆಗೆ ಮಾದರಿ ವ್ಯಕ್ತಿಗಳಾಗಿ ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಸ್ವಾವಲಂಬಿಯಾಗಿ ಬದುಕಲು ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆ ಅವಶ್ಯಕವಾಗಿದೆ.ಅಲ್ಲದೇ ಯಾರಾದರೂ ಚುಡಾಯಿಸುವುದು, ಎನ್ನಾವುದೇ ಕಷ್ಟಗಳು ಬಂದರೆ ಕೂಡಲೇ 112ಗೆ ಅಥವಾ ನಮಗೆ ಕರೆ ಮಾಡಿದರೇ ತಕ್ಷಣ ನಿಮ್ಮ ಸೇವೆಗೆ ಹಾಜರಾಗುತ್ತೆವೆ.ಅಲ್ಲದೇ ತಾವುದೇ ವಿದ್ಯಾರ್ಥಿನಿ ಹಾಗೂ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಗರಾಗಿ ಹೋಗಬೇಡಿ.ಯಾರಿಂದಾದರೂ ಅಪಾಯ ಎನಿಸಿದರೇ, ಕೂಡಲೇ ಸಾರ್ವಜನಿಕ ಸ್ಥಳಗಳಿಗೆ ಓಡಿ ಹೋಗಿ. ಅಲ್ಲದೇ ಯಾರಾದರೂ ಕೈ ಹಿಡಿದರೆ, ಎಳೆಯುವಾಗ ಆತ್ಮ ರಕ್ಷಣಾ ಕಲೆಗಳನ್ನು ಉಪಯೋಗಿಸಿಕೊಂಡು ಅಲ್ಲಿಂದ ಓಡಿ ಬಂದು ಪೊಲೀಸರಿಗೆ ತಿಳಿಸಿ ಎಂದರು.

ಒಬ್ಬವ್ವ ಪಡೆಯ ಸರೋಜಿನಿ ಸಂಗ್ಮಾ ಮಾತನಾಡಿ, ಒನಕೆ ಓಬವ್ವ ಅವರ ಹೆಸರಲ್ಲೇ ಶಕ್ತಿ ಅಡಗಿದೆ. ಧಾನ್ಯ ಕುಟ್ಟುವ ಒನಕೆಯಿಂದಲೇ ಶತ್ರುಗಳನ್ನು ದಮನ ಮಾಡಿ ಕೋಟೆ ರಕ್ಷಣೆ ಮಾಡಿರುವುದನ್ನು ಓದಿದ್ದೇವೆ. ಹಾಗೆಯೇ ಚಿತ್ರದುರ್ಗದ ಓಬವ್ವ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ಹಾಗೆ ಪ್ರತಿ ವಿದ್ಯಾರ್ಥಿನಿಯರು ಸ್ವಾಲಂಬಿಗಳಾಗಬೇಕು. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಆತ್ಮ ಸಂರಕ್ಷಣೆ ಮಾಡಿಕೊಳ್ಳಬೇಕು. ಮಹಿಳೆಯರ ದೌರ್ಜನ್ಯ ಮತ್ತು ಆಕ್ರಮಣಗಳಿಂದ ಸ್ವಯಂ ರಕ್ಷಣೆ ಪಡೆಯುವುದಕ್ಕೆ ಪೂರಕವಾಗಿ ಈ ತರಬೇತಿ ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿನಿಯರ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದರು.

ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ, ಮಹಿಳೆಯರು, ಬಾಲಕಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು, ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಲಾಖೆ ಬಾಲಕಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಕಲೆಯನ್ನು ಕಲೆತು ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕಿಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here