ಸತತ ಮಳೆಗೆ ಪೋಲಿಸ್ ಠಾಣೆಗೆ ನುಗಿದ ಮಳೆ ನೀರು

0
33

ಕಲಬುರಗಿ: ಜಿಲ್ಲೆ ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಗೆ ಇಲ್ಲಿನ ಸೇಡಂ ತಾಲ್ಲೂಕಿನ ಪೊಲೀಸ್ ಠಾಣೆ ಸಂಪೂರ್ಣ ಜಲವೃತಗೊಂಡುದ್ದು, ಮಳೆ ನೀರು ಹೊರತೆಗೆಯಲು ಪೊಲೀಸರು ಹರಸಾಹಸ ಪಡೆಯುವ ಘಟನೆ ನಡೆದಿದೆ.

ಸೇಡಂ ಪಟ್ಟಣದ ಎಸಿ ಕಚೇರಿಯ ಹತ್ತಿರದ ಸೇಡಂ ಪೊಲೀಸ್ ಠಾಣೆ ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಈ ಅವಘಡಕ್ಕೆ ಸಾಕ್ಷಿಯಾಗಿದೆ. ಮೂರು ದಿನಗಳಿಂದ ಸತತ ಮಳೆಗೆ ಪೋಲಿಸ್ ಠಾಣೆಗೆ ನುಗಿದ ಮಳೆ ನೀರು. ಸಂಪೂರ್ಣ ಜಲಾವೃತ ಗೊಂಡಿದೆ. ಸೇಡಂ ಪಟ್ಟಣದ ಪೋಲಿಸ್ ಠಾಣೆಗೆ ವರ್ಷಕೊಮ್ಮೆ ಮಳೆ ನೀರು ನುಗುವುದು ಸರಿ ಸಾಮಾನ್ಯ ವಾಗಿದೆ.ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಗೆ ಸೋಮವಾರ ಪೋಲಿಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿದ್ದು.

Contact Your\'s Advertisement; 9902492681

ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಯಿಂದ ಪೋಲಿಸ್ ಸಿಬ್ಬಂದಿಗಳು ಇಡಿ ರಾತ್ರಿ ಪೋಲಿಸ್ ಠಾಣೆಯಲ್ಲಿ ಜಾಗರಣೆ ಮಾಡಿ. ಎಲ್ಲಾ ದಾಖಲಾತಿಗಳು ಜೋಪಾನವಾಗಿ ನೋಡಿಕೊಂಡು ಕುಳಿತು ಕೋಳುವ ಹಾಸನಗಳ ಮೇಲೆ ಹಾಗೂ ಕಟಿಗೆ ಟೇಬಲ್ ಮೇಲೆ ಇಟ್ಟಿದ್ದಾರೆ. ಹಲವು ಬಾರಿ ಪತ್ರಿಕೆಯಲ್ಲಿ ವರದಿ ಮಾಡಿದರು ಸರ್ಕಾರ ಇತ ಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪೋಲಿಸ್ ಠಾಣೆ ತಗ್ಗು ಇರುವುದರಿಂದ ರಸ್ತೆ ಬದಿ ಒಳಚರಂಡಿ ನೀರು ಹಾಗೂ ಮಳೆ ನೀರು ನೇರವಾಗಿ ಒಳಗೆ ನುಗುತ್ತಿವೆ ಎಂದರು.

ಮಳೆ ನಿರಂತರ ಬಂದರೆ ಪೋಲಿಸ್ ಠಾಣೆ ಕೊಠಡಿಗಳು ಜಲಾವೃತ ಆಗೋದು ಕಂಡಿತ.ಸರ್ಕಾರ ಕೂಡಲೇ ಪೋಲಿಸ್ ಠಾಣೆ ಕಟಡದ ಪರಿಸ್ಥಿತಿ ನೋಡಿ ಹೊಸದಾಗಿ ಬೇರೆಡೆ ಕಟಡ ನಿರ್ಮಾಣ ಮಾಡಲು ಮುಂದಾಗುತ್ತಾರೆ ಎಂದು ಕಾದು ನೋಡಬೇಕು.

ಪಿಎಸ್ಐ ಮಂಜುನಾಥ್ ರೆಡಿ. ಕ್ರೈಂ ಪಿಎಸ್ಐ ಅರ್ಜುನಪ್ಪ ಹಾಗೂ ಪೋಲಿಸ್ ಸಿಬ್ಬಂದಿಯವರು ಮೋಣಕಾಲು ಎತ್ತರ ಇರುವ ನೀರಿನಲ್ಲೇ ನಡೆದುಕೊಂಡು ಹೋಗಿ ಕಂಪ್ಯೂಟರ್ ಹಾಗೂ ಎಲ್ಲಾ ದಾಖಲಾತಿಗಳು ಸೇರಿದಂತೆ ಹಲವು ವಿಕ್ಷಣಿ ಮಾಡಿದರು. ಬಹುತೇಕ ಕಡೆಗಳಲ್ಲಿ ಪೋಲಿಸ್ ಠಾಣೆ ಪರಿಸ್ಥಿತಿ ಹೀಗೆ ಇತು. ಈಗ ಸರಿ ಪಡಿಸಲಾಗಿದೆ. ಸೇಡಂನಲ್ಲಿ ಮಾತ್ರ ಪೋಲಿಸ್ ಠಾಣೆ ಬೇರೆಡೆ ಕಟಡ ಹೊಸದಾಗಿ ನಿರ್ಮಾಣ ಮಾಡಿ ಅನೂಕೂಲ ಮಾಡಿ ಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.

ಸುಮಾರು ವರ್ಷಗಳಿಂದ ಪೋಲಿಸ್ ಠಾಣೆ ಇದು. ತಗ್ಗು ಇರುವುದರಿಂದ ನೇರವಾಗಿ ಪೋಲಿಸ್ ಠಾಣೆಗೆ ರಸ್ತೆ ಬದಿಯ ಒಳಚರಂಡಿ ನೀರು ಹಾಗೂ ಮಳೆ ನೀರು ಒಳಗಡೆ ನುಗತ್ತಿರುವದು ಸರ್ಕಾರ ಕೂಡಲೇ ಗಮನ ಹರಿಸಿ ಹೋಸ ಕಟಡ ನಿರ್ಮಾಣಕ್ಕೆ ಮುಂದಾಗಬೆಕೇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲಬುರ್ಗಿ ಜಿಲ್ಲಾ ಸಂಘಟನಾ ಸಂಚಾಲಕರು ಮಾರುತಿ ಹುಳಗೋಳಕಾರ ಹೇಳಿದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here