ಕೋಲಿ ಸಮಾಜದ ಯುವಕನ ಸಾವಿಗೆ ಕಾರಣರಾದ ಆರೋಪಿಗಳ ಬಂಧಿಸುವಂತೆ ಪ್ರತಿಭಟನೆ

0
30

ಚಿತ್ತಾಪುರ; ಮತಕ್ಷೇತ್ರದ ಕಲಗುರ್ತಿ ಗ್ರಾಮದಲ್ಲಿ ನಡೆದ ಕೋಲಿ ಸಮಾಜದ ಯುವಕ ದೇವಾನಂದ ರಾಮಚಂದ್ರಪ್ಪ ಕೊರಬಾ ಸಾವಿಗೆ ಕಾರಣದದಾದವರನ್ನು ಕೂಡಲೇ ಬಂಧಿಸಬೇಕೆಂದು ಕೋಲಿ ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.

ತಾಲೂಕು ಯುವ ಕೋಲಿ ಸಮಾಜದವತಿಯಿಂದ ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನೆ ಮೆರವಣಿಗೆಯು ಪಟ್ಟಣದ ಲಾಡ್ಡಿಂಗ್ ಕ್ರಾಸ್‍ದಿಂದ ತಹಸೀಲ್ ಕಚೇರಿವರೆಗೆ ತೆರಳಿ ಸುಮಾರು ಎರಡು ತಾಸುಗಳವರೆಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದೇವಾನಂದ ಕೊರಬಾ ಸಾವಿಗೆ ಕಾರಣರಾದವರ ಮೇಲೆ ಮಾಡಬೂಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಇಲ್ಲಿವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದರು.

Contact Your\'s Advertisement; 9902492681

ಪೆÇಲೀಸರ ಕಿರುಕುಳದಿಂದ, ಕಲಗುರ್ತಿ ಗ್ರಾಮದ ನಾಲ್ಕಾರು ಮುಖಂಡರ ಕಿರುಕುಳದಿಂದ ದೇವಾನಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೀಡಾದ ಯುವಕನ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪ್ರಕರಣಕ್ಕೆ ಪುನರ್ ಹೇಳಿಕೆ ನೀಡಿದ್ದನ್ನು ದಾಖಲಿಸಬೇಕು. ಮೃತ ದೇವಾನಂದನ ಕುಟುಂಬ ಹಾಗೂ ಸಾಕ್ಷಿದಾರರ ಕುಟುಂಬದವರಿಗೆ ರಕ್ಷಣೆ ನೀಡಬೇಕು. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕು. ಪೆÇೀಲಿಸರಿಂದ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪ್ರಕರಣದ ತನಿಖೆ ಪಾರದರ್ಶಕತೆಯಿಂದ ನಡೆಯಬೇಕೆಂದು ಒತ್ತಾಯಿಸಿದರು.

ಕೋಲಿ ಸಮಾಜದ ತಾಲೂಕು ಯುವ ಅಧ್ಯಕ್ಷ ಗುಂಡು ಐನಾಪೂರ, ಕೋಲಿ ಸಮಾಜದ ಹಿರಿಯ ಮುಖಂಡರಾದ ಶರಣಪ್ಪ ತಳವಾರ, ರಾಮಲಿಂಗ ಬಾನರ, ಮಲ್ಲಿಕಾರ್ಜುನ ಎಮ್ಮೇನೂರ, ಬಸವರಾಜ ಸಪ್ಪನಗೋಳ, ಸಂತೋಷ ಬೆಣ್ಣೂರ, ಬಸವರಾಜ ಚಿನಮಳ್ಳಿ, ಸುನೀತಾ ತಳವಾರ, ನಿಂಗಪ್ಪ ದೇವಣಗಾಂವ ಮಾತನಾಡಿದರು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನೆಕಾರರು ಹೆಚ್ಚುವರಿ ಎಸ್ಪಿ ಶ್ರೀನಿಧಿ ಹಾಗೂ ಕಂದಾಯ ಇಲಾಖೆಯ ಶಿರಸ್ತೇದಾರ ಲಕ್ಷ್ಮೀನಾರಾಯಣ ಅವರಿಗೆ ಸಲ್ಲಿಸಿದರು.

ಪ್ರಮುಖರಾದ ತಮ್ಮಣ್ಣ ಡಿಗ್ಗಿ, ಸೋಮು ಐನಾಪುರ, ರಾಜು ಹೋಳಿಕಟ್ಟಿ, ಲಕ್ಷ್ಮೀಕಾಂತ ಸಾಲಿ, ನಾಗೇಂದ್ರ ಜೈಗಂಗಾ, ಮೌನೇಶ ಕರದಾಳ, ನಿಂಗಪ್ಪ ಹುಳಗೋಳಕರ್, ದಶರಥ ದೊಡ್ಮನಿ, ಚಂದ್ರು ಕಾಳಗಿ ಸೇರಿದಂತೆ ಇನ್ನಿತರಿದ್ದರು. ಡಿವೈಎಸ್ಪಿ ಶೀಲವಂತ, ಸಿಪಿಐ ಪ್ರಕಾಶ ಯಾತನೂರ ಸೂಕ್ತ ಪೆÇೀಲಿಸ ಬಂದೋಬಸ್ತ ವ್ಯವಸ್ಥೆಗೊಳಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here