ಪರಹಿತವೇ ಶರಣಬಸವರ ಶಿವಜೀವನ

0
46

ಪರಹಿತ ಮಾಡುವುದು ಮಹಾದಾಸೋಹಿ ಶರಣಬಸವೇಶ್ವರ ಶಿವಜೀವನವಾಗಿತ್ತು ಎಂದು ಪ್ರಾಧ್ಯಾಪಕರಾದ ಡಾ.ಶ್ರೀಶೈಲ್ ನಾಗರಾಳ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಹೈದ್ರಾಬಾದ ಅರಸನು ಬಹಳ ಕೆಟ್ಟ ರೀತಿಯಿಂದ ಆಡಳಿತ ನಡೆಸುತ್ತಿದ್ದ. ಆನರಲ್ಲಿ ಜಾತಿಭೇದ ಮಾಡಿ ನಾಡನ್ನು ಒಡೆದು ಆಳುತ್ತಿದ್ದ. ಹಿಂದೂ ಜರನ್ನು ಕಂಡರಂತೂ ಸಿಡಿದೇಳುತ್ತಿದ್ದ. ಮಂದಿರ, ಮಠ ಕಂಡರೆ ಉರಿದು ಬೀಳುತ್ತಿದ್ದ . ಹಾಳು ಮಾಡಬೇಕೆಂದು ಹೊಂಚು ಹಾಕಿಕೊಂಡೆ ಕುಳಿತಿದ್ದ. ಒಂದು ಸಲ ಕುಲಬುರ್ಗಿ ಮೇಲಿಂದಲೇ ಹೋಗುತ್ತಿದ್ದ. ಅಲ್ಲಿಯ ಜನರು ಶರಣರ ಮೇಲಿಟ್ಟ ಭಕ್ತಿಯನ್ನು ಕಂಡು ಅಸೂಯೆ ಪಟ್ಟ. ಮುಸ್ಲಿಂರು ಸಹ ಭಕ್ತಿ ಮಾಡುವುದನ್ನು ಕಂಡು ಆಶ್ಚರ್ಯ ಪಟ್ಟು ಶರಣರನ್ನು ಅವರನ್ನು ಸೇರಿಸಿ ಬಯ್ಯುತ್ತಾ ಮುಂದೆ ನಡೆದ. ಅರ್ಧ ಹಾದಿ ಸವೆದಿಲ್ಲ, ರಾಜ ಕೈ ಕಾಲು ಹೊಟ್ಟೆಯಲ್ಲಾ ಉಬ್ಬಿ, ನೋವನ್ನುಂಟು ಮಾಡಿದವು. ಎಂತೆಂತ ವೈದ್ಯರು ನೋಡಿದರೂ ಗುಣವಾಗುತ್ತಿಲ್ಲ. ಆಗ ಅರಸನಿಗೆ ಶರಣರನ್ನು ಬೈದಿರುವ ಅರಿವಾಯಿತು. ಮಹಾಮನೆಗೆ ಬಂದ ಆ ರಾಜಾ ಶರಣರ ಪಾದಕ್ಕೆ ಬಿದ್ದು ತಪ್ಪನ್ನು ಒಪ್ಪಿಕೊಂಡ. ಶರಣರು ಭಸ್ಮವನ್ನು ಅವನಿಗೆ ಹಚ್ಚಿದಾಗ ನೋವು ಅಳಿಯಿತು.

ಮದುವೆಯಾದ ಬಹಳ ದಿನಗಳ ನಂತರ ಸ್ತ್ರೀ ಒಬ್ಬಳು ಮಗುವಿನ ಜನ್ಮ ಕೊಟ್ಟಿದ್ದಾಳೆ. ಆದರೆ ಕೂಸಿಗೆ ಕುಡಿಸಲು ತಾಯಿಯ ಎದೆಯೊಳಗೆ ಹಾಲಿಲ್ಲ. ಹಸಿವೆಯಿಂದ ಕೂಸಿ ಚೀರಿ ಚೀರಿ ಅತ್ತು ನಿತ್ರಾಣಗೊಂಡಿದೆ. ಮೇಲಿನಿಂದ ಹಾಕಲು ಸಾಧ್ಯವಿಲ್ಲ. ದಂಪತಿಗಳಿಬ್ಬರು ದುಃಖಿತರಾಗಿದ್ದಾರೆ. ಬಡವರು ನಾವು ಹೇಗೆ ಮಾಡಬೇಕೆಂದು ಕಂಗಾಲಾಗಿದ್ದಾರೆ. ಶರಣ ನೆನೆಪಾಗಿ ಶರಣರ ಹತ್ತಿರ ಕರೆದುಕೊಂಡು ಬಂದರು. ’ ಕೂಸಿಗೆ ಹಾಲು ಕುಡಿಸೋಣವೆಂದರೆ ನನ್ನ ಎದೆಯಲ್ಲಿ ಹಾಲಿಲ್ಲ ಯಪ್ಪಾ, ನನ್ನ ಕೂಸನ್ನು ಬದುಕಿಸು ತಂದೆ’ ಎಂದು ಹಲಬುತ್ತಾಳೆ. ಆ ತಾಯಿಯ ದುಃಖಕ್ಕೆ ಶರಣರು ತಕ್ಷಣವೇ ಒಳಗೋಗಿ ವಿಭೂತಿ ತಂದು ತಾಯಿ ಮಕ್ಕಳಿಬ್ಬರ ಹಣೆಗಚ್ಚಿ ಒಳಗೋಗಿ ಹಾಲು ಕುಡಿಸು ಎನ್ನುತ್ತಾರೆ. ಶರಣರು ಹೇಳಿದಂತೆ ಹಾಲು ಕುಡಿಸುತ್ತಾಳೆ. ಗಂಗೆಯ ಹಾಗೇ ಎದೆಯಲ್ಲಿ ಹಾಲು ಹರಿದಿದೆ.

ಕಲಬುರ್ಗಿಯಲ್ಲಿ ಎಲ್ಲರ ಬಾಯಿಯಲ್ಲಿ ಶರಣರ ನಾಮ, ಅದೇ ಅವರಿಗೆ ಶಿವಮಂತ್ರ ಆ ಮಂತ್ರದಿಂದ ಅವರು ಏನೆಲ್ಲ ಪಡೆದಿದ್ದಾರೆ. ಬ್ರಾಹ್ಮಣ ಹುಡುಗನೊಬ್ಬನು ದಿನಾಲು ಪಠಿಸುವದು ಶರಣರ ನಾಮವೇ ಆದರೆ ಮನೆಯಲ್ಲಿರುವ ಕೆಲವರಿಗೆ ಹಿಡಿಸೆ ಹೋಯಿತು. ಬಿಡಿಸಲು ಬಹಳ ಪ್ರಯತ್ನಗೈದರೂ ಆ ಬಾಲಕ ಶರಣರ ನಾಮವನ್ನೆ ಪಠಿಸುತ್ತಾನೆ. ಒಂದು ಸಲ ಆ ಬಾಲಕನ ತಂದೆ ಜೋರಾಗಿ ಆ ಬಾಲಕನ ತಲೆಗೆ ಹೊಡೆಯುತ್ತಾನೆ. ಆ ಪೆಟ್ಟಿಗೆ ಬಾಲಕ ಮೂರ್ಛೆ ತಪ್ಪಿ ಬೀಳುತ್ತದೆ. ಎಲ್ಲರೂ ಗಾಬರಿಯಿಂದ ಪ್ರಯತ್ನ ಮಾಡಿದ್ದರೂ ಆ ಬಾಲಕ ಕಣ್ಣು ತೆರೆಯುವಂತಿಲ್ಲ. ತಾಯಿ ಶರಣರ ಹತ್ತಿರ ಕರೆದುಕೊಂಡು ಹೋಗಿ ಅವರ ಕಾಲ ಮೇಲೆ ಹಾಕುತ್ತಾಳೆ. ಬಾಲಕನ ಭಕ್ತಿಗೆ ಮನಸೋತ ಶರಣರು ಭಸ್ಮವನ್ನು ಅವನ ಹಣೆಗೆ ಹಚ್ಚುತ್ತಾರೆ. ಬಾಲಕ ಕಣ್ಣು ತೆರೆಯುತ್ತಾನೆ.  ಹೀಗೆ ಶರಣಬಸವರು ಅನೇಕ ಲೀಲೆಗಳನ್ನು ಮಾಡಿ ಎಲ್ಲರ ಆರಾಧ್ಯ ದೇವರಾಗಿದ್ದಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here