ಬೆಳೆ ಪರಿಹಾರ ಮಂಜೂರಾತಿಯಲ್ಲಿ ತಪ್ಪು ಮಾಹಿತಿ ನೀಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು

0
15

ಆಳಂದ; ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ವರ್ಷದ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯ ಅಡಿಯಲ್ಲಿ ಕೊಡಲ ಹಂಗರಗಾ ಮತ್ತು ಕಿಣ್ಣಿಸುಲ್ತಾನ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರಿಗೆ ಪ್ರಸಕ್ತ ವರ್ಷ ಪರಿಹಾರ ಹಣ ಮಂಜೂರಿಯಾಗುತ್ತಿದೆ ಆದರೆ ಶಾಸಕ ಬಿ ಆರ್ ಪಾಟೀಲರ ಬೆಂಬಲಿಗರು ವಿಮೆ ಪರಿಹಾರ ಹಣ ಶಾಸಕ ಬಿ ಆರ್ ಪಾಟೀಲ ಮಂಜೂರಿ ಮಾಡಿಸಿದ್ದಾರೆಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‍ಗಳನ್ನು ಹರಿಯಬಿಟ್ಟು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಆರೋಪಿಸಿದ್ದಾರೆ.

ಮಂಗಳವಾರ ಆಳಂದದ ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲದಲ್ಲಿ ಬೆಳೆ ಪರಿಹಾರ ಮಂಜೂರಿ ಆಗುವಲ್ಲಿ ಆಗಿನ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಕಾರ್ಯಕರ್ತರು ಕಾರಣರಾಗಿದ್ದಾರೆ. ಕಳೆದ ವರ್ಷ ಕ್ರಾಪ್ ಕಟಿಂಗ್ ಮಾಡಲು ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದರು ಆದರೆ ಇಲಾಖೆಯ ಅಧಿಕಾರಿಗಳು ರ್ಯಾಂಡಮ್ ಆಗಿ ಕೆಲವು ನೀರಾವರಿ ಪ್ರದೇಶಗಳನ್ನು ಆಯ್ದುಕೊಂಡು ಸಮೀಕ್ಷೆ ಮಾಡಲು ಬಯಸಿದ್ದರು ಆದರೆ ಇದನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತಹಸೀಲದಾರರ ಗಮನಕ್ಕೆ ತಂದು ಎಲ್ಲ ಹೊಲಗಳನ್ನು ಸಮೀಕ್ಷೆ ಮಾಡಲು ಮನವಿ ಮಾಡಿಕೊಂಡಿದ್ದೇವು. ನಮ್ಮ ಮನವಿಗೆ ಸ್ಪಂದಿಸಿದ ತಹಸೀಲದಾರರು ಕ್ರಾಪ್ ಕಟಿಂಗ್ ಮಾಡಲು ಬೆಳೆ ವಿಮೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ತಿಳಿಸಿದರು.

Contact Your\'s Advertisement; 9902492681

ತಾಲೂಕಿನಲ್ಲಿ ಜೆಜೆಎಂ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಅಲ್ಲದೇ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಲ್ಲಿ ಶಾಸಕರನ್ನು ಸಂಪರ್ಕಿಸಿ ಎಂದು ಸ್ವತ: ಅಧಿಕಾರಿಗಳೇ ಹೇಳುತ್ತಿದ್ದಾರೆ. ಆಳಂದ ಪಟ್ಟಣದ ಕುಡಿಯುವ ನೀರಿಗಾಗಿ ನಗರೋತ್ಥಾನ ಯೋಜನೆಯಡಿ ಮಂಜೂರಾದ 66 ಕೋ. ರೂ. ಕಾಮಗಾರಿಯನ್ನು ಈಗಿನ ಶಾಸಕರು ತಾವೇ ಮಂಜೂರಿ ಮಾಡಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

ಯುವ ಮುಖಂಡ ಮಿಥುನ್ ರಾಠೋಡ ಮಾತನಾಡಿ, ಆ ಸಂದರ್ಭದಲ್ಲಿ ಆಗಿನ ಶಾಸಕರಾದ ಸುಭಾಷ್ ಆರ್ ಗುತ್ತೇದಾರರು ಆಗಿನ ಸಚಿವರ ಗಮನಕ್ಕೂ ತಂದಿದ್ದರು. ಜಿ. ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಜಿಲ್ಲಾ ವಿಮಾ ಅಧಿಕಾರಿಗಳ ಜೊತೆ ಫೋನನಲ್ಲಿ ಮಾತನಾಡಿ ರೈತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.

ಸಧ್ಯ ಮಂಜೂರಿಯಾಗಿರುವ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಪರಿಹಾರದಲ್ಲಿ ಈಗಿನ ಶಾಸಕ ಬಿ ಆರ್ ಪಾಟೀಲ ಪಾತ್ರ ಇರುವುದಿಲ್ಲ. ಅವರ ಬೆಂಬಲಿಗರು ಇದನ್ನು ಅವರದೇ ನಾಯಕ ಮಾಡಿಸಿದ್ದಾರೆಂದು ಜನಗಳಿಗೆ ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ಜನಗಳು ಈ ತಪ್ಪು ಮಾಹಿತಿಯನ್ನು ನಂಬಬಾರದು ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಶ್ರೀಶೈಲ ನಡಗೇರಿ, ಮಿಥುನ ರಾಠೋಡ, ಸಿದ್ದು ಹತ್ತೆ, ಭಾಗೇಶ ಚಿತಲಿ, ಸುಭಾಷ್ ಚವ್ಹಾಣ, ಕಿರಣ ಜಾಧವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here