ಪ್ರಜಾಪ್ರಭುತ್ವ, ಪ್ರಜ್ಞಾಪ್ರಭುತ್ವ ಸ್ಥಾಪಿಸಿದ ಬಸವಣ್ಣ

0
30

ಕಲಬುರಗಿ: ಬಸವಣ್ಣ ಕೇವಲ ಪ್ರಜಾಪ್ರಭುತ್ವ ಮಾತ್ರ ಸ್ಥಾಪಿಸಲಿಲ್ಲ. ಪ್ರಜ್ಞಾ ಪ್ರಭುತ್ವ ಕೂಡ ಸ್ಥಾಪಿಸಿದ್ದರು ಎಂದು ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ, ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಅಂತರಂಗ- ಬಹಿರಂಗ ಶುದ್ಧವಾಗಿಟ್ಟುಕೊಂಡಿದ್ದ ಬಸಪ್ಪ ದಾನಪ್ಪ ಜತ್ತಿ ಅವರು, ಸಮಾಜದ ಶುದ್ಧೀಕರಣಕ್ಕಾಗಿ ಬಸವತತ್ವ ಪ್ರಚಾರ ಮತ್ತು ಪ್ರಸಾರಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು ಎಂದು ಹೇಳಿದರು.

Contact Your\'s Advertisement; 9902492681

ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ ಎಂಬರ್ಥದಲ್ಲಿ ಬಿ.ಡಿ. ಜತ್ತಿ ಬದುಕಿದ್ದರು ಎಂದು ಅವರ ಬದುಕಿನ ಅನೇಕ ಘಟನಾವಳಿಗಳನ್ನು ವಿವರಿಸಿದರು. ಜತ್ತಿ ಅವರ 111ನೇ ಜನ್ಮ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಿ-20 ಶೃಂಗ ಸಭೆಯಲ್ಲಿ ಕೂಡ ಬಸವ ಸಮಿತಿಯ ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು.

ತನುವಿನಲ್ಲಿ ನಿರ್ಮೋಹ ಹೊಂದಿದ್ದ ಜತ್ತಿ ಅವರಿಗೆ ಭಾರತದ ಉಪ ರಾಷ್ಟ್ರಪತಿ, ಮುಖ್ಯಮಂತ್ರಿ ಆಗಿದ್ದರೂ ಮನದಲ್ಲಿ ಎಂದಿಗೂ ಅಹಂಕಾರ ಸುಳಿಯಲಿಲ್ಲ. ಸರಳ, ಸಾದಾ ಜೀವನ ನಡೆಸಿದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ ಮಾತನಾಡಿ, ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದು ನಿಂತ ಬಿ.ಡಿ. ಜತ್ತಿ ಅವರು ಬಸವಾದಿ ಶರಣರ ಬದುಕು ಹಾಗೂ ಬೋಧನೆಗಳನ್ನು ಸಮಾಜದ ಮುಂದಿಟ್ಟು ಸಮಾಜದಲ್ಲಿ ಬಸವತತ್ವ ನೆಲೆಗೊಳಿಸಲು ಅಹರ್ನಿಷಿ ಪ್ರಯತ್ನಿಸಿದರು ಎಂದು ತಿಳಿಸಿದರು.

ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಗುಣ ಹೊಂದಿರುವ ಶರಣರ ವಚನ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಅದರಂತೆ ಬದುಕಿದ ಜತ್ತಿಯವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ವೇದಿಕೆಯಲ್ಲಿದ್ದರು. ಡಾ. ಆನಂದ ಸಿದ್ದಾಮಣಿ ನಿರೂಪಿಸಿದರು. ಡಾ. ಜಯಶ್ರೀ ದಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಕೆ.ಎಸ್. ವಾಲಿ ವಂದಿಸಿದರು.

2025ರಲ್ಲಿ ಬಸವ ಸಮಿತಿ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಜಗತ್ತಿನ 50 ಭಾμÉಗಳಲ್ಲಿ ವಚನಗಳ ತರ್ಜುಮೆ ಮಾಡುವ ಕೆಲಸ ನಡೆದಿದೆ. ಆ ಗ್ರಂಥಗಳ ಬಿಡುಗಡೆ ಸಮಾರಂಭಕ್ಕೆ ರಾಷ್ಟ್ರಪತಿಯವರನ್ನು ಆ ಆಹ್ವಾನಿಸಲಾಗುವುದು. -ಅರವಿಂದ ಜತ್ತಿ, ಬೆಂಗಳೂರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here