ಕಲಬುರಗಿ: ಪತ್ನಿಗೆ ಗುಂಡಿಟ್ಟು ಕೊಲೆ

0
38

ಕಲಬುರಗಿ: ಪತಿ ಅತನ ಪತ್ನಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಪ್ರಕರಣ ಚಿತ್ತಾಪುರ ತಾಲೂಕಿನ ಅಲ್ಲೂರ (ಕೆ) ಗ್ರಾಮದಲ್ಲಿ ಗುರುವಾರ ನಡೆದಿದೆ.

ಹಣಮವ್ವ (35) ಕೊಲೆಯಾದ ದುರ್ದೈವಿ. ಪತಿ ಬಸವರಾಜ ಪತ್ನಿ ಹಣಮವ್ವಗೆ ಗುಂಡು ಹಾರಿಸಿರುವುದರಿಂದ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

Contact Your\'s Advertisement; 9902492681

ಪತಿ, ಪತ್ನಿ ಮಧ್ಯೆ ಕಳೆದ ಐದಾರು ವರ್ಷಗಳಿಂದ ಕಲಹ ಉಂಟಾಗಿ ಕಿರುಕುಳದಿಂದಾಗಿ ತವರು ಮನೆ ಅಲ್ಲೂರ (ಕೆ) ಗ್ರಾಮದಲ್ಲಿ ವಾಸವಾಗಿದ್ದಳು. ಪತಿ ಬಸವರಾಜ ಅಲ್ಲೂರ (ಬಿ) ಗ್ರಾಮದವನಾಗಿದ್ದು ಆಗಾಗ ಪತ್ನಿಯ ತವರೂರು ಅಲ್ಲೂರ (ಕೆ) ಗ್ರಾಮಕ್ಕೆ ಬಂದು ಪತ್ನಿ ಮನೆಗೆ ಬಂದು ಹೋಗುತ್ತಿದ್ದ. ಗುರುವಾರ ಬಸವರಾಜ ಅಲ್ಲೂರ (ಕೆ) ಗ್ರಾಮಕ್ಕೆ ಬಂದು ಪತ್ನಿ ಹಣಮವ್ವ ಅವಳನ್ನು ಬಂದುಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪಿಎಸ್‍ಐ ಶ್ರೀಶೈಲ್ ಅಂಬಾಟಿ ಭೇಟಿ ಚಿತ್ತಾಪುರ ಪೋಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here