ಬೆಂಗಳೂರು: 50 ಲಕ್ಷ ಖೋಟಾ ನೋಟು ಚಲಾವಣೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿ, 81 ಲಕ್ಷ 30 ಸಾವಿರ ನಗದು ಹಾಗೂ ನೋಟು ತಯಾರಿಕೆಗೆ ಬಳಸುತ್ತಿದ್ದ ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.
ಸೋಮಶೇಖರ್ ಬಿಎಂಟಿಸಿ ಡ್ರೈವರ್ ಕಂ ಕಂಡಕ್ಟರ್, ಕಿರಣ್ ಕುಮಾರ್ ಫೋಟೊಗ್ರಾಫರ್, ಹಾಗೂ ನಂಜೇಗೌಡ ಸ್ವಾಮಿ ಡ್ರೈವರ್ ಬಂಧಿತ ಆರೋಪಿಗಳು. ಬೆಂಗಳೂರು ನಗರದ ಗಾರ್ವೆಬಾವಿಪಾಳ್ಯದಲ್ಲಿ ಒಂದು ಬಾಡಿಗೆ ಮನೆಯಲ್ಲಿ 2000 ಹಾಗೂ 500 ರೂ. ಮುಖ ಬೆಲೆ ಖೋಟಾ ನೋಟು ತಯಾರುಸುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ ಒಂದು ಕಲರ್ ಪ್ರಿಂಟರ್, ಫೋಟೊ ಕಟ್ಟರ್, ಬಳಸಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರ ಗ್ಯಾಂಗ್ 50 ಲಕ್ಷ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿದಂತೆ ಮೂವರನ್ನ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಯಲಹಂಕ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.