- ವೇಮನ ಭವನಕ್ಕೆ ಭೂಮಿಪೂಜೆ
ಆನೇಕಲ್: ತಾಲ್ಲೂಕಿನಲ್ಲಿ ವೇಮನ ಭವನಕ್ಕೆ ಭೂಮಿ ಪೂಜೆ ನಡೆಸಿರುವುದು ಸಂತಸದ ವಿಚಾರವಾಗಿದೆ. ಈ ಭವನ ಕೇವಲ ರೆಡ್ಡಿ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ಸಮುದಾಯಕ್ಕೆ ಅನುಕೂಲವಾಗಲಿಯೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಶಿಸಿದ್ದಾರೆ.
ಗುರುವಾರ ತಾಲೂಕಿನ ಅವಡದೇನಹಳ್ಳಿ ಗ್ರಾಮದ ಗೇಟ್ ಬಳಿ ವೇಮನ ಭವನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಲವು ದಿನಗಳ ಇಚ್ಚೆಯಂತೆ ತಾಲ್ಲೂಕಿನಲ್ಲಿ ವೇಮನ ಭವನ ನಿರ್ಮಾಣವಾಗುತ್ತಿದೆ. ವೇಮನ ಸಮುದಾಯದ ಕೇವಲ ರೆಡ್ಡಿ ಸಮುದಾಯಕ್ಕೆ ಮಾತ್ರ ಸೀಮಿತವಾಗದಿರಲಿ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಗೆ ನೂರು ದಿನ: ರಾಜ್ಯ ಸರ್ಕಾರ ಶಕ್ತಿ ಯೋಜನೆ ಪ್ರಾರಂಭಿಸಿ ನೂರು ದಿನ ಆಗಿದೆ. ಒಟ್ಟು 1,456ಕೋಟಿ ರೂ.ಮೌಲ್ಯದಷ್ಟು ಮಹಿಳೆಯರು ಪ್ರಯಾಣ ನಡೆಸಿದ್ದಾರೆ. ಮಹಿಳೆಯರು ಶಕ್ತಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.
5 ಸಾವಿರ ಬಸ್ ಖರೀದಿ: ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಬಸ್ ಗಳನ್ನು ಖರೀದಿ ಮಾಡಲಾಗುವುದೆಂದು ಅವರು ಹೇಳಿದ್ದಾರೆ.
ಪುರೋಹಿತಶಾಹಿ ಪಕ್ಷ ಬಿಜೆಪಿ: ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಜಾತ್ಯತೀತತೆ, ಸಮಾಜವಾದದ ಅಂಶಗಳನ್ನು ತೆಗೆದು ಹಾಕಲು ಬಿಜೆಪಿ ಮುಂದಾಗಿರುವುದು ಒಳ್ಳೆಯದಲ್ಲ. ಬಿಜೆಪಿ ಪುರೋಹಿತಶಾಹಿ ಪಕ್ಷ ಎಂಬುದು ಸಾಬೀತು ಪಡಿಸಿದೆ ಎಂದು ಅವರು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ವೇಮನಾನಂದ ಸ್ವಾಮೀಜಿ, ರೆಡ್ಡಿ ಜನಸಂಘದ ಅಧ್ಯಕ್ಷ ನ್ಯೂಟನ್ ರೆಡ್ಡಿ, ಸೋಮಶೇಖರ್ ರೆಡ್ಡಿ,
ರಘುಪತಿ ರೆಡ್ಡಿ, ಪುರುಷೋತ್ತಮ್ ರೆಡ್ಡಿ, ಎಸ್.ಆರ್.ಟಿ. ಅಶೋಕ್ ರೆಡ್ಡಿ, ನಾರಾಯಣ ರೆಡ್ಡಿ,ರಾಮಚಂದ್ರ ರೆಡ್ಡಿ, ಗೋಪಾಲ್ ರೆಡ್ಡಿ, ನಾಗರಾಜ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ಆರ್.ಕೆ.ರಮೇಶ್, ಪ್ರವೀಣ್ ಕುಮಾರ್ ರೆಡ್ಡಿ, ಭಾರ್ಗವ್ ರೆಡ್ಡಿ, ಸುಚಿಂದ್ರ ರೆಡ್ಡಿ, ಮುತ್ತುಕೇಶವ ಮತ್ತಿತರರಿದ್ದರು.