ಪಾಟೀಲ್ ನರಿಬೋಳಗೆ ಗುರುರಾಜ್ ಎಚ್. ಸುಬೇದರ್ ತಿರುಗೇಟ್ಟು

0
12

ಕಲಬುರಗಿ: ಸತ್ಯಾ ಸತ್ಯೆತೆ ಕ್ಷೇತ್ರದ ಜನರಿಗೆ ಗೋತ್ತಿರುತ್ತೆ ಆದ್ರೆ ಡಾ. ಅಜಯ್ ಸಿಂಗ್ ಅವರಾಗಲಿ ಅವರ ತಂದೆ ಯವರಾಗಲಿ ಆರ್‍ಎಸ್‍ಎಸ್ ನಂತಹ ಕೋಮುವಾದಿ ಸಂಘಟನೆಯನ್ನು ಬೆಂಬಲಿಸುವಂಥವರಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗ ಜಿಲ್ಲಾಧ್ಯಕ್ಷ ಗುರುರಾಜ್ ಎಚ್. ಸುಬೇದರ್ ಅವರು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಿನ್ನೆ ಕಲಬುರಗಿ ನಗರದಲ್ಲಿ ದೊಡ್ಡಪ್ಪಗೌಡರು ಅಜಯಸಿಂಗ್ ಅವರು 2018 ರಲ್ಲಿ ಬಿಜೆಪಿಗೆ ಬರಲು ಮುಂದಾಗಿದ್ದರು ಎಂದು ಹೇಳಿಕೆ ನೀಡಿದ್ದರು. ಅವರು ಜಾತಿ ಆಧಾರದ ಮೇಲೆ ರಾಜಕೀಯ ಮಾಡಿದವರು ಅಲ್ಲ. ಹಾಗೇನಾದರೂ ಮಾಡಿದರೆ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯು ಗೆಲುವುದಕ್ಕು ಸಾಧ್ಯವಿಲ್ಲ. ಕ್ಷೇತ್ರದ ಮೇಲಿರುವ ಗೌರವ ಮತ್ತು ಮತದಾರರ ಮೇಲಿರುವ ಗೌರವ ಮತ್ತು ಕ್ಷೆತ್ರದ ಅಭಿವೃದ್ಧಿ ಈ ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗೆ ಕೊಂಡೊಯ್ದಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ ಕಾಂಗ್ರೆಸ್ ಪಕ್ಷ ಅವರಿಗೆ ಏನೆಲ್ಲಾ ಕೊಟ್ಟಿದೆ ಹೀಗಿರುವಾಗ ಅವರು ಕೋಮುವಾದಿ ಸಂಘಟನೆಯನ್ನು ಮತ್ತು ಆರ್‍ಎಸ್‍ಎಸ್ ಬೆಂಬಲಿತ ಬಿಜೆಪಿ ಯಂತಹ ಕೋಮುವಾದಿ ಪಕ್ಷಕ್ಕೆ ಸೇರಲು ಅವರು ಬಯಸಿದ್ದರು ಎಂದು ಜೇಡಿಎಸ್ ಪಕ್ಷದ ಮುಖಂಡರಾದ ದೋಡ್ಡಪ್ಪಗೌಡರ ಹೇಳಿಕೆ ಆಶಾಸ್ಪದವಾಗಿದೆ.

Contact Your\'s Advertisement; 9902492681

ಬಿಜೆಪಿಯಿಂದ ಆಹ್ವಾನ ಬಂದದ್ದು ನಿಜ ಆದ್ರೆ ನಮ್ಮ ನಾಯಕರು ಇದಕ್ಕೆ ಸ್ಪಂದಿಸಿಲ್ಲ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಿಸ್ತಿನ ಸಿಪಾಯಿಗಳು ಯಂದೆ ಧರ್ಮಸಿಂಗ್ ಸಾಹೇಬರು ಹಾಗೂ ಅವರ ಕಾರ್ಯಕರ್ತರು ಮೂರು ಬಾರಿ ಗೇಲ್ಲುವ ಮುಲಕ ಹ್ಯಾಟ್ರಿಕ್ ವಿಜಯ ಸಾಧಿಸಿದ ನಮ್ಮ ನಾಯಕ ಡಾ: ಅಜಯ್ ಸಿಂಗ್ ಸಾಹೇಬರು ಯಂದು ಪಕ್ಷ ದ್ರೋಹ ಮಾಡುವಂತವರಲ್ಲ ಚುನಾವಣೆ ಸಂದರ್ಭದಲ್ಲಿ ದೋಡ್ಡಪ್ಪ ಗೌಡರ ಕಾರ್ಯಕರ್ತರು ಬಿಜೆಪಿಯ ಬಾಹೂಟಗಳನ್ನು ಸುಟ್ಟುಹಾಕಿ ಪ್ರತಿಭಟಿಸಿದರು.

ಆದರೆ ಚುನಾವಣೆ ಸಂದರ್ಭದಲ್ಲಿ ಜಾತ್ಯಾತೀತ ಸಿದ್ದಾಂತ ಬಗ್ಗೆ ಮಾತಾಡಿ ಮೈನಾರಿಟಿ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಸಂತುಷ್ಟರಾದ ದೋಡ್ಡಪಗೌಡರ ಮುಂದಿನ ನಡೆ ಏನು? ಯಾಕೆ ಅಂದ್ರೆ ಜೇಡಿಎಸ್ ಪಕ್ಷ ಕೋಮುವಾದಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ನಿಮ್ಮ ನಡೆ ಬಗ್ಗೆ ಕ್ಷೇತ್ರದ ಜನರು ಹಾಡಿಕೋಳುತಿದ್ದಾರೆ ನಿಮ್ಮನ್ನು ನಂಬಿದ ಕಾರ್ಯಕರ್ತರಿಗೆ ಏನು ಉತ್ತರ ಕೋಡುವಿರಿ ಅದ್ದನು ಯೋಚಿಸಿ ಆಮೇಲೆ ಅಜಯ್ ಸಿಂಗ್ ರ ಬಗ್ಗೆ ಮಾತಾಡಿ ಗೌಡ್ರೆ ಎಂದು ಪ್ರಕಟಣೆಯ ಮೂಲಕ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here