ಸಿಸಿಐ ಕಾರ್ಖಾನೆಗೆ ಮರು ಜೀವ ನೀಡಲು ಸಂಸದ ಜಾಧವ್ ಕೇಂದ್ರ ಸಚಿವರಿಗೆ ಮನವಿ

0
235

ಕಲಬುರಗಿ: CCI ಕುರ್ಕುಂಟಾ ಕಾರ್ಖಾನೆಯಲ್ಲಿ ಈಗಾಗಲೇ ಸರ್ಕಾರದ ಹೂಡಿಕೆಯನ್ನು ಹಿಂಪಡೆದು ಅದನ್ನು ಪೂರ್ಣವಾಗಿ ನಿರಸ್ತಗೊಳಿಸುವ ಕಾಮಗಾರಿ ಭರದಲ್ಲಿ ಸಾಗುತ್ತಿದೆ ಅದಕ್ಕೆ ಶೀಘ್ರದಲ್ಲಿ ಈ ಕಾರ್ಯವನ್ನು ಮುಕ್ತಾಯಗೊಳಿಸಿ ಹೊಸ ಉದ್ದಿಮೆದಾರರಿಗೆ ಈ ಕಾರ್ಖಾನೆಯನ್ನು ಪುನಃ ಸ್ಥಾಪನೆ ಗೊಳಿಸಲು ಆಹ್ವಾನಿಸಬೇಕೆಂದು ಗುರುವಾರ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ನವ ದೆಹಲಿಯಲ್ಲಿ ಕೇಂದ್ರದ ಹಣಕಾಸಿನ ರಾಜ್ಯ ಸಚಿವರಾದ ಭಗವತ್ ಕರಾಡ ಭೇಟಿ ನೀಡಿ ಮನವಿ ಮಾಡಿದರು.

ಸರ್ಕಾರ ಹಾಗೂ ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡಗೆ ಅವರ ಕೋರಿಕೆಯ ಮೇರೆಗೆ, ಸಿಸಿಐ ಕೂರ್ಕುಂಟ ಸಿಮೆಂಟ್ ಕಾರ್ಖಾನೆಯಲ್ಲಿನ್ ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಹೂಡಿಕೆಯನ್ನು  ಒಂದು ದಶಕ ಮೇಲೆ ಸಮಯ ಕಳೆದು ಹೋಗಿತ್ತು ಆದರೆ ಇದರ ಬಗ್ಗೆ ಯಾರು ಕೂಡ ಗಮನಹರಿಸಿರಲಿಲ್ಲ, ಸಂಸದ ತಕ್ಷಣ ನನ್ನ ಮೊಟ್ಟಮೊದಲನೆಯ ಲೋಕಸಭೆಯಲ್ಲಿ ಬೇಡಿಕೆಟ್ಟಿದ್ದು ಸಿಸಿಐ ಕುರುಕುಂಟ ಕಾರ್ಖಾನೆಯನ್ನು ಮರು ಜೀವ ಆಗಬೇಕು, ಇದೇ ಜಾಗದಲ್ಲಿ ಮತ್ತೊಂದು ಸಿಮೆಂಟ್ ಕಾರ್ಖಾನೆ ಮರು ಸ್ಥಾಪನೆ ಆಗಬೇಕೆಂದು ಸತ್ತಾವತವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆ. ಅದರ ಫಲ ಸ್ವರೂಪ ಈಗಾಗಲೇ ಈ ಕಾರ್ಖಾನೆಯನ್ನು ಸಂಪೂರ್ಣವಾಗಿ ನಿಷ್ತ್ರೀಯಗೊಳಿಸುವ ಕೆಲಸ ಭರದಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕೆಲಸವನ್ನು ಅತಿ ಶೀಘ್ರದಲ್ಲಿ ಮುಗಿಸಿ ಇಲ್ಲಿ ಮತ್ತೊಂದು ಕಾರ್ಖಾನೆ ಸ್ಥಾಪನೆ ಆಗಬೇಕೆಂದು ಏಕೆಂದರೆ ಇಲ್ಲಿ ಸುಣ್ಣದ ಕಲ್ಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದು ಇಲ್ಲಿ ಮತ್ತೊಂದು ಸಿಮೆಂಟ್ ಕಾರ್ಖಾನೆ ಸ್ಥಾಪನೆಗೊಳ್ಳಬೇಕೆಂದು ಈ ಭಾಗದ ಜನರ ಆಸೆಯಾಗಿದೆ. ಇಲ್ಲಿ ಮತ್ತೊಮ್ಮೆ ಸಿಮೆಂಟ್ ಕಾರ್ಖಾನೆ ಪ್ರಾರಂಭಗೊಂಡರೆ ಸುಮಾರು 20000 ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜನರಿಗೆ ಉದ್ಯಮ ಸಿಗಲಿದೆ ಎಂದು ಸಚಿವರರಲ್ಲಿ ಮನವಿ ಮಾಡಿದಿನಿ ಎಂದು ಸಂಸದರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯೋಗದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ವಿಠಲ್ ಜಾಧವ ಹಾಗೂ ಘೇಮು ರಾಠೋಡ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here