ಕಲಬುರಗಿ: ತಂತ್ರಜ್ಞಾನ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಮತ್ತು ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು. ಪ್ರಸ್ತುತ ಸಮಾಜದಲ್ಲಿ ನಾವು ಸ್ವಾಲಂಭಿಯಾಗಿ ಸ್ವಯಂ ಉದ್ಯೋಗ ಮಾಡುವುದು ಮುಖ್ಯ ಎಂದು ಸರಣಿ ಉದ್ಯಮಿ ಸಂತೋಷ್ ಕುಮಾರ ಎಂ. ಜಾವಳಿ ಅವರು ಹೇಳಿದರು.
ಹೈದ್ರಬಾದಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಲಿಂಕಡಿನ್ ಪೆÇ್ರಫೈಲ್ ಬಿಲ್ಡಿಂಗ್ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಂದುವರೆದುನಾವು ಸ್ವಾಲಂಭಿಯಾಗಿ ಸಮಾಜದಲ್ಲಿ ಉದ್ಯೋಗ ಅವಕಾಶಗಳನ್ನುಶೃಷ್ಟಿಸಬಹುದು ಆಧುನಿಕ ಜಗತ್ತಿನಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಅವಕಾಶಗಳು ಸಮಾಜದ ಜನಸಂಖ್ಯೆಯ ಅನುಗುಣವಾಗಿ ಇಲ್ಲಾ. ಇಂಥ ಪರಿಸ್ಥಿತಿಯಲ್ಲಿ ಸ್ವಯಂ ಉದ್ಯೋಗ ಮಾಡುವುದು ಅನಿವಾರ್ಯ ಮತ್ತು ನಾವು ಸ್ವಾಲಂಭಿಯಾಗುವುದರಿಂದ ಸಮಾಜದಲ್ಲಿ ಉದ್ಯೋಗ ಅವಕಾಶಗಳನ್ನು ಶೃಷ್ಟಿಸಬಹುದು ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ತಂತ್ರಜ್ಞಾನ ಜೀವನವನ್ನು ಸುಲಭವಾಗಿಸುವಾದಲ್ಲದೆಅಭಿರುದ್ಧಿಸುತ್ತದೆಯಂದುಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಆದ ಆಕಾಶ ಟೋಣಶಲ್ಲಿ ಹೇಳಿದರು. ಈ ಸಂದರ್ಭದಲ್ಲಿ ವಿ. ಜಿ. ಮಹಿಳಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಮತ್ತು ಡಿಜಿಷೇರ ಟೆಕ್ನೊಲೋಜಿ ನಡುವೆ ಒಡಂಬಡಿಕೆ ಒಪ್ಪಂದವನ್ನು ಮಾಡಿಕೊಂಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಬಿ. ಕೊಂಡ ಅವರು ಮಾತನಾಡಿ, ಸಮಾಜದ ಏಳಿಗೆಗಾಗಿ ಸ್ವಯಂ ಉದ್ಯೋಗ ಸ್ಥಾಪಿಸಿಕೊಂಡು ವಾಣಿಜ್ಯೋದಮಿಯಾಗುವುದು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಾಗಾರದ ಸಂಯೋಜಕರು ಆದ ಉಮಾ ರೇವೂರ್ ಅವರು ಮುಖ್ಯ ಅತಿಥಿಗಳು ಹಾಗೂ ಸಭೆಯಲ್ಲಿಉಪಸ್ಥಿರಿದ್ದವರನ್ನುಸ್ವಾಗತಿಸಿದರು. ಶ್ವೇತ ಕೋಟೆ ಮುಖ್ಯ ಅತಿಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಪರಿಚಯಮಾಡಿಕೊಟ್ಟರು. ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೆತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯರ್ಥಿಯಾದ ಕು.ಸಾಕ್ಷಿ ಪಾಟೀಲ ಪ್ರಾರ್ಥನೆ ಗೀತೆಯನ್ನು ಹಾಡಿದರು. ಡಾ.ಸ್ವಪ್ನಾಶೇರಿಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಮಿಳಾ ತೋರಣ ವಂದಿಸಿದರು.