ಸುರಪುರ: ತಾಲೂಕಿನ ಖಾನಾಪುರ ಎಸ್.ಹೆಚ್ (ರುಕ್ಮಾಪುರ) ಗ್ರಾಮ ಪಂಚಾಯತಿಯಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ|| ಆರ್.ವಿ.ನಾಯಕ ಕಾರ್ಯಕ್ರಮದ ಕುರಿತು ಮಾತನಾಡಿ,ಆಯುಷ್ಮಾನ್ ಭವ ಕಾರ್ಯಕ್ರಮವು ಸಪೆಂಬರ್ 20 ರಿಂದ ಅಕ್ಟೋಬರ್ 02ರ ವರೆಗೆ ನಡೆಯುತ್ತಿದ್ದು, ಇಂದು ವಿಶೇಷವಾಗಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಪಂಚಾಯತ ಇಲಾಖೆಯ ಸಾಮೂಹಿಕವಾಗಿ ಎಲ್ಲಾ ಗ್ರಾಮ ಪಂಚಾಯತನಲ್ಲಿ ಮಾಡುತ್ತಿದ್ದಾರೆ.
ಈ ಯೋಜನೆಯ ಮೂಲ ಉದ್ದೇಶ ಎಂದರೆ,ಎಲ್ಲಾ ಸಾರ್ವಜನಿಕರಿಗೆ ಆಭಾ ಕಾರ್ಡ ಐ.ಡಿ. ರಚನೆ ಮತ್ತು ಕಾರ್ಡ ನೀಡುವುದಾಗಿದ್ದು. ಆಯುಷ್ಮಾನ ಭಾತರ ಕಾರ್ಡ ನೀಡುವುದು, 30 ವರ್ಷಗಳ ಮೇಲ್ಪಟ್ಟವರಿಗೆ ಬಿ.ಪಿ. ಮತ್ತು ಶುಗರ್, ತಪಾಷಣೆ ಮಾಡುವುದು,ಕ್ಷಯ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಷಣೆ ಮಾಡುವುದು.ಎನ.ಜಿ.ಓ. ರವರಿಂದ ರಕ್ತ ಸಂಗ್ರಹ ಕ್ಯಾಂಪ ಮಾಡಲಾಗುವುದು.ಸ್ವಚ್ಛ ಭಾತರ ಕಾರ್ಯಕಮ್ರದ ಬಗ್ಗೆ ಅರಿವು ಮೂಡಿಸುವುದು ಮತ್ತು ಸಾಂಕ್ರಾಮಿಕ ರೋಗಳಿಂದ ದೂರು ಇರುವ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಇದು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಆಭಾ ಕಾರ್ಡನಿಂದ ಸರ್ಕಾರದಿಂದ ಇರುವ ಆರೋಗ್ಯ ಸೌಲಭ್ಯದ ಬಗ್ಗೆ ಸಾರ್ವಜರ್ನಿಕರಿಗೆ ತಿಳಿಸುವುದಾಗಿದೆ. ಬಿ.ಪಿ.ಎಲ್ ಕಾರ್ಡ ಇರುವವರಿಗೆ 5ಲಕ್ಷದ ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಮತ್ತು ಸದರಿ ಆಭಾ ಕಾರ್ಡ ಪಡೆಯಲು ಪಡಿತರ ಚೀಟಿ ಮತ್ತು ಆಧಾರ ಕಾರ್ಡ ಹಾಜರುಪಡಿಸಬೇಕು. ಈ ಯೋಜನೆ ಅಡಿಯಲ್ಲಿ ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಷಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮತ್ತು ತುರ್ತು ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ನೀಡಲಾಗುತ್ತದೆ. ಇಲ್ಲದಿದ್ದರೆ ಈ ಯೋಜನೆಯ ನೊಂದಾಯಿತ ಖಾಸಗಿ ಆಸ್ಪತ್ರೆಗೆ ರೇಫರಲ್ ಮಾಡಿ ಚಿಕಿತ್ಸೆ ಪಡೆಯಬಹುದು ಹಾಗೂ ತುರ್ತು ಚಿಕಿತ್ಸೆಗಳಿಗೆ ಯಾವುದೇ ರೇಫರಲ್ ಇಲ್ಲದೇ ನೇರವಾಗಿ ನೊಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಮುಖ್ಯವಾಗಿ ಸ್ವಚ್ಛ ಭಾತರ ಕಾರ್ಯಕಮ್ರದ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಸಾಂಕ್ರಾಮಿಕ ರೋಗಗಳಾದ ವಾಂತಿ, ಬೇಧಿ, ಚಿಕನ್ ಗೂನ್ಯಾ, ಡೆಂಗ್ಯೂ, ಮಲೇರಿಯಂತ ರೋಗಗಳು ಬಾರದಂತೆ ನೋಡಿಕೊಳ್ಳುವಂತೆ ತಿಳಿಸುವುದಾಗಿದೆ ಎಂದರು.
ಖಾನಾಪುರ ಎಸ್.ಹೆಚ್(ರುಕ್ಮಾಪುರ) ಗ್ರಾ.ಪಂ. ಅಧ್ಯಕ್ಷರಾದ ನಿಂಗಪ್ಪ ಕವಡಿಮಟ್ಟಿ, ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು, ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿಗಳು, ಮತ್ತು ಉಪ ಕೇಂದ್ರ ರುಕ್ಮಾಪುರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಸವಿತಾ, ಆರೋಗ್ಯ ನಿರಿಕ್ಷಣಾಧಿಕಾರಿ ಸಂತೋಷ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಾಲಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮಹಿಳಾ ಮೇಲ್ವಿಚಾರಕರಾದ ಶಶಿಕಲಾ ಗಾಳಿ ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.