ಸಂಗೀತ ಕ್ಷೇತ್ರದಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ಲತಾ ಮಂಗೇಶಕರ

0
348

ಕಲಬುರಗಿ: ಅತ್ಯಂತ ಕಡುಬಡತನದಲ್ಲಿ ಜನಿಸಿದ ಲತಾ ಸಣ್ಣ ವಯಸ್ಸಿನಲ್ಲೆ ಕುಟುಂಬದ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡು ಸ್ವರ, ಲಯ, ತಾಳ ಕಲಿತುಕೊಂಡು ಅವುಗಳೊಂದಿಗೆ ಬೆರೆತು ಅನೇಕ ಪ್ರಶಸ್ತಿ, ಬಿರುದುಗಳ ಸರಮಾಲೆಗಳಿಂದ 36ಕ್ಕಿಂತ ಹೆಚ್ಚು ಭಾಷೆಗಳಲ್ಲಿ 1000ಸಾವಿರ ಚಲಚಿತ್ರದ ಹಿನ್ನೆಲೆ ಗಾಯಕಿಯಾಗಿ ಹಾಡಿ, ಇಡಿ ದೇಶದಲ್ಲೆ ಸಂಗೀತ ಸಾರಸತ್ವ ಲೋಕದಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದವರು ಮಂಗೇಶಕರ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರೇಖಾ ಅಂಡಗಿ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

ಶನಿವಾರ ಸಾಯಂಕಾಲ 6ಗಂಟೆಗೆ ಕನ್ನಡ ಭವನದಲ್ಲಿ ಹೈದ್ರಾಬಾದ ಕರ್ನಾಟಕ ಮಿನುಗುತಾರೆ ಮಹಿಳಾ ಕಲಾವಿದರ ಸ್ವ-ಸಹಾಯ ಸಂಘದ ವತಿಯಿಂದ ಭಾರತ ರತ್ನ ಲತಾಮಂಗೇಶಕರ್ ಅವರ ಜನ್ಮದಿನ ಪ್ರಯುಕ್ತ ಸಂಗೀತ ಮತ್ತು ಸಂಸ್ಕøತಿಕ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸುರೇಶ ಬಡಿಗೇರ ಅವರು ಮಾತನಾಡುತ್ತ ಮಾನಸಿಕ ನೆಮ್ಮದಿಗೆ ಸಂಗೀತಕ್ಕಿಂತ ಬೇರೆ ಔಷಧಿ ಮತ್ತೊಂದಿಲ್ಲ, ಸಂಗೀತ ಮನುಷ್ಯನ ಅಸಮಧಾನ, ದುಗುಡ, ದುಮ್ಮಾನ, ಚಿಂತೆ ಹೋಗಲಾಡಿಸಿ ಆನಂದಸಾಗರದಲ್ಲಿ ತೇಲಾಡುವಂತೆ ಮಾಡುವ ಒಂದು ಸಾಧನವೇ ಸಂಗೀತ ಕಲೆ ಎಂದು ಮಾತನಾಡಿದರು.

Contact Your\'s Advertisement; 9902492681

ಹಿರಿಯ ಕಲಾವಿದರಾದ ಬಾಬುರಾವ ಕೋಬಾಳ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರಾದ ಶ್ರೀಮತಿ ವಿಜಯಲಕ್ಷಿ ಹೀರೆಮಠ, ಎಸ್.ವಿ. ಕೇಜಿ ಸಂಘದ ಸದಸ್ಯರಾದ ಶ್ರಿಮತಿ ಮಧು ಠಾಕೂರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಹಿರಯ ಕಲಾವಿದರಾದ ಎಂ.ಜಿ.ಘನಾತೆ ಹಾಗು ಕಲ್ಪನಾ ಗೋಲ್ಡಸ್ಮಿತ್ ಅವರು ಮಿನುಗುತಾರೆ ಮಹಿಳಾ ಕಲಾವಿದರ ಸಂಘದ ಕಲಾವಿದರಾದ ಮಧು ಠಾಕೂರ್, ಮಮತಾ ಜೋಶಿ, ಸುಜಾತ ಸ್ವಾಮಿ, ಶಶಿರೇಖಾ, ಪ್ರೀಯಾಂಕಾ, ನಿಲಮ್ಮ, ಶೃಂಗಾರಕಾವ್ಯ ಇವರೆಲ್ಲರಿಗು ಅವರವರ ಭಾವಚಿತ್ರದ ಫ್ರೇಮಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ನಂತರ ಎಲ್ಲಾ ಕಲಾವಿದರು ಲತಾಮಂಗೇಶಕರ ಅವರ ಹಾಡುಗಳನ್ನು ಹಾಡಿ ಮಕ್ಕಳೊಂದಿಗೆ ಅವರ ಜನ್ಮದಿನ ಆಚರಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕಾಳಗಿ ತಾಲೂಕಿನ ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ, ಜಿಲ್ಲಾ ಪದಾಧಿಕಾರಿಗಳಾದ ವಿನೋದಕುಮಾರ ಜೆನೇವರಿ, ರಾಜೇಂದ್ರ ಮಾಡಬೂಳ, ಬಸವಂತರಾಯ ಕೋಳಕೂರ, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಎಸ್.ಎಂ. ಪಟ್ಟಣಕರ ಹಾಗೂ ಹಿರಿಯರಾದ ಮಲ್ಲಿನಾಥ ದೇಶಮುಖ, ಉಮೇಶ ಪಾಣೆಗಾಂವ, ಬಸಯ್ಯ ಗುತ್ತೇದಾರ, ಸಿದ್ದರಾಮ ಹಂಚಿನಾಳ, ವಿಶ್ವನಾಥ ತೊಟನಳ್ಳಿ, ನಾಗನಾಥ ಯಳಸಂಗಿ, ಅನಂತ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here