ಭಾರತದ ನವೋದಯದ ಮಹಾನ್ ಚೇತನ: ಈಶ್ವರಚಂದ್ರ ವಿದ್ಯಾಸಾಗರ

0
19

ಶಹಾಬಾದ: ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಿದರೆ ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರಿತು ಕೇವಲ ಮೂರು ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದು ಸಮಾಜದಲ್ಲಿದ್ದ ಅಂಧಕಾರವನ್ನು ಹೊಡೆದೋಡಿಸಲು ಮುಂದಾದವರು ಈಶ್ವರಚಂದ್ರ ವಿದ್ಯಾಸಾಗರಅಂಜುಮನ್ ಕಾಲೇಜಿನ್ ಪ್ರಾಂಶುಪಾಲ ಪೀರಪಾಶಾ ಹೇಳಿದರು.

ಅವರು ನಗರದ ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಎಐಡಿವೈಓ ವತಿಯಿಂದ ಆಯೋಜಿಸಲಾದ ಮಹಾನ್ ಮಾನವತವಾದಿ ಈಶ್ವರಚಂದ್ರ ವಿಧ್ಯಾಸಾಗರ ಅವರ 203 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾಸಾಗರ ಅವರು ತನ್ನ ಮಗನಿಗೆ ವಿಧವೆಯ ಜೊತೆ ಮದುವೆ ಮಾಡಿಸುವ ಮೂಲಕ ವಿಧವಾ ವಿವಾಹವನ್ನು ಪ್ರೇರೇಪಿಸಿದ ಮಹಾನ್ ವ್ಯಕ್ತಿ. ಈ ಯುಗದ ಯಾವುದೇ ಅಕ್ಷರಸ್ಥ ಸ್ತ್ರೀ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲೆ ಬೇಕಾದ ಧೀಮಂತ ವ್ಯಕ್ತಿ ವಿದ್ಯಾಸಾಗರ್.
ಎ.ಐ.ಎಸ್.ಇ.ಸಿ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪೂರ, ತಮ್ಮ ಸಮಕಾಲೀನ ಪ್ರಮುಖ ವ್ಯಕ್ತಿಗಳೆಲ್ಲರಿಂದಲೂ ಗೌರವ, ಪ್ರಶಂಸೆ ಗಳಿಸಿಕೊಂಡವರು ವಿದ್ಯಾಸಾಗರರು. ಶತ ಶತಮಾನಗಳ ಹಳೆ ಸಂಪ್ರದಾಯ ವಿಚಾರಗಳ ಗಾಡಾಂಧಕಾರದಲ್ಲಿ ‘ಭಾರತ ನವೋದಯದ ಧರ್ಮಾತೀತ ಮಾನವತಾವಾದಿ ವ್ಯಕ್ತಿತ್ವವಾಗಿ ಹೊರಹೊಮ್ಮಿದ ಯುಗಪುರುಷ’.ಇವರು ‘ಧಾರ್ಮಿಕ ಮನೋಭಾವನೆಯನ್ನು ಚಳುವಳಿಯಿಂದ ದೂರ ಉಳಿಸಿದರು’. ಈ ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವತಾವಾದದ ಚಳುವಳಿಯನ್ನು ಸಾಧ್ಯವಾದಷ್ಟು ವಿಜ್ಞಾನ, ಇತಿಹಾಸ ಹಾಗೂ ತರ್ಕದ ಆಧಾರದ ಮೇಲೆ ಬೆಳೆಸಲು ತುಂಬಾ ಪ್ರಯತ್ನಪಟ್ಟು, ಆಧುನಿಕ ಶಿಕ್ಷಣದ ಭದ್ರ ಬುನಾದಿ ಹಾಕಿದರು. ಈ ಹಾದಿ ತುಳಿದಿದ್ದರಿಂದಲೇ ನವೋದಯದ ರಾಜಿ ರಹಿತ ಪಂಥದ ಹರಿಕಾರರಾದರು ಎಂದರು.

ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್,ಹೆಚ್, ಶತಮಾನಗಳಿಂದ ಧರ್ಮದ ಹೆಸರಿನಲ್ಲಿ ಪೆÇೀಷಿಸಿಕೊಂಡು ಬಂದಿದ್ದ ಕಂದಾಚಾರಗಳು ಹಾಗೂ ಗೊಡ್ದು ಸಂಪ್ರದಾಯಗಳಿಗೆ ಬಲಿಯಾಗಿ ಬಾಲ್ಯವಿವಾಹ, ಬಹುಪತ್ನಿತ್ವ ಪದ್ಧತಿಯಿಂದ ಬಾಲ ವಿಧವೆಯರ ಸಂಖ್ಯೆ ಹೆಚ್ಚಾಯಿತು. ವಿಧವಾ ಪುನರ್ ವಿವಾಹವನ್ನು ಸಮಾಜ ಅಂಗೀಕರಿಸುವ ಹಾಗೂ ಬೆಂಬಲಿಸುವ ಶಾಸ್ತ್ರದ ಮೊರೆ ಹೋಗಿ ಶಾಸನವನ್ನು ರೂಪಿಸಲು ಕಾರಣಕರ್ತರಾದರು.

ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಿದರೆ ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರಿತು ಕೇವಲ ಮೂರು ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆಯುವುದರ ಮೂಲಕ ಎಂದು ಅಂಧಶ್ರದ್ಧೆಗಳ ಶೋಷಣೆಯಿಂದ ಮಹಿಳಾ ವಿಮುಕ್ತಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಿರೂಪಿಸಿದರು ಎಂದರು.

ಎಐಡಿವೈಓ ಕಾರ್ಯದರ್ಶಿ ರಮೇಶ ದೇವಕರ್,ಉಪನ್ಯಾಸಕ ವಿಜಯಕುಮಾರ ಹಾಬನೂರ ವೇದಿಕೆಯ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here