ಮನೂರ್ ಆಸ್ಪತ್ರೆಯಿಂದ ಗಾಂಧಿ ಜಯಂತಿ ನಿಮಿತ್ತ ಕಾರಾಗೃಹದ ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ

0
205

ಕಲಬುರಗಿ; ಕೇಂದ್ರ ಕಾರಾಗೃಹದಲ್ಲಿ ಮಹತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಮನೂರ್ ಮಲ್ಟಿ ಸ್ಪೇಶಾಲಿಟಿ ವತಿಯಿಂದ ಕಾರಾಗೃಹದ ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ ಲೋಕ ಶಿಕ್ಷಣ ಇಲಾಖೆ ಕಲಬುರಗಿ ವತಿಯಿಂದ ನವ ಸಾಕ್ಷರಾದ ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅತಿಥಿಗಳಾಗಿ ಆಗಮಿಸಿದ ಈ ಕಾರ್ಯಕ್ರಮಕ್ಕೆ ಮನೂರ್ ಮಲ್ಟಿ ಸ್ಪೇಶಾಲಿಟಿ ಕಲಬುರಗಿ ವತಿಯಿಂದ ಡಾ|| ಮೂಸ್‍ಮ್ ಮಿಲ್, ತೀವ್ರ ನಿಗಾ ಘಟಕದ ರವರು ಮಾತನಾಡುತ್ತಾ, ನಮ್ಮ ಆಸ್ಪತ್ರೆಯಾದ ಮಲ್ಟಿ ಸ್ಪೇಶಾಲಿಟಿ ವತಿಯಿಂದ ಆಗಮಿಸಿದ ನಮ್ಮ ವೈದ್ಯರ ತಂಡ ಕಾರಾಗೃಹದಲ್ಲಿರುವ ಬಂದಿಗಳಿಗೆ ಉಚಿತವಾಗಿ ಆರೋಗ್ಯ ಶಿಬಿರದ ಅಡಿಯಲ್ಲಿ ಹೃದ್ರೋಗ, ಬಿ.ಪಿ ಶೂಗರ್ ಇನ್ನೀತರೇ ಕಾಯಿಲೆಗಳ ತಪಾಸಣೆಯನ್ನು ನಡೆಸಲಾಗುವುದು. ಆದಕಾರಣ ತಾವುಗಳು ಇದರ ಲಾಭವನ್ನು ಪಡೆದುಕೊಂಡು ಉತ್ತಮವಾದ ಚಿಕಿತ್ಸೆ ಹಾಗೂ ಔಷದೋಪಚಾರಣಗಳನ್ನು ಪಡೆಯಲು ತಿಳಿಸಿದರು.

Contact Your\'s Advertisement; 9902492681

ಇನೋರ್ವ ಅತಿಥಿಗಳಾಗಿ ಆಗಮಿಸಿದ ಹೆಚ್.ಎಂ. ಹಂಚನಾಳ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಕಲಬುರಗಿರವರು ಮಾತನಾಡುತ್ತಾ, 2022-23 ನೇ ಸಾಲಿನಲ್ಲಿ 120 ಜನ ಅನಕ್ಷರಸ್ಥರು ಬಂದಿಗಳು ಮೌಲ್ಯಪಾಪನಕ್ಕೆ ಒಳಪಟ್ಟು 120 ಜನ ಬಂದಿಗಳು ನವಸಾಕ್ಷರಾದರು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥ ಬಂದಿಗಳು ಸಾಕ್ಷರತಾ ಕಾರ್ಯಕ್ರಮದಲ್ಲಿ ಹೆಸರು ನೊಂದಾಯಿಸಿ ತಾವುಗಳು ಕೂಡ ಸಾಕ್ಷರತೆಯನ್ನು ಹೊಂದಿ ಉತ್ತಮ ಜೀವನವನ್ನು ನಡೆಸಲು ತಿಳಿಸಿದರು.

ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಮುಖ್ಯಸ್ಥರಾದ ಡಾ|| ಪಿ. ರಂಗನಾಥ್ ರವರು ಮಹತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಭಾವ ಚಿತ್ರಗಳಿಗೆ ಪುಷ್ಪಾರ್ಚಣೆ ಮಾಡಿ ಮಾತನಾಡುತ್ತಾ, ಗಾಂಧಿಜಿಯವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬೇಕೆಂಬುದಾಗಿತ್ತು. ಆ ನಿಟ್ಟಿನಲ್ಲಿ ಇಂದು ಈ ಸಂಸ್ಥೆಯಲ್ಲಿ ಮನೂರ್ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ಕಲಬುರಗಿ ಇವರ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಾಗೂ ನವ ಸಾಕ್ಷರಾದ ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸಿದರು ಹಾಗೂ ಪ್ರತಿಯೊಬ್ಬ ಬಂದಿಗಳು ಉಚಿತ ಆರೋಗ್ಯ ಶಿಬಿರದ ಲಾಭವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಉಚಿತ ಆರೋಗ್ಯ ತಪಾಸಣೆಯ ಶಿಬಿರದ ಅಡಿಯಲ್ಲಿ ಇ.ಸಿ.ಜಿ 40 ಜನ ಪುರುಷ ಹಾಗೂ 9 ಜನ ಮಹಿಳಾ ಬಂದಿಗಳಿಗೆ ತಪಾಸಣೆ ಮಾಡಲಾಯಿತು. ಬಿ.ಪಿ ಶೂಗರ್ ಹಾಗೂ ಇನ್ನೀತರೇ 145 ಜನ ಪುರುಷ ಹಾಗೂ 17 ಜನ ಮಹಿಳಾ ಬಂದಿಗಳಿಗೆ ತಪಾಸಣೆ ಮಾಡಲಾಯಿತು. ಈ ಶಿಬಿರದಲ್ಲಿ ಒಟ್ಟು 185 ಪುರುಷ ಹಾಗೂ 26 ಮಹಿಳಾ ಬಂದಿಗಳು ಸೇರಿದಂತೆ ಒಟ್ಟು 211 ಜನ ಕಾರಾಗೃಹದ ಬಂದಿಗಳು ಲಾಭವನ್ನು ಪಡೆದರು.

ಈ ಕಾರ್ಯಕ್ರಮದಲ್ಲಿ ಬಿ.ಎಂ ಕೊಟ್ರೇಶ್, ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿ, ಡಾ|| ಆನಂದ ಅಡಗಿ, ವೈದ್ಯಾಧಿಕಾರಿಗಳು, ಡಾ|| ರವೀಂದ್ರÀ ಬನ್ನೇರ್, ವೈದ್ಯಾಧಿಕಾರಿಗಳು, ಡಾ|| ಅಣ್ಣಾರಾವ್ ಪಾಟೀಲ್, ಹುಸಾನಿ ಪೀರ್, ಸಹಾಯಕ ಅಧೀಕ್ಷಕರು ಹಾಗೂ ಎಲ್ಲಾ ಜೈಲರ್ ವೃಂದದವರು, ಮನೂರ್ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ|| ಜಗದೀಶ ಪಾಟೀಲ್, ಹೃದ್ರೋಹ ತಜ್ಞರು, ಡಾ|| ಶ್ರೀಕಾಂತ ಸಾಮಾನ್ಯ ವೈದ್ಯರು, ಡಾ|| ನಿಶಾತಾ ಕರ್ತವ್ಯ ವೈದ್ಯರು, ಇತರೇ ವೈದ್ಯಕೀಯ ತಂಡದವರು ಮತ್ತು ಇಸೂಫ್ ಪಟೇಲ್, ಉನ್ಯಾಸಕರು, ಕಮಲಾಪುರ ಡೈಯಿಟ್,  ಶಿವಾನಂದ ಚವ್ಹಾಣ ಜಿಲ್ಲಾ ಸಂಯೋಜಕರು ಉಪಸ್ಥಿತರಿದ್ದರು.

ಸ್ವಾಗತ ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹ ಕಲಬುರಗಿ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ ನಾಗಾರಾಜ ಮುಲಗೆ ನಿರೂಪಣೆ ಹಾಗೂ ವಂದಾರ್ಪಣೆಯನ್ನು ನೇರವೆರಿಸಿದರು. ಕಾರಾಗೃಹದ ಬಂದಿಗಳಿಂದ ಪ್ರಾರ್ಥನಾ ಗೀತೆಯನ್ನು ಹಾಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here