ರಂಗಂಪೇಟ :ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಕೆ-ಸೆಟ್ ಪರೀಕ್ಷಾ ತರಬೇತಿ

0
15

ಸುರಪುರ: ನಗರದ ರಂಗಂಪೇಟೆಯ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಸಮರ್ಥ ಎನ್‍ಇಟಿ ಕೆಸೆಟ್ ಅಕಾಡೆಮಿ ಕಲಬುರಗಿ ಹಾಗೂ ಮಹಾವಿದ್ಯಾಲಯದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ಎರಡು ದಿನಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಆರಂಭಿಸಲಾಯಿತು.

ಕಾರ್ಯಗಾರ ಉದ್ಘಾಟಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ್ ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಹಾಗೂ ಉನ್ನತವಾದ ಗುರಿ ಇರಬೇಕು ಆ ನಿಟ್ಟಿನಲ್ಲಿ ಗುರಿ ಸಾಧಿಸಲು ಶ್ರಮಪಟ್ಟು ಓದಬೇಕು ಆಗ ಮಾತ್ರ ಯಶಸ್ಸು ಸಿಗಲು ಖಂಡಿತ ಸಾಧ್ಯ ಎಂದರು.

Contact Your\'s Advertisement; 9902492681

ನೆಟ್ ಪರೀಕ್ಷೆ ತೇರ್ಗಡೆಯಾದವರು ದೇಶದ ಯಾವ ಕಡೆಯಾದರೂ ಪದವಿ ಕಾಲೇಜಿಗೆ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗುತ್ತಾರೆ ಅದೇ ರೀತಿಯಲ್ಲಿ ಕೆ-ಸ್ಲೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ನಮ್ಮ ರಾಜ್ಯದ ವಿಶ್ವವಿದ್ಯಾಲಯ ಹಾಗೂ ಸರಕಾರಿ,ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿಗೆ ಉಪನ್ಯಾಸಕ ಹುದ್ದೆಗೆ ನೇಮಕಗೊಳ್ಳಲು ಅರ್ಹರಾಗುತ್ತಾರೆ ಎಂದು ಹೇಳಿದರು.

ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನು ಸಂಸ್ಥೆಯ ವತಿಯಿಂದ ಪ್ರಾರಂಭಿಸಿದ ನಂತರ ಈ ಭಾಗದ ನೂರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಅನುಕೂಲವಾಗಿದೆ ಮುಂಬರುವ ದಿನಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳಲ್ಲಿ ಯಸಸ್ಸು ಗಳಿಸಲು ತರಬೇತಿ ನೀಡುತ್ತಿರುವುದು ಒಳ್ಳೆಯ ಕಾರ್ಯ ತರಬೇತಿಯ ಸದುಪಯೋಗ ಪಡೆಯುವ ಮೂಲಕ ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವಂತೆ ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಯಚೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಯೋಜಕರಾದ ಹಣಮಂತ ನಾಯಕ ಅವರು ಸಾಮಾನ್ಯ ಅಧ್ಯಯನ ಕಡ್ಡಾಯ ಪತ್ರಿಕೆ-1 ಕುರಿತು ತಿಳಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ತಿಪ್ಪೆರುದ್ರಪ್ಪ, ನಿಂಗಣ್ಣ ಹೆಗ್ಗನದೊಡ್ಡಿ, ದಿಗಂಬರ ಬಾಬರೆ ಇತರರು ವೇದಿಕೆಯಲ್ಲಿದ್ದರು. ಮಹೇಶಕುಮಾರ ಗಂಜಿ ನಿರೂಪಿಸಿದರು ಹಣಮಂತ್ರಾಯ ಭಜಂತ್ರಿ ಸ್ವಾಗತಿಸಿದರು. ಶಾಂತಪ್ಪ ಕಳಸರ ವಂದಿಸಿದರು. ಕಾರ್ಯಾಗಾರದಲ್ಲಿ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here